ಬೆಂಗಳೂರು:ಕರೊನಾ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲಾಗಿದ್ದು, ಈ ಸಮಯವನ್ನು ರಜೆ ಎಂದು ಪರಿಗಣಿಸಿ ರಿಲ್ಯಾಕ್ಸ್​ ಮಾಡಬೇಡಿ, ಬದಲಾಗಿ ಪರೀಕ್ಷೆಗೆ ಮತ್ತಷ್ಡು ಸಜ್ಜಾಗಿ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ತಿಳಿಸಿದರು.
ಫೇಸ್​ಬುಕ್​ ವಿಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಸುರೇಶ್​ ಕುಮಾರ್​ ಅವರು ವಿವರಣೆ ನೀಡಿದರು. ಮಾರ್ಚ್​ 27ರಿಂದ ಆರಂಭವಾಗಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್​ವೈ ಅವರೊಂದಿಗೆ ಚರ್ಚಿಸಿ ಮುಂದೂಡಲಾಗಿದೆ. ಆದಷ್ಟು ಬೇಗ ಮುಂದಿನ ದಿನಾಂಕವನ್ನು ನಾವು ಪ್ರಕಟಿಸುತ್ತೇವೆ ಎಂದು ತಿಳಿಸಿದರು.
ನಾಳೆ ನಡೆಯಬೇಕಾಗಿರುವ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ಯಾವುದೇ ತೊಂದರೆಯಿಲ್ಲದೆ ಪರೀಕ್ಷೆ ನಡೆಯಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ನಾನು ಅನೇಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಪರೀಕ್ಷೆ ಬೇಗ ಮುಗಿದು ರಿಲ್ಯಾಕ್ಸ್​ ಮೂಡ್​ಗೆ ಹೋಗಬೇಕೆನ್ನುವ ಆಸೆ ಇತ್ತು. ಸಾಕಷ್ಟು ಓದಿದ್ದೇವೆ, ಶ್ರಮಪಟ್ಟಿದ್ದೇವೆ ಬೇಗ ಮುಗಿಯಲಿ ಎಂಬ ಬಯಕೆ ಇತ್ತು. ನಾವು ಕೂಡ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವು. ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದ್ದೆವು. ಆದರೆ, ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸಲಹೆಯಂತೆ ಪರೀಕ್ಷೆಗಳನ್ನು ಮುಂದೂಡಿದ್ದೇವೆ ಎಂದು ತಿಳಿಸಿದರು.
ಇದನ್ನು ರಜೆ ಎಂದು ಪರಿಗಣಿಸಬೇಡಿ. ಬದಲಾಗಿ ಇದೊಂದು ವಿಸ್ತರಿತ ಅಧ್ಯಯನ ರಜೆ ಎಂದು ಭಾವಿಸಿ ಎಂದರು. ಈ ಸಮಯವನ್ನು ಉಪಯೋಗಿಸಿಕೊಳ್ಳಿ, ಇನ್ನು ಎರಡು ಬಾರಿ ಪುನಃ ಅಧ್ಯಯನ ಮಾಡಿ. ಪರೀಕ್ಷೆಗಳಿಗೆ ಇನ್ನಷ್ಟು ಸಜ್ಜಾಗಿ. ಆದರೆ, ರಜೆ ಎಂದು ರಿಲ್ಯಾಕ್ಸ್​ ಮೂಡ್​ಗೆ ಹೋಗಬೇಡಿ. ಸದ್ಯದಲ್ಲೇ ಪರಿಸ್ಕೃತ ದಿನಾಂಕಗಳನ್ನು ಪ್ರಕಟಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನಿಡಿದರು.
ಕರೊನಾ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ: ಸಿಎಂ ಬಿಎಸ್​ವೈ ಸ್ಪಷ್ಟನೆ

https://www.facebook.com/100000520624203/posts/3332363716790950/
1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 3 =
Remember me
