ಕೊವಿಡ್​-19ರಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕವನ್ನು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಈಗಾಗಲೇ ಪ್ರಕಟಿಸಿದ್ದು, ಅದರ ಅನ್ವಯ ಜೂ.25ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ.ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಟೈಂ ಟೇಬಲ್​ ನೀಡಲಾಗಿದ್ದು, ಅದು ಹೀಗಿದೆ.
ಜೂ.25- ದ್ವಿತೀಯ ಭಾಷೆ–ಇಂಗ್ಲಿಷ್​, ಕನ್ನಡ- ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30
ಜೂ.26-ಕೋರ್​ ಸಬ್ಜೆಕ್ಟ್​
ಜೂ.27-ಗಣಿತ ಮತ್ತು ಸಮಾಜಶಾಸ್ತ್ರ-ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45
ಜೂ.28 ಭಾನುವಾರ ರಜಾ
ಜೂನ್​ 29-ವಿಜ್ಞಾನ, ರಾಜ್ಯಶಾಸ್ತ್ರ ಪರೀಕ್ಷೆಗಳು ಬೆಳಗ್ಗೆ 10.30-ಮ.1.45
ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ- ಮಧ್ಯಾಹ್ನ 2ರಿಂದ ಸಂಜೆ 5-15
ಜೂ.30ರಂದು ಯಾವುದೇ ಪರೀಕ್ಷೆ ಇಲ್ಲ
ಜುಲೈ 1-ಸಮಾಜ ವಿಜ್ಞಾನ -ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45
ಜುಲೈ 2-ಪ್ರಥಮ ಭಾಷೆಕನ್ನಡ , ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ -ಬೆಳಗ್ಗೆ 10.30-ಮಧ್ಯಾಹ್ನ 1.45.
ಜುಲೈ 3-ತೃತೀಯ ಭಾಷೆಹಿಂದಿ, ಕನ್ನಡ, ಇಂಗ್ಲಿಷ್​, ಅರೇಬಿಕ್​, ಪರ್ಷಿಯನ್​, ಉರ್ದು, ಸಂಸ್ಕೃತ, ಕೊಂಕಣಿ, ತುಳು-ಬೆ.10.30-ಮ.1.45.
ಎನ್​ಎಸ್​ಕ್ಯೂಎಫ್​ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್​, ಆಟೋ ಮೊಬೈಲ್, ಹೆಲ್ತ್​ ಕೇರ್​ ಮತ್ತು ಬ್ಯೂಟಿ ಆ್ಯಂಡ್​ ವೆಲ್​ನೆಸ್​ ಪರೀಕ್ಷೆಗಳು ಜು.3ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.45ರವರೆಗೆ ನಡೆಯಲಿವೆ.
ಹಾಗೇ ಜು.4 ಶನಿವಾರದಂದು ಜಿಟಿಎಸ್​ ಅಭ್ಯರ್ಥಿಗಳಿಗೆ ಪ್ರಾಯೋಗಿಕ, ಮೌಖಿಕ ಪರೀಕ್ಷೆಗಳನ್ನು ಆಯಾ ಕೇಂದ್ರಗಳಲ್ಲಿ ನಡೆಸಲಾಗುವುದು. ಹಾಗೇ ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತದ ಸೈದ್ಧಾಂತಿಕ ಪರೀಕ್ಷೆಯನ್ನು ಮಧ್ಯಾಹ್ನ 2ಗಂಟೆಯಿಂದ 3.45ರವರೆಗೆ ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45ರಿಂದ ಸಂಜೆ 5.15ರವರೆಗೆ ನಡೆಸಲಾಗುವುದು ಎಂದು ಪರೀಕ್ಷಾ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 7 =
Remember me
