ಬೆಂಗಳೂರು:ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಮರುಮೌಲ್ಯಮಾಪನದ ಬಳಿಕ ಹಾಸನದ ಯುನೈಟೆಡ್ ಅಕಾಡೆಮಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ. ಪುಣ್ಯ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ.
ಹಾಸನ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಜಯರಾಮಯ್ಯ ಹಾಗೂ ಕೆ.ಹೇಮಾ ದಂಪತಿ ಪುತ್ರಿ ಪುಣ್ಯ ಮೊದಲಿನ ಫಲಿತಾಂಶದಲ್ಲಿ 625ಕ್ಕೆ 617 ಅಂಕ ಗಳಿಸಿದ್ದರು. ನಿರೀಕ್ಷಿಸಿದಷ್ಟು ಅಂಕ ಬಾರದ ಕಾರಣ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ
ಇದೀಗ ಫಲಿತಾಂಶ ಬಂದಿದ್ದು, 625ಕ್ಕೆ 620 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ 125 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಶಿರಾ ತಾಲೂಕಿನ ಬರಗೂರು ಬಳಿಯ ರಂಗಾಪುರ ಮೂಲದ ಜೆ.ಪುಣ್ಯ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಕರೊನಾ ರ‍್ಯಾಪಿಡ್ ಟೆಸ್ಟ್‌ನಿಂದ ತಪ್ಪು ಫಲಿತಾಂಶ: ಒಪ್ಪಿಕೊಂಡ ಕೇಂದ್ರ, ಐಸಿಎಂಆರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
