ಬಾಗಲಕೋಟೆ:ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಉಸಿರಾಟದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಈಗ ರಾಜ್ಯಕ್ಕೇ ಟಾಪರ್ ಎನಿಸಿಕೊಂಡಿದ್ದಾಳೆ. ಬಾಗಲಕೋಟೆ ಜಿಲ್ಲೆ ಮುಚಖಂಡಿ ತಾಂಡಾದ ಗಂಗಮ್ಮ ಬಸವರಾಜ್ ಹುಡೇದ ಎಂಬಾಕೆಯೇ ಈ ವಿದ್ಯಾರ್ಥಿನಿ.
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿರುವ ಈಕೆ ಮುಚಖಂಡಿ ಗ್ರಾಮದ ದುರ್ಗಾದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಈಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವಾಗಲೇ ಉಸಿರಾಟ ತೊಂದರೆಗೆ ಒಳಗಾಗಿದ್ದು, ಪರೀಕ್ಷೆ ಮುಗಿಯುತ್ತಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ 20 ದಿನಗಳಿಂದ ಮನೆಯಲ್ಲಿಯೇ ಆಕ್ಸಿಜನ್​ ಮೇಲಿರುವ ಈ ವಿದ್ಯಾರ್ಥಿನಿ, ಟಾಪರ್ ಆದ ಖುಷಿಯಲ್ಲಿ ತನ್ನ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ಮರೆಯುವಂತಾಗಿದೆ.
ಕರೊನಾ ಮಧ್ಯದಲ್ಲೂ ಬಿಟ್ಟೂಬಿಡದೆ ಆನ್​ಲೈನ್​ ಕ್ಲಾಸ್, ನಿರಂತರ ಓದು ತನ್ನ ಯಶಸ್ಸಿನ ಗುಟ್ಟು ಎಂದ ಗಂಗಮ್ಮ ಹೇಳಿಕೊಂಡಿದ್ದಾಳೆ. ಮಗಳ ಸಾಧನೆಗೆ ತಂದೆ ಬಸವರಾಜ್​, ತಾಯಿ ಗೀತಾ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ.
15-20 ವರ್ಷಗಳಲ್ಲಿ ನಡೆಯಬಹುದು ಅಂದುಕೊಂಡಿದ್ದು ಇಂದೇ ಸಂಭವಿಸಿತು!; ನಟ ಅಲ್ಲು ಅರ್ಜುನ್ ಬದುಕಲ್ಲೊಂದು ವಿಸ್ಮಯ..


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twenty =
Remember me
