ಬಳ್ಳಾರಿ:ರಾಜಕೀಯದಲ್ಲಿ ದಲಿತರಿಗೆ ಉನ್ನತ ಸ್ಥಾನ ಕೊಡೋದು ಬಿಜೆಪಿ ಮಾತ್ರ, ಬೇರೆ ಯಾರಿಗೂ ಇದು ಸಾಧ್ಯವಿಲ್ಲ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಬಳ್ಳಾರಿಯಲ್ಲಿ ಆಯೋಜಿಸಿದ್ದ ಎಸ್​ಟಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ನಡ್ಡಾ, ಬಿಜೆಪಿ ದಲಿತ ಮಹಿಳೆಯೊಬ್ಬರನ್ನು ರಾಷ್ಟಪತಿ ಮಾಡಿದೆ. ಈ ಬಗ್ಗೆ ಯಾವ ಪಕ್ಷವೂ ಚಿಂತನೆ ಮಾಡಿರಲಿಲ್ಲ. ಕಾಂಗ್ರೆಸ್​ಗೆ ದಲಿತರು ಯಾಕೆ ನೆನಪಾಗಲಿಲ್ಲ? ಯಾಕೆ ಉನ್ನತ ಸ್ಥಾನ ನೀಡಲಿಲ್ಲ? ದಲಿತರ ಪರ ಮೊದಲು ಯಡಿಯೂರಪ್ಪ ಕೆಲಸ ಮಾಡಿದ್ರು. ನಂತರ ಇದೀಗ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡಿ ಗೌರವ ಕೊಟ್ಟರು. ಈ‌ ಹಿಂದೆ ಕಾಂಗ್ರೆಸ್​ಗೆ ಸರ್ಕಾರಕ್ಕೆ ದಲಿತರು ಮತ್ತು ಶೋಷಿತರ ಬಗ್ಗೆ ಕನಿಷ್ಠ ಕಾಳಜಿ ಇರಲಿಲ್ಲ. ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಬಳಸಿಕೊಂಡರು. ಯಾವುದೇ ಉನ್ನತ ಸ್ಥಾನವನ್ನು ನೀಡಲಿಲ್ಲ ಎಂದು ಟೀಕಿಸಿದರು.
ಕರ್ನಾಟಕ ಸರ್ಕಾರ ದಲಿತರು, ಆದಿವಾಸಿಗಳು, ಒಬಿಸಿ, ಬಡವರ ಪರ ಕೆಲಸ ಮಾಡ್ತಿದೆ. ಮುಂದಿನ ಚುನಾವಣೆಯಲ್ಲಿ ಇದೇ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋ ಜವಾಬ್ದಾರಿ ಜನರ ಮೇಲಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲೆ ನರೇಂದ್ರ ಮೋದಿ ಅವರ ಆಶೀರ್ವಾದ ಇದೆ, ಯಡಿಯೂರಪ್ಪ ಅವರ ಸಲಹೆ ಇದೆ ಎಂದು ಜೆ.ಪಿ.ನಡ್ಡಾ ಹೇಳಿದರು.
ಶ್ರೀರಾಮುಲು ರಕ್ತ ಪವಿತ್ರ, ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾನೆ: ಸಿಎಂ ಬೊಮ್ಮಾಯಿ

ಬಳ್ಳಾರಿಯಲ್ಲಿ ಎಸ್​ಟಿ ಮೋರ್ಚಾ ಸಮಾವೇಶ ಉದ್ಘಾಟಿಸಿದ ಜೆ.ಪಿ. ನಡ್ಡಾ: ಗಣಿನಾಡಿನಲ್ಲಿ ಬಿಜೆಪಿ ನವಶಕ್ತಿ ದರ್ಶನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eight =
Remember me
