ಬೆಂಗಳೂರು:ಇನ್ನೇನು ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಇರುವಾಗ, ಎಸ್‍.ಟಿ. ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್‍ಗೆ ಮರುಸೇರ್ಪಡೆ ಆಗುವುದು ಖಚಿತವಾಗಿದೆ. ಈ ಮೂಲಕ ಬಿಜೆಪಿಗೆ ದೊಡ್ಡ ಶಾಕ್ ತಗುಲಿದೆ. ಹೀಗೆ ರಾಜ್ಯ ಬಿಜೆಪಿಗೆ ಆಪರೇಷನ್ ಹಸ್ತದ ಮೊದಲ ಹೊಡೆತ ಇಂದು ಸಂಜೆ ಬೀಳಲಿದೆ ಎಂದೇ ಹೇಳಬಹುದು.
ಇದನ್ನೂ ಓದಿ:ನುಡಿದಂತೆ ನಡೆದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ: ಶಾಸಕ ಎಸ್.ಟಿ. ಸೋಮಶೇಖರ್
ಇದೀಗ ಎಸ್‍.ಟಿ. ಸೋಮಶೇಖರ್ ಬೆಂಬಲಿಗರು ಇಂದು ಸಂಜೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ ಎಂಬ ಮಾಹಿತಿದಿಗ್ವಿಜಯ ನ್ಯೂಸ್‍ಗೆ ಲಭಿಸಿದೆ. ಬೆಂಬಲಿಗರ ಹಿಂದೆ ಬಿಜೆಪಿ‌ ಶಾಸಕ ಎಸ್.ಟಿ. ಸೋಮಶೇಖರ್ ಘರ್ ವಾಪಸ್ ಆಗುವುದು ಬಹುತೇಕ ಕನ್ಫರ್ಮ್ ಎಂದೇ ಹೇಳಲಾಗುತ್ತಿದ್ದು ಈ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:DK Shivakumar About ST Somashekar | ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಡಿಕೆಶಿ ರಿಯಾಕ್ಷನ್ | BENGALURU
ಇಂದು ಎಸ್.ಟಿ. ಸೋಮಶೇಖರ್‍ ಬೆಂಬಲಿಗರು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಜೆ 5 ಗಂಟೆಗೆ ಬಿಜೆಪಿ‌ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಮಾಜಿ ಕಾರ್ಪೋರೇಟರ್ಗಳಾದ ಆರ್ಯ ಶ್ರೀನಿವಾಸ್, ರಾಜಣ್ಣ ಸೇರಿ ಹಲವರು ಸಂಜೆ ಕಾಂಗ್ರೆಸ್ಗೆ ಸೇರಲಿದ್ದಾರೆ. ಬಿಜೆಪಿಯಿಂದ ಭಾರಿ ಸಂಖ್ಯೆಯಲ್ಲಿ‌ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು ಎಸ್.ಟಿ.‌ ಸೋಮಶೇಖರ್ ಬೆಂಬಲಿಗ ಯಶವಂತಪುರ ಮೈನಾರಿಟಿ ಅಧ್ಯಕ್ಷ ಸಜ್ಜದ್ ಬಾಬು ಕೂಡ ಇಂದು ಬಿಜೆಪಿ ತೊರೆಯಲಿದ್ದಾರೆ.
ಇದನ್ನೂ ಓದಿ:ST Somashekar About Joining Congress | ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಸ್.ಟಿ. ಸೋಮಶೇಖರ್ | BENGALURU
ಮೂರು ದಿನಗಳ ಕಾಲ ತಮ್ಮ‌ ನಾಯಕ ಎಸ್.ಟಿ. ಸೋಮಶೇಖರ್‍ ಗೆ ಸಮಯ ನೀಡಿದ್ದ ಬೆಂಬಲಿಗರು, ಕಳೆದ ಮೂರು ದಿನಗಳ ಹಿಂದಿನ ಸಭೆಯಲ್ಲಿ ಕಾಂಗ್ರೆಸ್‍ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದರು. ತಮ್ಮ ಆಪ್ತರು ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ತಾವೂ ಬಿಜೆಪಿ ಬಿಡಲು ಸೇರ್ಪಡೆಗೆ ಎಸ್.ಟಿ. ಸೋಮಶೇಖರ್ ಪ್ಲಾನ್ ಮಾಡಿದ್ದಾರಾ ಎನ್ನುವ ಪ್ರಶ್ನೆ ಸದ್ಯಕ್ಕೆ ಕಾಡುತ್ತಿದೆ. ಇದು ಬೆಂಬಲಿಗರನ್ನು ಮುಂದೆ ಕಳುಹಿಸಿ ಹಿಂದೆ ಹಿಂಬಾಲಿಸುವ ತಂತ್ರ ಎನ್ನಲಾಗುತ್ತಿದೆ.
ಇದನ್ನೂ ಓದಿ:ಯಶವಂತಪುರ ನಂ.1 ಕ್ಷೇತ್ರವಾಗಿಸುವೆ: ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಹೇಳಿಕೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − one =
Remember me
