ಬೆಂಗಳೂರು:2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇಖಡವಾರು 71.80 ಫಲಿತಾಂಶ ಬಂದಿದೆ. 625ಕ್ಕೆ 625 ಅಂಕ ಪಡೆದ 6 ಮಕ್ಕಳು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ದ್ವೀತಿಯ ರ್ಯಾಂಕ್​ ಅನ್ನು 11 ವಿದ್ಯಾಥಿರ್ಗಳು ಹಂಚಿಕೊಂಡಿದ್ದಾರೆ. ಬಾಲಕರು ಶೇ.66.41 ಮತ್ತು ಬಾಲಕಿಯರು ಶೇ.77.74 ಅಂಕ ಗಳಿಸುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶ್ರೇಣೀಕೃತ ರ್ಯಾಂಕಿಂಗ್​ ನೀಡಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ, ಯಾದಗಿರಿ ಕೊನೇ ಸ್ಥಾನ ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮೂಲಕ ಫಲಿತಾಂಶ ಕಳುಹಿಸಲಾಗಿದ್ದು, ನಾಳೆ(ಮಂಗಳವಾರ) ಶಾಲೆಗಳಲ್ಲಿ ಪ್ರಕಟವಾಗಲಿದೆ. www.karresult.nic.in ವೆಬ್​ಸೈಟ್​ನಲ್ಲೂ ಫಲಿತಾಂಶ ಪ್ರಕಟವಾಗಿದ್ದು, ಮಕ್ಕಳು ಮನೆಯಲ್ಲೇ ಕುಳಿತು ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಇದನ್ನೂ ಓದಿರಿಎಸ್​ಎಸ್​ಎಲ್​ಸಿ ಫಲಿತಾಂಶ ಏನೇ ಬಂದರೂ ಮಕ್ಕಳನ್ನು ನೋಯಿಸದಿರಿ; ಸುರೇಶ್ ಕುಮಾರ್
ಕರೊನಾ ಆತಂಕದ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದ 8,11,050 ವಿದ್ಯಾರ್ಥಿಗಳ ಪೈಕಿ 5,82, 360 ಮಂದಿ ಉತ್ತೀರ್ಣರಾಗಿದ್ದಾರೆ. 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 625ಕ್ಕೆ 625 ಅಂಕ ಪಡೆದ 6 ಮಕ್ಕಳು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಕಳೆದಬಾರಿ ನಾಲ್ವರು ಮಾತ್ರ 625ಕ್ಕೆ 625 ಅಂಕ ಪಡೆದಿದ್ದರು. ಕಳೆದ ವರ್ಷ ಶೇ. 73.70 ಫಲಿತಾಂಶ ಬಂದಿತ್ತು. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಶೇ. 1.9 ರಷ್ಟು ಕಡಿಮೆ ಫಲಿತಾಂಶ ಬಂದಿದೆ.
ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,48,203 ವಿದ್ಯಾರ್ಥಿಗಳ ಪೈಕಿ 19,086 ಮಂದಿಗೆ ಶೇ.75 ಕನಿಷ್ಠ ಹಾಜರಾತಿ ಇರಲಿಲ್ಲವೆಂದು ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಮಾರ್ಚ್​ನಲ್ಲೇ ಆರಂಭವಾಗಬೇಕಿದ್ದ ಪರೀಕ್ಷೆಯನ್ನು ಕರೊನಾ ಲಾಕ್​ಡೌನ್​ ಪರಿಣಾಮ ಮುಂದೂಡಲಾಗಿತ್ತು. ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡು ಜೂ.25ರಿಂದ ಜು.5ರವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ಅಲ್ಲದೆ ಮೌಲ್ಯಮಾಪವನ್ನು ವಿಕೇಂದ್ರೀಕರಣ ಮಾಡಿ 34 ಶೈಕ್ಷಣಿಕ ಜಿಲ್ಲೆಯ 227 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು.
ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
