ಬೆಂಗಳೂರು:ವಿಶ್ವದ ಅತಿ ದೊಡ್ಡ ಮತ್ತು ಪ್ರಸಿದ್ಧ ಕಾಫಿ ಸಂಸ್ಥೆಯಾದ ಸ್ಟಾರ್​​ಬಕ್ಸ್​​ನ ಸಹ ಸಂಸ್ಥಾಪಕ ಜೆವ್​ ಸೀಗಲ್​ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ, ಪ್ರಸಿದ್ಧ ಮಸಾಲೆ ದೋಸೆ ತಿಂದು, ಫಿಲ್ಟರ್ ​​​​ಕಾಫಿಯನ್ನು ಸವಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (Global Investors Meet 2022) ದಲ್ಲಿ ಭಾಗವಹಿಸುವ ಸಲುವಾಗಿ ಜೆವ್​ ಸೀಗಲ್​ ಬೆಂಗಳೂರಿಗೆ ಬಂದಿದ್ದರು. ಇದೆ ವೇಳೆ ನಗರದ ಪ್ರತಿಷ್ಠಿತ ವಿದ್ಯಾರ್ಥಿ ಭವನಕ್ಕೆ ತೆರಳಿದ್ದಾರೆ. ಅಲ್ಲಿನ ಪ್ರಸಿದ್ಧ ಆಹಾರದ ರುಚಿ ನೋಡಿದ್ದಾರೆ. ಅದರ ಫೋಟೋಗಳನ್ನು ಸ್ವತಃ ವಿದ್ಯಾರ್ಥಿ ಭವನ ತನ್ನ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದೆ.
ಇದಲ್ಲದೇ ಹೊರಡುವ ವೇಳೆ ಹೋಟೆಲ್​​ನ ಅತಿಥಿ ಪುಸ್ತಕದಲ್ಲಿ ತಮ್ಮ ಮೆಚ್ಚುಗೆಯ ನುಡಿಗಳನ್ನು ಈ ರೀತಿ ಬರೆದಿದ್ದಾರೆ. ‘ಸ್ನೇಹಿತರೇ, ನಿಮ್ಮಲ್ಲಿನ ಪ್ರಸಿದ್ಧ ಆಹಾರವಾದ ಮಸಾಲೆ ದೋಸೆ ಮತ್ತು ಕಾಫಿಯನ್ನು ಸೇವಿಸಿ ನನಗೆ ಬಹಳ ಸಂತೋಷವಾಯಿತು. ನಿಮ್ಮ ಅತಿಥ್ಯ, ನಿಮ್ಮ ಗೌರವ ನನಗೆ ಬಹಳ ಸಂತೋಷವನ್ನು ನೀಡಿದೆ. ಇಲ್ಲಿ ಪಡೆದ ಅದ್ಭುತ ಅನುಭವದೊಂದಿಗೆ ಮರಳುತ್ತಿದ್ದೇನೆ, ಧನ್ಯವಾದಗಳು’ ಎಂದು ಬರೆದಿದ್ದಾರೆ, ಜತೆಗೆ 3 ಸ್ಟಾರ್​​ಗಳನ್ನು ಬರೆದು ತಮ್ಮ ಸಹಿಯನ್ನು ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 18 =
Remember me
