ಮಂಗಳೂರು:ಉತ್ಸವವೊಂದರ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆ ದಿಢೀರ್ ಕುಸಿದಿದ್ದು, ರಾಜ್ಯದ ಸಚಿವರು ಹಾಗೂ ಇತರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಈ ವೇದಿಕೆಯನ್ನು ನದಿಯ ಪಕ್ಕದಲ್ಲೇ ಹಾಕಲಾಗಿದ್ದರಿಂದ ಸ್ವಲ್ಪ ಹೆಚ್ಚೂಕಡಿಮೆ ಆಗಿದ್ದರೂ ದುರಂತ ಸಂಭವಿಸಿರಬಹುದಾದ ಸಾಧ್ಯತೆ ಇತ್ತು.
ಮಂಗಳೂರಿನ ಸಸಿಹಿತ್ಲು ಸಮೀಪದ ನಂದಿನಿ ನದಿ ಹತ್ತಿರ ಈ ಘಟನೆ ನಡೆದಿದೆ. ಇಂದು ಆರಂಭವಾಗಿರುವ ಎರಡು ದಿನಗಳ ನಂದಿನಿ ಉತ್ಸವದ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ನಂದಿನಿ ನದಿ ಉತ್ಸವದ ಪ್ರಯುಕ್ತ ನಂದಿನಿಗೆ ಆರತಿ ಬೆಳಗಲು ನದಿ ಪಕ್ಕದಲ್ಲೇ ಸ್ಟೇಜ್ ಹಾಕಲಾಗಿತ್ತು.
ಸಚಿವ ಸಿ.ಪಿ.ಯೋಗೀಶ್ವರ್​ ಉದ್ಘಾಟನೆಗೆ ಮುಂದಾದಾಗ ಅವರೊಂದಿಗೆ ಹೆಚ್ಚು ಜನರು ವೇದಿಕೆ ಮೇಲೆ ನಿಂತಿದ್ದರಿಂದ ಅದು ಕುಸಿದಿದೆ. ಸ್ಟೇಜ್ ನದಿ ಭಾಗಕ್ಕಿಂತ ಹಿಂಬದಿಗೆ ಮುರಿದು ಬಿದ್ದ ಪರಿಣಾಮ ಸಚಿವರು ಸೇರಿ ಇತರ ಗಣ್ಯರು ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಈ ಸಂದರ್ಭ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು.
ಕಂಬಳದಲ್ಲಿ ಮತ್ತೆ ಸಾಧನೆ ಮೆರೆದ ಮಿಜಾರು ಶ್ರೀನಿವಾಸ ಗೌಡ; 8.96 ಸೆಕೆಂಡ್​ಗಳಲ್ಲಿ 100 ಮೀಟರ್ ಓಟ!

ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eighteen =
Remember me
