ಆಧ್ಯಾತ್ಮಿಕ ಪಥದಲ್ಲಿ ಮೂರು ಅಂಶಗಳಿವೆ:- ಬುದ್ಧ , ಗುರು ಅಥವಾ ಜ್ಞಾನಿ; ಸಂಘ – ಗುಂಪು ಮತ್ತು ಧರ್ಮ – ನಿಮ್ಮ ಸ್ವಭಾವ, ನಿಮ್ಮ ನಿಜ ಸ್ವಭಾವ. ಬುದ್ಧನ ಸಮೀಪ ಹೋದಷ್ಟೂ ಹೆಚ್ಚು ಆಕರ್ಷಣೆಯನ್ನು ಕಾಣುವಿರಿ; ಜ್ಞಾನಿಗಳಿಂದ ನೀವು ದಣಿಯುವುದೇ ಇಲ್ಲ. ಸಮೀಪವಾ ದಷ್ಟೂ ಹೆಚ್ಚು ನವೀನವಾಗುತ್ತದೆ. ಅದೊಂದು ತಳವಿಲ್ಲದ ಆಳದಂತೆ.
ಗುರುಗಳು ದ್ವಾರ ಮತ್ತು ದ್ವಾರವು ಜಗತ್ತಿಗಿಂತಲೂ ಆಕರ್ಷಕವಾಗಿರುತ್ತದೆ. ಇದರಿಂದಾಗಿ ಜನರು ದ್ವಾರದ ಬಳಿಗೆ ಬರುತ್ತಾರೆ. ಯಾರೋ ಬೀದಿಯಲ್ಲಿದ್ದಾರೆ ಮತ್ತು ಮಳೆ ಗುಡುಗು ಇದೆ ಅಥವಾ ಉರಿಬಿಸಿಲಿದೆ. ಅವರಿಗೆ ಆಶ್ರಯಬೇಕು. ಸುತ್ತಲೂ ನೋಡುತ್ತಾರೆ ಮತ್ತು ದ್ವಾರವನ್ನು ಕಾಣುತ್ತಾರೆ. ದ್ವಾರವು ಹೆಚ್ಚು ಆಕರ್ಷಕವಾಗಿರುತ್ತದೆ, ಸ್ವಾಗತಿಸುತ್ತಿರುತ್ತದೆ, ಅದು ಜಗತ್ತಿನ ಬೇರೆ ಎಲ್ಲದಕ್ಕಿಂತಲೂ ಸಂತೋಷದಾಯಕವಾಗಿರುತ್ತದೆ.
ಜಗತ್ತಿನ ಯಾವುದೂ ನಿಮಗೆ ಅಷ್ಟು ಶಾಂತಿ, ಸಂತೋಷ ಮತ್ತು ಸುಖವನ್ನು ನೀಡುವುದಿಲ್ಲ. ದ್ವಾರದ ಬಳಿ ಬಂದ ನಂತರ ಒಳ ಪ್ರವೇಶಿಸುತ್ತೀರಿ ಮತ್ತು ಗುರುಗಳ ಕಣ್ಣಿನಿಂದ ಜಗತ್ತನ್ನು ನೋಡುತ್ತೀರಿ. ನೀವು ಗುರುಗಳ ಬಳಿಗೆ ಬಂದಿರುವಿರಿ ಎಂಬುದರ ಲಕ್ಷಣವಿದು. ಇಲ್ಲವಾದರೆ ಬೀದಿಯಲ್ಲೆ ನಿಂತು ಬಾಗಿಲನ್ನು ನೋಡುತ್ತಲಿರುತ್ತೀರಿ. ಇದರ ಅರ್ಥವೇನು? ನೀವು ಎದುರಿಸುವ ಪ್ರತಿಯೊಂದು ಪರಿಸ್ಥಿತಿಯಲ್ಲೂ, ಈ ಪರಿಸ್ಥಿತಿ ಗುರುಗಳ ಎದುರಿಗೆ ಬಂದರೆ ಅದನ್ನು ಅವರು ಹೇಗೆ ನಿಭಾಯಿಸುತ್ತಿದ್ದರು ಎಂದು ಆಲೋಚಿಸುತ್ತೀರಿ. ಗುರುಗಳನ್ನು ಈ ರೀತಿಯಾಗಿ ಯಾರಾದರೂ ನಿಂದಿಸಿದ್ದರೆ ಅದನ್ನು ಅವರು ಹೇಗೆ ನಿಭಾಯಿಸುತ್ತಿದ್ದರು? ಎಂದು ಆಲೋಚಿಸುತ್ತೀರಿ.
ಗುರುಗಳು ಕಣ್ಣಿನಿಂದ ಸದಾ ಜಗತ್ತನ್ನು ನೋಡಿ. ಆಗ ಜಗತ್ತು ಮತ್ತಷ್ಟು ಸುಂದರವಾಗಿ ಕಾಣುತ್ತದೆ, ಪ್ರೇಮ, ಸಂತೋಷ, ಸಹಕಾರ, ಕರುಣೆ ಮತ್ತು ಎಲ್ಲಾ ಸದ್ಗುಣಗಳಿಂದಲೂ ತುಂಬಿದಂತೆ ಕಾಣುತ್ತದೆ. ಜಗತ್ತಿನಲ್ಲಿ ಹೆಚ್ಚು ವಿನೋದವಿದೆ. ಬಾಗಿಲಿನಿಂದ ನೋಡಿದಾಗ ಭಯವಿರುವುದಿಲ್ಲ, ಏಕೆಂದರೆ ಆಶ್ರಯವಿದೆ.
ನಿಮ್ಮ ಮನೆಯೊಳಗಿನಿಂದ ಗುಡುಗನ್ನು ನೋಡುತ್ತೀರಿ, ಬಿರುಗಾಳಿಯನ್ನು ನೋಡುತ್ತೀರಿ, ಮಳೆಯನ್ನು ನೋಡುತ್ತೀರಿ, ಹೊಳೆಯುತ್ತಿರುವ ಸೂರ್ಯನನ್ನು ನೋಡುತ್ತೀರಿ. ಒಳಗೆ ಹವಾ ನಿಯಂತ್ರಣವಿದೆ. ತಣ್ಣಗಿದೆ, ಹಿತವಾಗಿದೆ, ಹೊರಗೆ ಉರಿಬಿಸಿಲಿದೆ. ಆದರೆ ಯಾವುದರಿಂದಲೂ ನೀವು ಗೊಂದಲಕ್ಕೊಳಗಾಗುವುದಿಲ್ಲ, ಚೆಲ್ಲಾಪಿಲ್ಲಿಯಾಗಿ ಚದರುವುದಿಲ್ಲ; ನಿಮ್ಮ ಪೂರ್ಣತ್ವವನ್ನು ಯಾವುದರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಷ್ಟೊಂದು ಸುರಕ್ಷತೆಯ ಭಾವ, ಅಷ್ಟೊಂದು ಪೂರ್ಣತೆ ಮತ್ತು ಸಂತೋಷ ಬರುತ್ತದೆ. ಗುರುಗಳನ್ನು ಹೊಂದಿರುವ ಉದ್ದೇಶವೇ ಇದು.
ಜಗತ್ತಿನ ಎಲ್ಲಾ ಸಂಬಂಧಗಳೂ ಮೇಲು ಕೆಳಗಾಗುತ್ತವೆ, ರಾಗ ಮತ್ತು ದ್ವೇಷವಿದೆ. ಇದೇ ಜಗತ್ತು, ಇದೇ ಸಂಸಾರ. ಆದರೆ ಗುರುಗಳು ಒಂದು ಸಂಬಂಧವಲ್ಲ. ಗುರುಗಳನ್ನು ನಿಮ್ಮ ಜಗತ್ತಿನ ಒಂದು ಭಾಗವಾಗಿ ಮಾಡಿಬಿಡಬೇಡಿ. ಗುರುಗಳ ಇರುವಿಕೆಯನ್ನು ಅನುಭವಿಸಿ. ಅದು ಅನಂತವಾದದ್ದು. ಆ ಇರುವಿಕೆ ನಿಮ್ಮೊಡನೆ ಮೊದಲಿನಿಂದಲೂ ಇದೆ, ಈಗಲೂ ನಿಮ್ಮೊಡನಿದೆ ಮತ್ತು ಭವಿಷ್ಯದಲ್ಲೂ ನಿಮ್ಮೊಡನಿರುತ್ತದೆ.
ಎರಡನೆಯ ಅಂಶವೆಂದರೆ ಸಂಘ, ಗುಂಪು. ಗುಂಪು ದೂರದಿಂದ ಆಕರ್ಷಕವಾಗಿರುತ್ತದೆ. ಆದರೆ ಹತ್ತಿರವಾಗುತ್ತಿದ್ದಂತೆಯೆ ನಿಮ್ಮ ಎಲ್ಲಾ ಗುಂಡಿಗಳನ್ನೂ ಒತ್ತುತ್ತದೆ, ನಿಮ್ಮೊಳಗಿನಿಂದ ಬೇಡದಿರುವ ವಿಷಯಗಳೆಲ್ಲವನ್ನೂ ಹೊರತರುತ್ತದೆ. ಅಲ್ಪ ಪರಿಚಯದಿಂದ ಯಾವುದೇ ಗುಂಪು ಒಳ್ಳೆಯದಾಗಿರುತ್ತದೆ. ಆ ಗುಂಪಿನ ಪೂರ್ಣ ಭಾಗವಾಗಿಬಿಟ್ಟರೆ, ಏನೋ ಒಂದು ಕಿರಿಕಿರಿತನ ಎದ್ದು ಬರುವುದನ್ನು ಕಾಣಬಹುದು. ಆದ್ದರಿಂದಲೆ ನಿಮ್ಮ ಗುಂಪಿಗಿಂತಲೂ ಮತ್ತೊಂದು ಗುಂಪು ಉತ್ತಮವಾಗಿರುವಂತೆ ಅನಿಸುತ್ತದೆ.
ಬುದ್ಧ ನಿಮ್ಮನ್ನು ಉತ್ಥಾಪಿಸುತ್ತಾನೆ. ಕೃಪೆಯಿಂದ, ಪ್ರೇಮದಿಂದ, ಜ್ಞಾನದಿಂದ ನಿಮ್ಮನ್ನು ಮೇಲಕ್ಕೆಳೆಯುತ್ತಾನೆ. ಬುದ್ಧ ನಿಮ್ಮನ್ನು ಮೇಲಿಂದ ಎಳೆಯುತ್ತಾನೆ ಮತ್ತು ಸಂಘವು ನಿಮ್ಮನ್ನು ಕೆಳಗಿನಿಂದ ಮೇಲಕ್ಕೆ ತಳ್ಳುತ್ತದೆ. ಧರ್ಮ ಮಧ್ಯದಲ್ಲಿರುತ್ತದೆ. ವಿಪರೀತಗಳೆಡೆಗೆ ಹೋಗದಿರುವುದು ನಿಮ್ಮ ಸ್ವಭಾವ. ಸಮತೋಲನದಿಂದಿರುವುದು, ನಿಮ್ಮ ಹೃದಯಾಂತರಾಳದಿಂದ ಮುಗುಳ್ನಗುವುದು, ಇಡೀ ಅಸ್ತಿತ್ವ ಹೇಗಿದೆಯೊ ಹಾಗೆಯೆ ಸ್ವೀಕರಿಸುವುದು ನಮ್ಮ ಸ್ವಭಾವ. ಸಾಮಾನ್ಯವಾಗಿ ಬುದ್ಧನಿಗಾಗಿ ಹಂಬಲಿಸುತ್ತೀರಿ ಮತ್ತು ಸಂಘವನ್ನು ದ್ವೇಷಿಸುತ್ತೀರಿ, ಬದಲಿಸಲು ಯತ್ನಿಸುತ್ತೀರಿ. ಆದರೆ ಬುದ್ಧ ಅಥವಾ ಸಂಘವನ್ನು ಬದಲಿಸುವುದರಿಂದ ನೀವು ಬದಲಾಗುವುದಿಲ್ಲ.
ಮುಖ್ಯ ಉದ್ದೇಶವೆಂದರೆ ನಿಮ್ಮ ಅಂತರಾಳದ ಕೇಂದ್ರದೆಡೆಗೆ ಬರುವುದು, ಎಂದರೆ ನಿಮ್ಮ ಧರ್ಮವನ್ನು ಕಂಡುಕೊಳ್ಳುವುದು. ಇದು ಮೂರನೆಯ ಅಂಶ. ಧರ್ಮ ಎಂದರೇನು? ಈ ಕ್ಷಣ ಹೇಗಿದೆಯೊ ಹಾಗೆ ನನಗೆ ನೀಡಲಾಗಿದೆ ಮತ್ತು ಇದನ್ನು ಈ ರೀತಿಯಾಗಿ ಸ್ವೀಕರಿಸುತ್ತಿದ್ದೇನೆ ಎಂದು ತಿಳಿಯುವುದು. ಈ ಕ್ಷಣದ ಆಳವಾದ ಸ್ವೀಕಾರ, ಪ್ರತಿ ಕ್ಷಣದ ಆಳವಾದ ಸ್ವೀಕಾರವೆ ಧರ್ಮ. ಇದು ಮೇಲೆದ್ದರೆ ಸಮಸ್ಯೆಯೇ ಇರುವುದಿಲ್ಲ. ಆದ್ದರಿಂದ ನೀವು ನಿಮ್ಮ ಧರ್ಮದಲ್ಲಿದ್ದಾಗ, ನಿಮ್ಮ ಸ್ವಭಾವದಲ್ಲಿದ್ದಾಗ ನೀವು ಜಗತ್ತನ್ನು, ದೈವವನ್ನು ದೂಷಿಸುವುದಿಲ್ಲ.
27 ವಾರಗಳ ಗರ್ಭಪಾತ ತೆಗೆಸಲು ಅನುಮತಿ ನಿರಾಕರಣೆ: ​ಭ್ರೂಣಕ್ಕೂ ಬದುಕುವ ಹಕ್ಕಿದೆ ಎಂದ ಕೋರ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
