ಬೆಂಗಳೂರು:2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಸೇಂಟ್​ ಜೋಸೆಫರ ಕಾನ್ವೆಂಟ್ ಗಲ್ರ್ಸ್​​ ಹೈಸ್ಕೂಲ್​ನ ಐ.ಪಿ. ತನ್ಮಯಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯಕ್ಕೆ ಟಾಪರ್​ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಖುಷಿ ತಡೆಯಲಾಗದೆ ತನ್ಮಯಿ ಆನಂದಬಾಷ್ಪ ಸುರಿಸಿದರು. ಮಾರ್ಚ್​-ಏಪ್ರಿಲ್​ನಲ್ಲಿ ಪರೀಕ್ಷೆ ನಡೆಯುವ ಹುಮ್ಮಸ್ಸಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದ ತನ್ಮಯಿ ಕರೊನಾ ಲಾಕ್​ಡೌನ್​ ವೇಳೆ ದಿನಕ್ಕೆರಡು ತಾಸು ಓದುತ್ತಿದ್ದರಷ್ಟೆ. ಆ ಸಮಯದಲ್ಲಿ ಮನೆಯವರೊಂದಿಗೆ ಕಾಲಕಳೆಯುತ್ತ ಇದ್ದೆ ಎನ್ನುವ ತನ್ಮಯಿ, ‘ಎಕ್ಸಾಂ ಡೇಟ್​ ಅಧಿಕೃತ ಆದ ಬಳಿಕ ಮತ್ತೊಮ್ಮೆ ಎಲ್ಲವನ್ನೂ ಪುನರ್​ಮನನ ಮಾಡಿಕೊಂಡೆ. ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದದ್ದು ಖುಷಿಯಾಗಿದೆ’ ಎಂದುವಿಜಯವಾಣಿಗೆ ತಿಳಿಸಿದರು.
ಇದನ್ನೂ ಓದಿರಿಎಸ್​ಎಸ್​ಎಲ್​ಸಿ ಟಾಪರ್​ ಧೀರಜ್​ ರೆಡ್ಡಿಗೆ ಲಾಕ್​ಡೌನ್​ ಸಮಯವೇ ವರವಾಯ್ತು!
‘ಕರೊನಾ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದಾಗುವ ಆತಂಕ ಎದುರಾಗಿತ್ತು. ಪರೀಕ್ಷೆ ನಡೆಯದಿದ್ದರೆ ನಿಜಕ್ಕೂ ತುಂಬಾ ಬೇಸರವಾಗುತಿತ್ತು. ಕೊನೆಗೂ ಎಕ್ಸಾಂ ನಡೆದದ್ದು ಖುಷಿ ವಿಚಾರ. ನಾನು ಚೆನ್ನಾಗಿಯೇ ಓದಿದ್ದರೂ ಪರೀಕ್ಷೆಗೆ ಹೋಗುವ ಮೊದಲೆರಡು ದಿನ ಕರೊನಾ ಭಯ ಕಾಡುತ್ತಿತ್ತು. ದೇವರ ದಯೆ ಎಲ್ಲವೂ ಸಲೀಸಾಗಿ ನಡೆಯಿತು. ನನ್ನ ಈ ಸಾಧನೆಗೆ ಶಿಕ್ಷಕರು ಮತ್ತು ಪಾಲಕರ ಸಹಕಾರ ಹೆಚ್ಚಾಗಿದೆ. ಮನೆಯಲ್ಲಿ ನನ್ನ ಓದಿಗೆ ಅಪ್ಪ-ಅಮ್ಮ ನಿತ್ಯವೂ ಕಾಳಜಿ ವಹಿಸುತ್ತಿದ್ದರು’ ಎಂದು ತನ್ಮಯಿ ಹೇಳಿದರು.
ತನ್ಮಯ ತಂದೆ ಇ.ಎಸ್​. ಪ್ರಸನ್ನ ವಸ್ತಾರೆ ಗ್ರಾಮದ ಉಪ ತಹಸೀಲ್ದಾರ್​ ಆಗಿದ್ದು, ತಾಯಿ ಸಂಧ್ಯಾ ಡಿ.ಎಲ್​. ಮಲ್ಲಂದೂರು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ. ಮುಂದೆ ಡಾಕ್ಟರ್ ಆಗುವ ಕನಸುಕಟ್ಟಿಕೊಂಡಿದ್ದಾರೆ ತನ್ಮಯಿ. ಇವರ ಸಾಧನೆಗೆ ಪಾಲಕರು ಮತ್ತು ಶಾಲೆಯಲ್ಲಿ ಸಂಭ್ರಮ ಮನೆಮಾಡಿದೆ.
ಸರ್ಕಾರಿ ಶಾಲೆಯ ಸನ್ನಿಧಿ ಎಸ್​ಎಸ್​ಎಲ್​ಸಿ ಟಾಪರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 19 =
Remember me
