ಮಂಗಳೂರು:ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್​ಗಳಲ್ಲಿ ಅಶ್ವತ್ಥಪುರ ಶ್ರೀನಿವಾಸ ಗೌಡ(ಸೀನು) ಕ್ರಮಿಸುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ವಿುಸಿದ್ದಾರೆ.
ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯನ್ನು 13.62 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್​ಗೆ ಬದಲಾಯಿಸಿದರೆ 9.55 ಸೆಕೆಂಡ್​ಗಳಲ್ಲಿ ಓಡಿದಂತಾಗುತ್ತದೆ.
ಇಷ್ಟು ವೇಗದಲ್ಲಿ ಈವರೆಗೆ ಕಂಬಳ ಕರೆಯಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ವಿಶ್ವವಿಖ್ಯಾತ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಟ್ರ್ಯಾಕ್ ನಲ್ಲಿ 9.58 ಸೆಕೆಂಡ್​ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿ ರುವ ಶ್ರೀನಿವಾಸ ಗೌಡ ಮೀರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಆದರೆ, ಈ ಹೋಲಿಕೆ ಸರಿಯಲ್ಲ ಎಂದು ಕಂಬಳ ಕ್ಷೇತ್ರದ ಪರಿಣತರೇ ಹೇಳುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
