ಶಿವಮೊಗ್ಗ:ದೇಶಾದ್ಯಂತ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಇಂದು ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಬರೀ ನಾಲ್ಕು ದಿನಗಳಲ್ಲೇ ಮೂವರು ಚಿಕ್ಕ ಮಕ್ಕಳು ಹೃದಯಾಘಾತದಿಂದ ಸತ್ತಂತಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಆನವಟ್ಟಿ ಹೋಬಳಿ ಎಣ್ಣೆಕೊಪ್ಪ ಗ್ರಾಮದಲ್ಲಿ ಈ ಸಾವು ಸಂಭವಿಸಿದೆ. ಆನವಟ್ಟಿ ಜೂನಿಯರ್ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಬಾಲಕ. ಇಂದು ಬೆಳಗ್ಗೆ ಮನೆಯಲ್ಲಿ ಶಾಲೆಗೆ ರೆಡಿಯಾಗುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡ ಈತನನ್ನು ಕೂಡಲೇ ಎಣ್ಣೆಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಬಾಲಕ ಹೃದಯಾಘಾತದಿಂದಾಗಿ ಸಾವಿಗೀಡಾಗಿದ್ದ ಎಂದು ಡಾ.ಸುಭಾಷ್​​ಚಂದ್ರ ಖಚಿತಪಡಿಸಿದ್ದರು.
ಇದನ್ನೂ ಓದಿ:ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ನಿವಾಸಿ, ಕೊಪ್ಪದ ಭಾರತಮಾತ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೀರ್ತನ್ (12) ಜ. 7ರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದ. ದಕ್ಷಿಣಕನ್ನಡ ಜಿಲ್ಲೆಯ ಸುರತ್ಕಲ್​ನ ಕೃಷ್ಣಾಪುರ 7ನೇ ಬ್ಲಾಕ್​ ನಿವಾಸಿ ಅಬ್ದುಲ್​ ರೆಹಮಾನ್​ ಎಂಬುವರ ಪುತ್ರ, 8ನೇ ತರಗತಿ ವಿದ್ಯಾರ್ಥಿ ಮೊಹಮದ್​ ಹಸೀನ್​(14) ಸೋಮವಾರ(ಜ.9) ಬೆಳಗ್ಗೆ ಶಾಲೆಗೆ ಹೊರಡಲೆಂದು ಸಿದ್ಧವಾಗಿದ್ದ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಹಸೀನ್​ನನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ. ಹೀಗೆ ಇದೊಂದು ವಾರದಲ್ಲೇ ದಿನ ಬಿಟ್ಟು ದಿನ ಒಬ್ಬರಂತೆ ಚಿಕ್ಕಮಕ್ಕಳು ಹೃದಯಾಘಾತಕ್ಕೆ ಒಳಗಾಗಿ ಸತ್ತಿದ್ದಾರೆ.
ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದಾಗಲೇ ಡಾಕ್ಟರ್​ಗೆ ಹೃದಯಾಘಾತ; ಕುಸಿದುಬಿದ್ದು 30 ವರ್ಷದ ವೈದ್ಯರ ಸಾವು

ರಂಗ ವೇದಿಕೆಯಲ್ಲೇ ಹೃದಯಾಘಾತ; ನಾಟಕ ಮಾಡುತ್ತಿದ್ದಾಗಲೇ ಪ್ರಾಣ ಬಿಟ್ಟ ಮತ್ತೊಬ್ಬ ಕಲಾವಿದ

ಮೆಡಿಕಲ್ಸ್ ಮುಂಭಾಗ ಎದೆ ಹಿಡಿದುಕೊಂಡೇ ಪ್ರಾಣ ಬಿಟ್ಟ; ಔಷಧ ಪಡೆದು ಹಣ ನೀಡುವಾಗಲೇ ಹೃದಯಾಘಾತ!

ಹೃದಯಾಘಾತ: ಹಿರಿಯ ನಿರ್ಮಾಪಕ ನಿತಿನ್​ ಮನ್​ಮೋಹನ್​ ನಿಧನ

ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ರನ್​ಗಾಗಿ ಓಡುತ್ತಿದ್ದಾಗ ಹೃದಯಾಘಾತ..

ಅವತಾರ್​-2 ಸಿನಿಮಾ ನೋಡುತ್ತಿರುವಾಗಲೇ ಹೃದಯಾಘಾತ: ಥಿಯೇಟರ್​ನಲ್ಲಿ ಪ್ರೇಕ್ಷಕ ಸಾವು

ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು

ಹೃದಯಾಘಾತ: ಎಎಸ್​ಬಿ ಕಾಲೇಜು ಪ್ರಾಂಶುಪಾಲ ಮಾರ್ಟಿನ್ ನಿಧನ

ಪ್ರಾರ್ಥನೆ ಸಲ್ಲಿಸಿ ದೇವರ ಪಾದಕ್ಕೆ ತಲೆಯಿಟ್ಟ ವ್ಯಕ್ತಿ ಮೇಲೇಳಲೇ ಇಲ್ಲ! ದೇಗುಲದಲ್ಲೇ ಹೃದಯಾಘಾತ, ವಿಡಿಯೋ ವೈರಲ್​

ಹೃದಯಾಘಾತ: ಟೊಯೊಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ನಿಧನ

ಯೋಧರಲ್ಲೂ ಹೃದಯಾಘಾತ ಹೆಚ್ಚಳ?; ಕರ್ತವ್ಯನಿರತ ಸೈನಿಕ ಹೃದಯಾಘಾತದಿಂದ ಸಾವು

ಸಂಭ್ರಮದ ಹಿಂದೆಯೇ ಬಂದೆರಗಿದ ಸಾವು! ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ನಿಧನ

ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

ಗದ್ದೆ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತ: ಗದ್ದೆಯಲ್ಲೇ ಟ್ರ್ಯಾಕ್ಟರ್​ ಚಾಲಕ ಸಾವು

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಹೃದಯಾಘಾತ: ವಿದ್ಯಾರ್ಥಿನಿ ಸಾವು

ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

ಹೃದಯಾಘಾತಕ್ಕೀಡಾಗಿ 24 ವರ್ಷದ ಪೈಲ್ವಾನ್ ಸಾವು!

ಮಾಲೆ ಧರಿಸಿ ಯಾತ್ರೆಗೆ ಹೋಗಿದ್ದ ವ್ಯಕ್ತಿ ಶಬರಿಮಲೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವು!

ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಹೃದಯಾಘಾತ!; ಹಾಕಿ ಆಡ್ತ ಆಡ್ತ ಇಹಲೋಕ ತ್ಯಜಿಸಿದ ತರುಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
