ಬೆಂಗಳೂರು:ನೂರಾರು ವರ್ಷದಿಂದ ನಡೆದ ಶ್ರೀರಾಮ ಜನ್ಮಭೂಮಿ ಹೋರಾಟದ ನಿರ್ಣಾಯಕ ಘಟ್ಟಕ್ಕೆ ಸೋಮವಾರ ಚಾಲನೆ ದೊರೆಯಿತು.
ಜನ್ಮಭೂಮಿ ತೀರ್ಥಕ್ಷೇತ್ರ ವತಿಯಿಂದ ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಅಡಿಪಾಯ ತುಂಬಿಸಲು ವೈದಿಕ ಸಂಪ್ರದಾಯದಂತೆ ಚಾಲನೆ ನೀಡಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಕಾರ್ಯದರ್ಶಿಗಳಾದ ಚಂಪತ್ ರಾಯ್, ಡಾ. ಅನಿಲ್ ಮಿಶ್ರ, ಮಹಂತ ದಿನೇಂದ್ರ ದಾಸರ ಉಪಸ್ಥಿತಿಯಲ್ಲಿ ಸೋಮವಾರ ಬೆಳಗ್ಗೆ 10.55ರ ಮುಹೂರ್ತದಲ್ಲಿ ಪೂಜೆ ನೆರವೇರಿತು.

ಒಟ್ಟು 5 ಎಕರೆಯಲ್ಲಿ 2.77 ಎಕರೆ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದೆ. ಗರ್ಭಗುಡಿ ಒಳಗೊಂಡಂತೆ ಪೂರ್ತಿ 2.77 ಎಕರೆ ಭೂಮಿಯನ್ನು 40 ಅಡಿ ಆಳದಷ್ಟು ಅಗೆಯಲಾಗಿದೆ. ಅದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಮುಹೂರ್ತವನ್ನು ನಿಗದಿಪಡಿಸಿತ್ತು.
40 ಅಡಿ ಆಳದ ಅಡಿಪಾಯ ತುಂಬಿಸಿದ ನಂತರ ಶ್ರೀರಾಮ ಮಂದಿರ ನಿಧಾನವಾಗಿ ತನ್ನ ಆಕಾರ ಪಡೆಯಲು ಪ್ರಾರಂಭವಾಗುವುದು. ಇದರ ಜತೆಯಲ್ಲಿಯೇ ಗಣೇಶ, ವಿಷ್ಣು, ಲಕ್ಷ್ಮೀ ಹಾಗೂ ವಿಶ್ವಕರ್ಮರ ಪೂಜಾ ಕಾರ್ಯಕ್ರಮ ಆರಂಭವಾಯಿತು.
ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twelve =
Remember me
