ಬಳ್ಳಾರಿ:ನೀವೇನೂ ಕನ್ಫ್ಯೂಷನ್ ಮಾಡಿಕೊಳ್ಳಬೇಡಿ… ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಹೀಗಂತ ಅವರು ಹೇಳೋಕು ಕಾರಣ ಇದೆ. ಬೆಂಗಳೂರಿನಲ್ಲಿ ಕೋವಿಡ್​ ನಿಯಂತ್ರಣ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಡಾ.ಕೆ. ಸುಧಾಕರ್ ಕ್ವಾರಂಟೈನ್​ನಲ್ಲಿದ್ದಾರೆ. ಹಾಗಾಗಿ ಅವರ ಜವಾಬ್ದಾರಿಯನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ, ಸಮಸ್ಯೆ ಬಗ್ಗೆ ಯಾರ ಬಳಿ ಹೇಳೋದು ಎಂದು ಇತ್ತೀಚೆಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಮಾಧ್ಯಮದ ಜತೆ ಮಾತನಾಡಿದ ಶ್ರೀರಾಮುಲು, ಹೀಗೆ ಹೇಳಿದ್ದಾರೆ ನೋಡಿ.
ಇದನ್ನೂ ಓದಿರಿಕ್ವಾರಂಟೈನ್​ನಲ್ಲಿರೋ ಸಚಿವರಿಗೆ ಕೋವಿಡ್​ ಆಸ್ಪತ್ರೆಯಿಂದ ತಡರಾತ್ರಿ ಬಂತೊಂದು ಉಡುಗೊರೆ!
ಬೆಂಗಳೂರನ್ನು ಇದುವರೆಗೆ ಡಾ.ಕೆ. ಸುಧಾಕರ್ ನೋಡಿಕೊಳ್ಳುತ್ತಿದ್ದರು. ಇಡೀ ರಾಜ್ಯವನ್ನು ನಾನು ನೋಡಿಕೊಳ್ತಿದ್ದೆ. ಈಗ ಸುಧಾಕರ್​ಗೆ ತೊಂದರೆ ಆಗಿದೆ. ಹಾಗಾಗಿ ಆರ್​. ಅಶೋಕ್ ನೋಡಿಕೊಳ್ತಿದ್ದಾರೆ ಎಂದು ಶ್ರೀರಾಮುಲು ವಿವರಿಸಿದ್ದಾರೆ.
ನಾವು ಕುಟುಂಬ ಇದ್ದಂತೆ. ನಮ್ಮ ನಾಯಕ ಯಡಿಯೂರಪ್ಪ. ಅವರ ನೇತತ್ವದಲ್ಲಿ ನಾವೆಲ್ಲ ಕೆಲಸ ಮಾಡ್ತಾ ಇದ್ದೇವೆ. ನಾನು ಪ್ರಾಮಾಣಿಕ ಕೆಲಸ ಮಾಡ್ತಿದ್ದೇನೆ. ಎಲ್ಲರೂ ಟೀಮ್ ಆಗಿ ಕೆಲಸ ಮಾಡಿದ್ರೆ ಅನೂಕೂಲ ಆಗುತ್ತೆ. ನಮ್ಮಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
