|ಮಂಜುನಾಥ ಕೆ.ಬೆಂಗಳೂರು
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಿ ಉತ್ತರ ಪತ್ರಿಕೆಗಾಗಿ ಹಲವು ದಿನಗಳ ಕಾಯಬೇಕಿಲ್ಲ. ಬರೀ 3 ದಿನದಲ್ಲೇ ಅದೂ ಇಲಾಖೆ ವೆಬ್​ಸೈಟ್​ನಲ್ಲೇ ಲಭಿಸುವ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಾರಿಗೊಳಿಸಲು ಮುಂದಾಗಿದೆ. ವಿದ್ಯಾರ್ಥಿಗಳ ಇ ಮೇಲ್​ಗೆ ಉತ್ತರ ಪತ್ರಿಕೆ ಕಳುಹಿಸುವಾಗ ಆಗುತ್ತಿದ್ದ ತಾಂತ್ರಿಕ ದೋಷವೂ ಹೊಸ ವ್ಯವಸ್ಥೆಯಿಂದ ದೂರಾಗಲಿದೆ.
ಉತ್ತರ ಪ್ರತಿ ಪಡೆಯುವುದು ಹೇಗೆ?:ಮರು ಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಮೊಬೈಲ್​ಗೆ ನೋಂದಣಿ ಸಂಖ್ಯೆ ಮತ್ತು ಒಟಿಪಿ ಹೋಗುತ್ತದೆ. ವಿದ್ಯಾರ್ಥಿ ಹೆಸರಿನಲ್ಲಿ ಒಂದು ಲಾಗಿನ್ ಕ್ರಿಯೇಟ್ ಆಗುತ್ತದೆ. ಮಂಡಳಿಯು ಆ ಲಾಗಿನ್​ಗೆ ಉತ್ತರ ಪತ್ರಿಕೆಯನ್ನು ಅಪ್​ಲೋಡ್ ಮಾಡುತ್ತದೆ. ಆ ವೆಬ್​ಸೈಟ್​ನಲ್ಲಿ ನೋಂದಣಿ ಸಂಖ್ಯೆ ಹಾಗೂ ಒಟಿಪಿ ಸಂಖ್ಯೆಯನ್ನು ದಾಖಲಿಸಿದರೆ, ತಮ್ಮ ಮೂಲ ಉತ್ತರ ಪತ್ರಿಕೆಯ ನಕಲು ಪ್ರತಿ ಲಭ್ಯವಾಗಲಿದೆ. ಈ ಮೊದಲು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಅದರ ಪ್ರತಿಯನ್ನು ಅಂಚೆ ಮೂಲಕ ವಿದ್ಯಾರ್ಥಿಗಳು ನೀಡಿರುವ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಬದಲಿಸಿ ಕಳೆದ 4 ವರ್ಷದಿಂದ ವಿದ್ಯಾರ್ಥಿಗಳ ಇ-ಮೇಲ್​ಗೆ ಕಳುಹಿಸಲಾಗುತ್ತಿದೆ. ಇದೀಗ ಮತ್ತಷ್ಟು ವ್ಯವಸ್ಥೆಯನ್ನು ಸುಧಾರಿಸಲಾಗಿದೆ. 2019ರಲ್ಲಿ ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿತ್ತು.
ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಂಡಳಿಯ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಈ ಸೇವೆಗಳು ವಿದ್ಯಾರ್ಥಿ ಸ್ನೇಹಿಯಾಗಿವೆ. ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಸಮಯದ ಅವಧಿಯಲ್ಲಿ ಉತ್ತರ ಪತ್ರಿಕೆ ಪ್ರತಿ ಪಡೆಯಲು ಇದು ಸಹಕಾರಿಯಾಗಲಿದೆ.
|ಎಚ್.ಎನ್. ಗೋಪಾಲಕೃಷ್ಣಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ
ಮಕ್ಕಳ ಕಲಿಕೆಗೆ ವೇಗ ನೀಡಲು ಶಿಕ್ಷಕರಿಗೆ ಕಲಿಕಾ ಚೇತರಿಕೆ ತರಬೇತಿ ನೀಡಲಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡಿ ಇಲಾಖೆ ಅಧಿಕಾರಿಗಳು, ಶಾಲಾ ಸಿಬ್ಬಂದಿ ಶಾಲೆಗಳನ್ನು ಸಿದ್ಧಗೊಳಿಸಿದ್ದಾರೆ. ಪಾಲಕರು ಮಕ್ಕಳನ್ನು ಮೊದಲ ದಿನದಿಂದಲೇ ಶಾಲೆಗೆ ಕಳುಹಿಸಬೇಕು.
|ಬಿ.ಸಿ.ನಾಗೇಶ್ಶಿಕ್ಷಣ ಸಚಿವ
ಬದಲಾವಣೆ ಮಾಡಿರುವುದೇಕೆ?:ಸ್ಕ್ಯಾನ್ ಪ್ರತಿಯನ್ನು ಅಂಚೆ ಮೂಲಕ ಕಳುಹಿಸುವುದು ತುಂಬಾ ವಿಳಂಬವಾಗುತ್ತಿದ್ದರಿಂದ ಇದನ್ನು ಇ-ಮೇಲ್ ಮೂಲಕ ಕಳುಹಿಸಿಕೊಡಲು ನಿರ್ಧರಿಸಿತು. ಈ ವೇಳೆ ಕೆಲ ವಿದ್ಯಾರ್ಥಿಗಳು ಇ-ಮೇಲ್ ವಿಳಾಸ ನೀಡುವಲ್ಲಿ ಅಕ್ಷರಗಳಲ್ಲಿ ಕೆಲವು ತಪ್ಪುಗಳು ಮಾಡುತ್ತಿದ್ದರು. ಇದರ ಪರಿಣಾಮ, ವಿದ್ಯಾರ್ಥಿಗಳಿಗೆ ಸ್ಕ್ಯಾನ್ ಪ್ರತಿ ತಲುಪುತ್ತಿರಲಿಲ್ಲ. ವೆಬ್​ಸೈಟ್​ನಲ್ಲಿಯೇ ಅಪ್​ಲೋಡ್ ಮಾಡಿದರೆ, ಡೌನ್​ಲೋಡ್ ಮಾಡಿಕೊಳ್ಳಲು ಸುಲಭ ಎಂಬುದು ಮಂಡಳಿ ಆಯೋಚನೆ.
ಬೆಂಗಳೂರು:ರಾಜ್ಯಾದ್ಯಂತ ಮೇ 16ರಂದು 1 ರಿಂದ 10ನೇ ತರಗತಿವರೆಗೆ ಶಾಲೆಗಳು ಆರಂಭವಾಗಲಿದ್ದು, ಇದಕ್ಕೆ ಬೇಕಾದ ತಯಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಭೌತಿಕ ತರಗತಿಗಳು ಇಲ್ಲದೆ ಕಲಿಕೆಗೆ ಹಿನ್ನಡೆಯಾಗಿದೆ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರ, ಕಲಿಕಾ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುತ್ತಿದೆ. ಅದಕ್ಕಾಗಿ ಅಗತ್ಯವಾಗಿರುವ ಪೂರಕ ಪಠ್ಯಗಳನ್ನು ಸಿದ್ಧಪಡಿಸಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇ 16ರಂದು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಹಬ್ಬದ ವಾತಾವರಣ: ಎರಡು ವರ್ಷಗಳ ನಂತರ ಶಾಲೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಗಳನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಹೂಗಳನ್ನು ನೀಡಿ ಸ್ವಾಗತಿಸಲು ಶಿಕ್ಷಕರು ಸಜ್ಜಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
