ಹಾವೇರಿ:ಮಹಾಮಾರಿ ಕರೊನಾ ವೈರಸ್​ ಆತಂಕದ ನಡುವೆಯೂ ಇಂದಿನಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ಶಿಕ್ಷಣ ಇಲಾಖೆ ಸ್ಯಾನಿಟೈಸರ್​, ಮಾಸ್ಕ್​ ಹಾಗೂ ಥರ್ಮಲ್​ ಸ್ಕ್ರೀನಿಂಗ್​ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಿದ್ದರೂ, ಕರೊನಾ ಆರ್ಭಟಕ್ಕೆ ಹಾವೇರಿಯ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಹಾವೇರಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಓರ್ವ ವಿದ್ಯಾರ್ಥಿನಿಗೆ ಕರೊನಾ ಸೋಂಕು ತಗುಲಿದ್ದರೆ, ಇಬ್ಬರು ವಿದ್ಯಾರ್ಥಿಗಳು ಸವಣೂರು ತಾಲೂಕಿನ ಕಾರಡಗಿಯಲ್ಲಿ ಕ್ವಾರೆಂಟೈನ್ ಒಳಗಾಗಿದ್ದಾರೆ. ಹೀಗಾಗಿ ಮೂವರು ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ.ಇದನ್ನೂ ಓದಿ:ಕರೊನಾದಿಂದ ಮೃತರ ಅಂತ್ಯಕ್ರಿಯೆಗೆ ಜಮೀರ್ ನೆರವು: 53 ಶವಸಂಸ್ಕಾರ ಮಾಡಿದ ತಂಡ
ಮೊದಲ ಯತ್ನ ಎಂದು ಪರಿಗಣಿಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ. ಆದರೆ, ಈಗಲೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಕನಸು ಭಗ್ನವಾಗಿದೆ. ಇನ್ನೂ ಹಾವೇರಿ, ಸವಣೂರು ಹಾಗೂ ಶಿಗ್ಗಾಂವಿ ಕಂಟೈನ್ಮೆಂಟ್ ಝೋನ್​ನಲ್ಲಿ 25 ವಿದ್ಯಾರ್ಥಿಗಳಿದ್ದು, ಇಂದು ಪ್ರತಿಕೂಲ ವಾತಾವರಣದಲ್ಲಿಯೂ ಪರೀಕ್ಷೆ ಬರೆಯಲ್ಲಿದ್ದಾರೆ.
ಇನ್ನು ಶಿಕ್ಷಣ ಇಲಾಖೆ ಎಚ್ಚರಿಕೆ ವಹಿಸಿದ್ದು, ಕಂಟೈನ್ಮೆಂಟ್ ಝೋನ್​ನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತೇಕ ಕೊಠಡಿ ಮತ್ತು ವಾಹನದ ವ್ಯವಸ್ಥೆಯನ್ನು ಮಾಡಿದೆ.(ದಿಗ್ವಿಜಯ ನ್ಯೂಸ್​)ಇದನ್ನೂ ಓದಿ:ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?
VIDEO| ಡೇಂಜರಸ್ ಶಾರ್ಕ್ ಬಾಯಿಗೆ ಕೈಹಾಕಿ ಕ್ಯಾಮರಾಗೆ ಪೋಸ್​ ನೀಡಿದ ವ್ಯಕ್ತಿ: ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
