ಚಿಕ್ಕೋಡಿ:ಎಸ್​ಎಸ್ಎಲ್​ಸಿ ವಿದ್ಯಾರ್ಥಿಯೊಬ್ಬ ಇಂದು ಗಣಿತ ಪರೀಕ್ಷೆ ಬರೆದು ಸೀದಾ ಮನೆಗೇ ಹೋಗಿದ್ದರೆ ಬಹುಶಃ ಬದುಕುಳಿದಿರುತ್ತಿದ್ದ. ಪರೀಕ್ಷೆ ಬರೆದ ಮಗ ಮನೆಗೆ ಮರಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಮನೆಯವರಿಗೆ ಬಂದಿದ್ದು ಆಘಾತಕಾರಿ ಸುದ್ದಿ. ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಉಮರ್ ಫಾರೂಕ್​ (16) ಸಾವಿಗೀಡಾದ ವಿದ್ಯಾರ್ಥಿ. ಇಂದು ಈತ ಎಸ್ಎಸ್​ಎಲ್​ಸಿಯ ಗಣಿತ ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆ ಮುಗಿದ ಬಳಿಕ ನೇರವಾಗಿ ಮನೆಗೆ ತೆರಳುವ ಬದಲು ಗೆಳೆಯರೊಂದಿಗೆ ಮೋಜಿಗೆಂದು ಈಜಾಟಕ್ಕೆ ಇಳಿದಿದ್ದೇ ಪ್ರಾಣಕ್ಕೆ ಮುಳುವಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕನ ಯೋಗಿಕೊಳ್ಳದ ಮಾರ್ಕಂಡೇಯ ನದಿಯಲ್ಲಿ ಈಜಲು ಹೋದ ಈತ ನೀರುಪಾಲಾಗಿದ್ದ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನ ಶವ ಪತ್ತೆ ಮಾಡಿ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಸೀದಿಗಳಲ್ಲಿನ ಮೈಕ್​ ವಿರುದ್ಧ ಶ್ರೀರಾಮಸೇನೆ ಗುಡುಗು; ನಿರ್ಬಂಧಿಸದಿದ್ದರೆ ದೇವಸ್ಥಾನಗಳಲ್ಲಿ ಮೈಕ್​ ಹಾಕಿ ಭಜನೆ..

ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..

ಒಂದೇ ಮನೆಯ ಬಳಿ 3 ಕಾಳಿಂಗ ಸರ್ಪ; ಬಾವಿಯಲ್ಲಿ ಎರಡು, ಹಿತ್ತಲಲ್ಲಿ ಒಂದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
