ಬೆಂಗಳೂರು:ಜನಸಾಮಾನ್ಯರ ಬದುಕು ಸುಸೂತ್ರವಾಗಿ ಸಾಗಲು ಗ್ಯಾರಂಟಿಗಳನ್ನು ಕಟ್ಟಿಕೊಟ್ಟ ರಾಜ್ಯ ಸರ್ಕಾರ, ಜನರ ಬಳಿಗೆ ಆಡಳಿತ ಕೊಂಡೊಯ್ಯಲು ಕಾರ್ಯಾಂಗವನ್ನು ಸಜ್ಜುಗೊಳಿಸಿದೆ.ಸಿದ್ದರಾಮಯ್ಯ ಎರಡನೇ ಅವಧಿ ಆಡಳಿತದ ಮೊದಲ ‘ಜನತಾದರ್ಶನ’ ಜಿಲ್ಲಾ ಉಸ್ತುವಾರಿ ಸಚಿವರ ಸಮಕ್ಷಮ ಆಯಾ ಜಿಲ್ಲೆಯಲ್ಲಿ ಸೋಮವಾರ ಆಯೋಜಿಸಲಾಗಿದೆ.
ಜನರು ಸಲ್ಲಿಸುವ ಪ್ರತಿಯೊಂದು ಅಹವಾಲು ದಾಖಲೀಕರಣ, ಸಲ್ಲಿಕೆಯಾದ ಕುಂದು-ಕೊರತೆಗಳ ಸ್ವರೂಪ ತಿಳಿದು, ತ್ವರಿತವಾಗಿ ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ಆಯಾ ಜಿಲ್ಲಾ ಆಡಳಿತ ಕೈಗೊಂಡ ಕ್ರಮಗಳನ್ನು ಉಸ್ತುವಾರಿ ಸಚಿವರು ಪರಿಶೀಲಿಸಿ, ಸಿಎಂ ನಿರ್ದೇಶನ ಪಾಲಿಸಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಪ್ರತಿಯೊಂದು ಇಲಾಖೆ ಅಧಿಕಾರಿಯಿಂದ ಕೆಲಸ ತೆಗೆದುಕೊಳ್ಳಲು ಸಚಿವರಿಗೆ ಸಾಧ್ಯವಾಗಲಿದೆ. ಜತೆಗೆ ತಾಲೂಕು, ಜಿಲ್ಲಾ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಿದರೆ ಸರ್ಕಾರದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡುತ್ತದೆ.
ಎಚ್.ಡಿ.ದೇವೇಗೌಡರು ಸಿಎಂ ಆದಾಗ ‘ಜನತಾದರ್ಶನ’ ಶುರುವಾಯಿತು. ನಂತರ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಹೆಸರು ಬದಲಿಸಿದರೂ ಕಾರ್ಯಕ್ರಮ ಮುಂದುವರಿಸಿವೆ. ಸಿದ್ದರಾಮಯ್ಯ ಮೊದಲ ಅವಧಿಯುದ್ದಕ್ಕೂ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ, ಬಗೆಹರಿಸುವ ಪರಿಪಾಠ ಚಾಲ್ತಿಯಲ್ಲಿಟ್ಟಿದ್ದರು.
ತಾಲೂಕು, ಜಿಲ್ಲಾ ಹಂತದಲ್ಲಿ ಇತ್ಯರ್ಥ ಸಾಧ್ಯವಿರುವ ಕುಂದು-ಕೊರತೆಗಳನ್ನು ಹೇಳಿಕೊಳ್ಳಲು ಸಿಎಂ ಬಳಿಗೆ ಜನರು ದೌಡಾಯಿಸುವುದು ಹೆಚ್ಚಿರುವುದನ್ನು ಸಿದ್ದರಾಮಯ್ಯ ಗಮನಿಸಿದ್ದರು.ಆಡಳಿತಾತ್ಮಕ ಸಮಸ್ಯೆಗೆ ಜಿಲ್ಲಾ ಸಚಿವರ ಹಂತದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ಜನತಾ ದರ್ಶನ’ಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
ಜನರಿಂದ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಬಗೆಹರಿಸಬೇಕು. ತೀರಾ ಜಟಿಲ ಅಥವಾ ತಾಂತ್ರಿಕ ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲಿ ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಅಧಿಕಾರಿ ವರ್ಗಕ್ಕೆ ಸಿದ್ದರಾಮಯ್ಯ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೆ.30ರಂದು ಸಿಎಂ ಸಿದ್ದರಾಮಯ್ಯ ‘ಜನತಾ ದರ್ಶನ’ ನಡೆಯಲಿದೆ. ಕಾಟಾಚಾರ ಅಥವಾ ತೋರಿಕೆಗೆ ಕಾರ್ಯಕ್ರಮವಾಗದಂತೆ ನೋಡಿಕೊಳ್ಳಲು ಆಯಾ ಇಲಾಖೆಗೆ ಜವಾಬ್ದಾರಿಯನ್ನು ನಿಗದಿಪಡಿಸಿದ್ದಾರೆ.
ಇನ್ನು ಮುಂದೆ ಪ್ರತಿ ತಿಂಗಳು 25ರಂದು ಜಿಲ್ಲಾ ಉಸ್ತುವಾರಿ ಸಚಿವರು, 30ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ’ಜನತಾದರ್ಶನ’ ನಡೆಸಿಕೊಡಲಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳು ಸಕಾಲದಲ್ಲಿ ಇತ್ಯರ್ಥ ಮಾಡಿದರೆ ಜನರಿಗೆ ಅನುಕೂಲ, ಆಡಳಿತದ ಮೇಲೆ ಒತ್ತಡ ತಗ್ಗುವ ಆಶಾಭಾವನೆಯಿದೆ.
ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಎಂ ಜನತಾದರ್ಶನಕ್ಕೆ ರಾಜ್ಯಮಟ್ಟದ ಅಧಿಕಾರಿಗಳು ಹಾಜರಿರಲಿದ್ದಾರೆ. ‘ಜನತಾ ದರ್ಶನ’ಕ್ಕೆ ಜನರೇ ಕೇಂದ್ರ ಬಿಂದು, ಸುಗಮ ಆಡಳಿತವೇ ಗುರಿಯಾಗಿದೆ. ಈ ಕಾರ್ಯಕ್ರಮ ಸರ್ಕಾರದ ವರ್ಚಸ್ಸು ವೃದ್ಧಿಸಿ, ಜನಪ್ರಿಯತೆ ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 4 =
Remember me
