ಮಂಡ್ಯ:ಸನಾತನ ಧರ್ಮ ಮತ್ತು ದೇಶದ ಐಕ್ಯತೆ ಉಳುವಿಗೆ ಜೆಡಿಎಸ್​ ಮೈತ್ರಿ ಅನಿವಾರ್ಯವಾಗಿದೆ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಸುಭದ್ರ ನಾಯಕತ್ವಕ್ಕಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಬೇಕಿದೆ ಎಂದು ಶ್ರೀರಂಗಪಟ್ಟಣದ ಜೆಡಿಎಸ್​ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಮೈತ್ರಿ ಮಾಡಿಕೊಳ್ಳುವಂತೆ ನಾವೇ ದೇವೇಗೌಡರಿಗೆ ಒತ್ತಡ ಹಾಕಿದ್ದೇವೆ. ಸನಾತನ ಧರ್ಮ ವಿಚಾರವಾಗಿ ರಾಜ್ಯದ ಸಚಿವರ ಹೇಳಿಕೆಗಳು ಆತಂಕ ತರಿಸಿವೆ. ನಮ್ಮತನವನ್ನು ಬಿಟ್ಟುಕೊಡಬೇಕಾದ ಸ್ಥಿತಿ ಬಂದುಬಿಡುತ್ತೇನೋ ಎಂಬ ಆತಂಕ ಜನರನ್ನ ಆವರಿಸಿದೆ ಎಂದರು.
ಇದನ್ನೂ ಓದಿ:ಅಕ್ಕಿಯೋ, ಹಣವೋ ಸರ್ವೆ ಆರಂಭ: ಮನೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹ; ಸರ್ಕಾರಕ್ಕೆ ವರದಿ ಸಲ್ಲಿಸಲಿರುವ ಆಹಾರ ಇಲಾಖೆ
ದೇಶದ ಅಭಿವೃದ್ಧಿ ದೃಷ್ಟಿಯಿಂದ ನಾವು ಮೋದಿ ಬೆಂಬಲಿಸುವುದು ಸೂಕ್ತವಾಗಿದೆ. ಮೈತ್ರಿ ಬಗ್ಗೆ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರು ನಮ್ಮ ಸಲಹೆ ತೆಗೆದುಕೊಂಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ನಾವು NDAಗೆ ಸಪೋರ್ಟ್ ಮಾಡೋದು ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ಕ್ಷೇತ್ರ ಸೇರಿದಂತೆ 8 ರಿಂದ 10 ಕ್ಷೇತ್ರ ಬಿಟ್ಟುಕೊಡಲು ಕೇಳಿದ್ದೇವೆ. ನಮಗೆ ಎಲ್ಲಿ ಗೆಲ್ಲೋದಕ್ಕೆ ಸಾಧ್ಯವೋ ಅಲ್ಲಿ ಕ್ಷೇತ್ರ ಕೇಳಿದ್ದೇವೆ. ಅಂತಿಮವಾಗಿ ಸೀಟು ಹಂಚಿಕೆಯನ್ನು ಎರಡು ಪಕ್ಷದ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. ಕಾಂಗ್ರೆಸ್ ಪಕ್ಷ ಒಂದು ತೀರ್ಮಾನ ತೆಗೆದುಕೊಂಡ್ರೆ ಕಾರ್ಯಕರ್ತರು ಮತ್ತೊಂದು ತೀರ್ಮಾನ ತೆಗೆದುಕೊಂಡ್ರು. ಕಾಂಗ್ರೆಸ್ ನಾಯಕತ್ವದಲ್ಲಿ ಬಿಗಿ ಇಲ್ಲ. ಅದಕ್ಕಾಗಿ ದೇಶದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ ಎಂದು ತಿಳಿಸಿದರು.
ಜೆಡಿಎಸ್-ಬಿಜೆಪಿ ಬಿಜೆಪಿ ಮೈತ್ರಿ ಆಗದಿದ್ರೂ ಸುಮಲತಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರಲಿಲ್ಲ. ಸುಮಲತಾ ಅವರಿಗೆ ಹಳ್ಳಿಗಳಿಗೆ ಹೋಗಿ ಮತಯಾಚನೆ ಮಾಡುವುದು ಸುಲಭವಲ್ಲ. ಏಕೆಂದರೆ, ಅಭಿವೃದ್ಧಿಯಲ್ಲಿ ಸುಮಲತಾ ಕೊಡುಗೆ ಶೂನ್ಯವಾಗಿದೆ. ಜನರ ಸಂಪರ್ಕದಲ್ಲಿ ಇಲ್ಲದ ಸಂಸದರು ಎನಿಸಿಕೊಂಡಿದ್ದಾರೆ. ಮಂಡ್ಯ ಡಿಸಿ ಆಫೀಸ್, ಜಿಲ್ಲಾ ಪಂಚಾಯಿತಿ ಆಫೀಸ್​ಗೆ ಸೀಮಿತವಾಗಿದ್ದಾರೆ. ಸುಮಲತಾ ಅವರು ಜನರ ಕೈಗೆ ಸಿಗಿಲಿಲ್ಲ ಎಂಬ ಆಕ್ರೋಶ ಇಡೀ ಜಿಲ್ಲೆಯಲ್ಲಿದೆ. ಕಾವೇರಿ ವಿಚಾರದಲ್ಲೂ ರೈತರು ಹಾಗೂ ಜನ ಸಾಮಾನ್ಯರ ಜೊತೆ ಹೋರಾಟ ಮಾಡಲಿಲ್ಲ. ಅದನ್ನ ಬಿಟ್ಟು ಅವರ ಮುಖಂಡರ ಜೊತೆಗೆ ಬಂದು ಹೋದರು ಅಷ್ಟೇ. ಸಂಸದೆಯಾಗಿ ಅವರು ಮಾಡಬೇಕಿದ್ದ ಜವಾಬ್ದಾರಿ ಮಾಡಲಿಲ್ಲ ಎಂದರು.
ಇದನ್ನೂ ಓದಿ:ಮೊರಾಕ್ಕೋ ಭೀಕರ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 2000ಕ್ಕೆ ಏರಿಕೆ: ಕಂಬನಿ ಮಿಡಿದ ಜಗತ್ತು, ನೆರವಿನ ಮಹಾಪೂರ
ಮೈತ್ರಿಯಾದ್ರೆ ಸುಮಲತಾ ಅವರು ಜೆಡಿಎಸ್ ಬೆಂಬಲಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರವೀಂದ್ರ ಶ್ರೀಕಂಠಯ್ಯ, ಅದನ್ನು ಬಿಜೆಪಿ ಉತ್ತರಿಸಬೇಕು. ನಾವು ಮೈತ್ರಿ ಆಗೋದು ಬಿಜೆಪಿ ಜೊತೆಗೆ ಹೊರತು ವ್ಯಕ್ತಿಯ ಜೊತೆಗೆ ಅಲ್ಲ ಎನ್ನುವ ಮೂಲಕ ಸುಮಲತಾಗೆ ಟಾಂಗ್​ ನೀಡಿದರು.
ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಹಾಗೂ ಸಂಸದ ಗೌತಮ್ ಗಂಭೀರ್​ಗೆ ಬಡ್ತಿ ನೀಡಿದ ಲಖನೌ ಫ್ರಾಂಚೈಸಿ

ಮೊರಾಕ್ಕೋ ಭೀಕರ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 2000ಕ್ಕೆ ಏರಿಕೆ: ಕಂಬನಿ ಮಿಡಿದ ಜಗತ್ತು, ನೆರವಿನ ಮಹಾಪೂರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 12 =
Remember me
