ಕೊಡಗು:ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಕೊಂದು ಆಕೆಯ ರುಂಡವನ್ನು ಕೊಂಡೊಯ್ದಿದ್ದ ಆರೋಪಿ ಮೊನ್ನಂಡ ಪ್ರಕಾಶ್​ (33) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಬಾಲಕಿಯ ತಲೆ ಪತ್ತೆಯಾಗಿಲ್ಲ.
ಇದನ್ನೂ ಓದಿ:ಪುಷ್ಪ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ರಿಯಾಲಿಟಿ ಶೋ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಪೊಲೀಸರು ಶೋಧಕಾರ್ಯ ಮಾಡುವ ಸಮಯದಲ್ಲಿ ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ. ಇನ್ನು ಬಾಲಕಿಯ ರುಂಡಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
16 ವರ್ಷದ ಬಾಲಕಿಗೂ 35 ವರ್ಷದ ಆರೋಪಿಗೂ ಮದುವೆ ಮಾಡಿಸಲು ಪೋಷಕರು ನಿರ್ಧರಿಸಿದ್ದರು. ಗುರುವಾರವಷ್ಟೇ ಇಬ್ಬರ ಮದುವೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅವರನ್ನು ತಡೆದಿದ್ದರು. ಬಾಲ್ಯ ವಿವಾಹ ಮಾಡದಂತೆ ಪೋಷಕರ ಮನವೊಲಿಸಿದ್ದರು.
18 ವರ್ಷ ತುಂಬಿದ ಬಳಿಕ ನಂತರವೇ ಮದುವೆ ಮಾಡಿಸುವುದಾಗಿ ಮುಚ್ಚಳಿಕೆಯನ್ನು ಬರೆಸಿಕೊಂಡು ಅಧಿಕಾರಿಗಳು ವಾಪಸ್ಸಾಗಿದ್ದರು. ನಂತರ ಮನೆಗೆ ಬಂದ ಆರೋಪಿಯು ಬಾಲಕಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ತಲೆ ಕತ್ತರಿಸಿ ಪರಾರಿಯಾಗಿದ್ದ. ಆದರೆ ಜಿಲ್ಲಾ ವರಿಷ್ಠಾಧಿಕಾರಿ ಕೆ.ರಾಮರಾಜನ್​ ಅವರು ಈ ವಿಷಯವನ್ನು ಖಚಿತಪಡಿಸಿಲ್ಲ.
ಜ್ಯೂ.ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್ ಸಿನಿಮಾ ಸೆಟ್‌ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
