ಮಂಡ್ಯ:ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಏನೆಂಬುದನ್ನು ಮಾಜಿ ಸಚಿವ ಎಸ್​. ಟಿ. ಸೋಮಶೇಖರ್ ಅವರು ತಿಳಿಸಿದ್ದಾರೆ.​
ಯಶವಂತಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಇಂದು ಆದಿಚುಂಚನಗಿರಿಗೆ ಭೇಟಿ ನೀಡಿದ ಎಸ್.ಟಿ.ಸೋಮಶೇಖರ್, ಮಾಧ್ಯಮಗಳ ಮುಂದೆ ಸೋಲಿನ ವಿಮರ್ಶೆ ಮಾಡಿದರು. ಕರ್ನಾಟಕ ಜನತೆ ನೀಡಿರುವ ತೀರ್ಪನ್ನು ಸ್ವಾಗತ ಮಾಡಬೇಕು. ನಮ್ಮ ಪಕ್ಷದವರು ಯಾಕೆ ಸೋತರು ಎಂದು ಚರ್ಚೆ ಮಾಡಬೇಕು ಎಂದರು.
ಇದನ್ನೂ ಓದಿ:ಭಾರತದಲ್ಲಿ ಬಹುತೇಕ ತಗ್ಗಿದ ಕೋವಿಡ್: ಆರೋಗ್ಯ ತುರ್ತಸ್ಥಿತಿ ಅಂತ್ಯ, ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
ಬಾಂಬೆ ಟೀಮ್ ಸೋತಿರುವ ವಿಚಾರವಾಗಿ ಮಾತನಾಡಿ, ಸೋಲಲು ಅವರವರ ಕ್ಷೇತ್ರದಲ್ಲಿ ಏನೇನೋ‌ ಕಾರಣಗಳು ಇರುತ್ತವೆ. ನಮ್ಮಲ್ಲಿ ಕೆಲವರು ಗೆದ್ದಿದ್ದೇವೆ. ಸುಧಾಕರ್ ಕೋವಿಡ್ ವೇಳೆ ಸಾಕಷ್ಟು ಕೆಲಸ ಮಾಡಿದರು. ಚಿಕ್ಕಬಳ್ಳಾಪುರದಲ್ಲಿಯೂ ತುಂಬಾ ಕೆಲಸ ಮಾಡಿದರು. ಅವರ ಸೋಲಿಗೆ ಕಾರಣಗಳು‌ ಗೊತ್ತಾಗುತ್ತಿಲ್ಲ ಎಂದರು.
ಕಾಂಗ್ರೆಸ್‌ನವರು 40%, ಪೇಸಿಎಂ ಎಂದು ಅಪಪ್ರಚಾರ ಮಾಡಿದರು. ಗ್ಯಾರಂಟಿ ಕಾರ್ಡ್ ಏನು ಮಾಡೋಕೆ ಆಗಲ್ಲ ಎಂದು ಜನರಿಗೆ ಗೊತ್ತಾಗುತ್ತದೆ. ನಾನು ಪ್ರಚಾರಕ್ಕೆ ಹೋದಾಗ ಗ್ಯಾಸ್ ಹಾಗೂ ಅಕ್ಕಿಯ ವಿಚಾರವನ್ನು ಮಹಿಳೆಯರು ಹೇಳುತ್ತಿದ್ದರು. ಈ ವಿಚಾರದಿಂದ ನಮ್ಮ ಸೋಲಿಗೆ ಕಾರಣವಾಗಿರಬಹುದೆಂದು ಹೇಳಿದರು.
ಎಂಪಿ ಚುನಾವಣೆಯೇ ಬೇರೆ, ಎಂಎಲ್‌ಎ ಚುನಾವಣೆಯೇ ಬೇರೆ. ಕೇಂದ್ರಕ್ಕೂ ರಾಜ್ಯಕ್ಕೂ ಹೋಲಿಕೆ ಮಾಡುವುದಕ್ಕೆ ಆಗಲ್ಲ. ಮುಸ್ಲಿಂರ 4% ತೆಗೆದಿರೋದು ತಪ್ಪಾಗಿರಬಹುದು. ನನ್ನ ಕ್ಷೇತ್ರದಲ್ಲಿ ನನ್ನ ಪರವಾಗಿ ಮುಸ್ಲಿಂರು ಇದ್ದರು. ನಾನು ಕ್ಷೇತ್ರಕ್ಕೆ ಹೋದಾಗ ಎಲ್ಲರೂ ಈ ಬಗ್ಗೆ ಹೇಳಿದರು. ಹಲಾಲ್ ಕಟ್ ಎಲ್ಲದರ ಬಗ್ಗೆ ಹೇಳುತ್ತಿದ್ದರು. ಆಗ ನನಗೆ ಇದು ಎಲ್ಲವೂ ನನ್ನ ಗಮನಕ್ಕೆ ಬಂದಿತ್ತು. ಬಿಜೆಪಿ ಸೋಲಿಗೆ ಇದೆಲ್ಲವು ಕಾರಣವಾಗಿರಬಹುದೆಂದು ತಿಳಿಸಿದರು.
ಇದನ್ನೂ ಓದಿ:ವರುಣದಲ್ಲಿ ವಿ. ಸೋಮಣ್ಣ ಹೀನಾಯ ಸೋಲು: ಪ್ರತಾಪ್​ ಸಿಂಹ ಹೇಳಿಕೆಗಳೇ ಮುಳುವಾಯಿತು!
ನಿನ್ನೆ (ಮೇ 13) ಹೊರಬಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ 135 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 66 ಸ್ಥಾನಗಳನ್ನು ಗಳಿಸಿದರೆ, ಜೆಡಿಎಸ್​ ಕೇವಲ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.(ದಿಗ್ವಿಜಯ ನ್ಯೂಸ್​)
ಕರ್ನಾಟಕ ಚುಣಾವಣಾ ರಣಕಣದಲ್ಲಿ ವರ್ಕೌಟ್ ಆಯಿತೇ ತಾರಾ ಪ್ರಚಾರ?

ಬೆಂಗ್ಳೂರಲ್ಲಿ ಕಾಂಗ್ರೆಸ್ 12, ಬಿಜೆಪಿ 15: ರಾಜಧಾನಿ ಮತದಾರರ ಮನಸೆಳೆದ ನರೇಂದ್ರ ಮೋದಿ ರೋಡ್ ಶೋ

ಹೊನ್ನಾಳಿಯಲ್ಲಿ ಹೀನಾಯ ಸೋಲು: ರಾಜಕೀಯ ನಿವೃತ್ತಿ ಮಾತನಾಡಿ ಕಣ್ಣೀರಿಟ್ಟ ರೇಣುಕಾಚಾರ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 4 =
Remember me
