ಬೆಂಗಳೂರು:ಉತ್ತಮ ಗುರುವನ್ನು ಅರಸುವ ಶಿಷ್ಯ,ಉತ್ತಮ ಜಿಜ್ಞಾಸುವಾಗಿರಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ವಿಜಯನಗರ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದ3ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವ್ಯಕ್ತಿಯ ಅಂತರಂಗ,ಬಹಿರಂಗಗಳನ್ನು ಶುದ್ಧಗೊಳಿಸಲು ಸಮರ್ಥ ಗುರುವಿನ ಅಗತ್ಯವಿದ್ದು,ಗುರುವಿನ ಉಪದೇಶವನ್ನು ಅರ್ಥೈಸಿಕೊಳ್ಳಲು ಶಿಷ್ಯ ಜಿಜ್ಞಾಸುವಾಗಿರಬೇಕು.ಶ್ರೀಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ101ಸ್ಥಲಗಳ ಮೂಲಕ ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.ಅವುಗಳಲ್ಲಿ ಒಂದಾದ ಗುರುಕಾರುಣ್ಯ ಸ್ಥಲದಲ್ಲಿ ಶಿಷ್ಯ ಮತ್ತು ಗುರುವಿನ ಸ್ಥಾನ ಹಾಗೂ ವಿಶೇಷತೆಯನ್ನು ತಿಳಿಸಿದ್ದಾರೆ.ತಳಮಳವುಳ್ಳ ಜಿಜ್ಞಾಸುವು ಉತ್ತಮ ಶಿಷ್ಯನಾದರೆ,ಕಳಕಳಿಯುಳ್ಳ ಕರುಣಾಮೂರ್ತಿಯು ಉತ್ತಮ ಗುರುವಾಗಲು ಸಾಧ್ಯ ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.
ಸಮಾರಂಭದಲ್ಲಿ ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರಿಗೆ ಪಂಚಾಚಾರ್ಯ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗಂಗಾಧರ ಮತ್ತು ಬಸವಪ್ರಭು ಪಾಟೀಲ್ ಅವರಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು,ಶಿರಶ್ಯಾಡದ ಶ್ರೀ ಅಭಿನವ ಮುರುಘೇಂದ್ರ ಶಿವಾಚಾರ್ಯರು ಪ್ರಸ್ತಾವಿಕವಾಗಿ ಮಾತನಾಡಿದರು.ವಿಭೂತಿಪುರ,ಶಿವಗಂಗೆ,ಕರಿಭಂಟನಾಳ ಶ್ರೀಗಳು,ಮೃತ್ಯುಂಜಯ ಸ್ವಾಮಿ,ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.
ಬಸವನಾಡಿನ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದ ನಾನು ದೂರದ ಚಿತ್ರದುರ್ಗಕ್ಕೆ ಬಂದು ಲೋಕಸಭೆ ಚುನಾವಣೆಗೆ ನಿಂತು ಗೆಲುವು ಸಾಧಿಸಲು ಶ್ರೀಶೈಲ ಜಗದ್ಗುರುಗಳ ಆಶೀರ್ವಾದವೇ ಕಾರಣ ಎಂದು ಮಾಜಿ ಡಿಸಿಎಂ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.ಸಾಕ್ಷತ್ ಮಲ್ಲಿಕಾರ್ಜುನಸ್ವಾಮಿಯ ಅವತಾರವಾಗಿರುವ ಶ್ರೀಶೈಲ ಜಗದ್ಗುರುಗಳ ಆಶೀರ್ವಾದ ನಾಡಿನ ಮೇಲೆ ಸದಾ ಇರಲಿ ಎಂದು ಅವರು ಪ್ರಾರ್ಥಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + nine =
Remember me
