|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಗ್ರಾಮೀಣ ಭಾಗದಲ್ಲೂ ನವೋದ್ಯಮಗಳನ್ನು ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳ ಮೂಲಕ ಸ್ಥಾಪಿಸಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಹೊಸ ವರ್ಷಕ್ಕೆ ಕೊಡುಗೆಯಾಗಿ ಜಾರಿಗೆ ಬರಲಿದೆ. ಸ್ವಾಮಿ ವಿವೇಕಾನಂದ ಸಂಘಗಳನ್ನು ಈ ಮೊದಲು ಗ್ರಾಮ ಪಂಚಾಯಿತಿಗೆ ಒಂದರಂತೆ ತೆರೆಯಲು ಸರ್ಕಾರ ಉದ್ದೇಶಿಸಿತ್ತು. ಆದರೆ, ಹೆಚ್ಚು ಯುವಕರನ್ನು ಸ್ವಉದ್ಯೋಗದಲ್ಲಿ ತೊಡಗಿಸಬೇಕೆಂಬ ಕಾರಣಕ್ಕೆ ಈಗ ಪ್ರತಿ ಗ್ರಾಪಂಗೆ ಎರಡು ಸಂಘ ಸ್ಥಾಪಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 12 ಸಾವಿರ ಸಂಘಗಳು ಡಿಸೆಂಬರ್ ಅಂತ್ಯಕ್ಕೆ ನೋಂದಣಿಯಾಗಲಿವೆ. ಯುವ ಸಬಲೀಕರಣ ಇಲಾಖೆ ಇಂಥದ್ದೊಂದು ಕ್ರಾಂತಿಕಾರಕ ಯೋಜನೆಗೆ ಮುನ್ನುಡಿ ಬರೆದಿದೆ. ರಾಜ್ಯದಲ್ಲಿ 28 ಸಾವಿರ ಹಳ್ಳಿಗಳಿದ್ದು, ಪ್ರತಿ ಗ್ರಾಪಂಗೆ ಎರಡು ಸಂಘಗಳನ್ನು ಸ್ಥಾಪಿಸಿ, ಅವುಗಳನ್ನು ನವೋದ್ಯಮವನ್ನಾಗಿ ಪರಿವರ್ತಿಸಲು ಇಂಬು ನೀಡಲಾಗುತ್ತಿದೆ. ಮೊದಲಿಗೆ ವಿವೇಕಾನಂದ ಸಂಘಗಳನ್ನು ರಚಿಸಲಾಗುತ್ತದೆ. 12 ಸಾವಿರ ಸಂಘಗಳ ಪೈಕಿ ಈಗ 4,700 ನೋಂದಣಿಯಾಗಿವೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ ಸಂಘಗಳ ನೋಂದಣಿ ಮುಕ್ತಾಯವಾಗಲಿದೆ.
ನವೋದ್ಯಮ ಹೇಗೆ?:ಸಂಘಗಳಲ್ಲಿ ಏನೇನು ಚಟುವಟಿಕೆ ಗಳನ್ನು ತೆಗೆದುಕೊಳ್ಳಬಹುದು ಎಂಬ ಮಾಹಿತಿ ಸಿದ್ದಪಡಿಸಲಾಗಿದೆ. ಆರ್ಥಿಕ ನೆರವಿಗೆ ಬ್ಯಾಂಕ್​ಗಳ ಮೂಲಕ ಪ್ರತಿ ಸಂಘಕ್ಕೆ 5 ಲಕ್ಷ ರೂ. ಸಾಲ ನೀಡಲಾಗುತ್ತದೆ. ಅದರಲ್ಲಿ ಸರ್ಕಾರ 1.5 ಲಕ್ಷ ರೂ.ಗಳ ಸಬ್ಸಿಡಿ ನೀಡಲಿದೆ. ಇದಕ್ಕಾಗಿ 180 ಕೋಟಿ ರೂ.ಗಳನ್ನು ಭರಿಸಲಿದೆ. ಜೀವನೋಪಾಯ ಮಿಷನ್​ನಿಂದಲೂ ಸಬ್ಸಿಡಿಯ ನೆರವು ಸಿಗಲಿದೆ. 15 ದಿನ ತರಬೇತಿ: ಕೌಶಲಾಭಿವೃದ್ದಿ ಇಲಾಖೆ, ಎಂಎಸ್​ಎಂಇಯಲ್ಲಿ ನೋಂದಾಯಿತ ‘ವಿಕೆಎಫ್’ ಎಂಬ ಸಂಸ್ಥೆ ನೋಂದಾಯಿತ ಸಂಘಗಳಿಗೆ 15 ದಿನಗಳ ತರಬೇತಿ ಆರಂಭಿಸಿದೆ. ಆಯಾ ಜಿಲ್ಲೆಯಲ್ಲಿ ಏನೇನು ಉತ್ಪನ್ನ ಲಭ್ಯವಿದೆ. ಅದರ ಮೌಲ್ಯವರ್ಧನೆ, ಬ್ರಾ್ಯಂಡಿಂಗ್, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತರಬೇತಿ ನೀಡಲಿದೆ. ಇ-ಕಾಮರ್ಸ್ ವೇದಿಕೆಗಳ ಜತೆಗೂ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಎಷ್ಟು ಉದ್ಯೋಗ ಲಭ್ಯ?:ಪ್ರತಿ ಸಂಘದಲ್ಲಿ 15 ರಿಂದ 20 ಸದಸ್ಯರಿರುತ್ತಾರೆ. ಅಂದಾಜು 2 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಪರೋಕ್ಷವಾಗಿ 5 ಲಕ್ಷ ಉದ್ಯೋಗಾವಕಾಶಗಳನ್ನು ಅಂದಾಜು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು.
ಚಟುವಟಿಕೆ ಆರಂಭ:ಈಗಾಗಲೇ 60 ಸಂಘಗಳಲ್ಲಿ ಚಟುವಟಿಕೆಗಳು ಆರಂಭವಾಗಿವೆ. ನವೋದ್ಯಮಗಳ ಸ್ಥಾಪನೆ ನಿಧಾನವಾಗಿ ಆಗಲಿದೆ. ಮಹಿಳಾ ಸ್ವಸಹಾಯ ಸಂಘಗಳು ಮಹಿಳಾ ಆಧಾರಿತ ಚಟುವಟಿಕೆ ನಡೆಸಿದರೆ ಯುವ ಸಂಘಗಳಲ್ಲಿ ಯುವ ಸಮುದಾಯವನ್ನು ತೊಡಗಿಸುವ ಮೂಲಕ ಸನ್ಮಾರ್ಗದತ್ತ ಸೆಳೆಯಲಾಗುತ್ತಿದೆ.
ರಾಜ್ಯಾದ್ಯಂತ 6 ಸಾವಿರ ಗ್ರಾಮ ಪಂಚಾಯತ್​ಗಳಲ್ಲಿ ತಲಾ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘಗಳನ್ನು ಡಿಸೆಂಬರ್ ಅಂತ್ಯದ ವೇಳೆ ರಚಿಸಲಾಗುವುದು. ಈ 12 ಸಾವಿರ ಸಂಘಗಳಿಗೆ ಕೌಶಲ ತರಬೇತಿ ನೀಡುವ ಮೂಲಕ ನವೋದ್ಯಮಗಳಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಇ-ಕಾಮರ್ಸ್ ವೇದಿಕೆಯಲ್ಲಿರುವ ವಿವಿಧ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
|ಡಾ. ಕೆ.ಸಿ. ನಾರಾಯಣಗೌಡಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ
ಗ್ರೂಪ್ ಟಾಕ್:ನೋಂದಾಯಿತ ಸಂಘಗಳ ನಡುವೆ ವರ್ಚುವಲ್​ನಲ್ಲಿ ಪರಸ್ಪರ ನವೋದ್ಯಮ ಸ್ಥಾಪನೆ, ಕಚ್ಚಾ ಪದಾರ್ಥಗಳ ಸರಬರಾಜು ಸೇರಿದಂತೆ ವಿವಿಧ ವಿಚಾರಗಳಲ್ಲಿ ಗ್ರೂಪ್ ಟಾಕ್ ನಡೆಯುತ್ತಿದೆ. ಅದೊಂದು ವಿಶೇಷ ಪ್ರಯತ್ನವಾಗಿದೆ.
ಬಾಗಲಕೋಟೆ:ಸೆಣಬು, ಹಾಲು ಹಾಗೂ ಕಾರ್ನ್ ಮೌಲ್ಯವರ್ಧನೆಬಳ್ಳಾರಿ:ಹತ್ತಿ, ಅಂಜೂರ ಮತ್ತು ಮೆಣಸಿನಕಾಯಿ ಮೌಲ್ಯವರ್ಧನೆ, ಕಲ್ಲಂಗಡಿ ಸಂಸ್ಕರಣೆಬೆಳಗಾವಿ:ಬಹು ತೈಲ ಕ್ಲಸ್ಟರ್, ಹಾಲು, ಕಬ್ಬು, ಜವಳಿಬೆಂಗಳೂರು ಗ್ರಾಮಾಂತರ:ಬಾಳೆ, ದೇಸಿ ಹಸು ಸಾಕಣೆ, ಜೇನು ಮೇಣಬೆಂಗಳೂರು ನಗರ:ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾವಯವ ಆಧಾರಿತ ವಸ್ತುಗಳ ತಯಾರಿಬೀದರ್:ಮಲ್ಟಿ ಗ್ರೇನ್ ಕ್ಲಸ್ಟರ್, ಬಿದರಿ ಕಲೆ, ಹಣ್ಣುಗಳ ಸಂಸ್ಕರಣೆ, ಮಿಟ್ಟಿ ಸೋಪ್ ಹಾಗೂ ಸೌಂದರ್ಯವರ್ಧಕಗಳ ತಯಾರಿಚಾಮರಾಜನಗರ:ಅರಿಶಿಣ, ಲಂಬಾಣಿ ಕಲೆ, ಹುಲ್ಲು, ಬಿದಿರುಚಿಕ್ಕಬಳ್ಳಾಪುರ:ಮಹಿಳೆಯರ ನೇತೃತ್ವದ ಆಹಾರ ಕ್ಲಸ್ಟರ್, ಕಾರ್ಪೆಂಟರ್ ವಿನ್ಯಾಸ, ಬಾಗೇಪಲ್ಲಿ ಟೆಕ್ಸ್​ಟೈಲ್ಚಿಕ್ಕಮಗಳೂರು:ತೆಂಗಿನ ಉಪ ಉತ್ಪನ್ನಗಳು, ಅಡಕೆ, ಸಾಂಬಾರ ಪದಾರ್ಥ;ಚಿತ್ರದುರ್ಗ:ಜವಳಿ, ಸಿರಿಧಾನ್ಯ ಮೌಲ್ಯವರ್ಧನೆ, ಮೊಳಕಾಲ್ಮೂರು ಸೀರೆ, ಬಾಳೆಹಣ್ಣು ಮೌಲ್ಯವರ್ಧನೆ;ದಕ್ಷಿಣ ಕನ್ನಡ:ಮೀನು ಮೌಲ್ಯವರ್ಧನೆ, ಇ-ತ್ಯಾಜ್ಯ ನಿರ್ವಹಣೆ, ಸಮುದ್ರ ಕಳೆ ನಿರ್ವಹಣೆ, ದೋಣಿಗಳ ನಿರ್ವಣ, ಫಿಶ್ ವೇಸ್ಟ್ ನಿರ್ವಹಣೆ, ತೆಂಗು ಉತ್ಪನ್ನಗಳ ಕ್ಲಸ್ಟರ್ದಾವಣಗೆರೆ:ಕಿರು ಧಾನ್ಯ ಮೌಲ್ಯವರ್ಧನೆ, ಬಾಳೆ ಮೌಲ್ಯವರ್ಧನೆಧಾರವಾಡ:ಕಸೂತಿ, ಮೆಕ್ಕೆಜೋಳ ಕ್ಲಸ್ಟರ್ ಗದಗ: ಮಲ್ಟಿ ಆಯಿಲ್ ಕ್ಲಸ್ಟರ್ಹಾಸನ:ಗೋಲ್ಡ್ ಕ್ಲಸ್ಟರ್, ಅಡಕೆ ಉಪ ಉತ್ಪನ್ನಗಳ ಕ್ಲಸ್ಟರ್, ಶುಂಠಿ ಮೌಲ್ಯವರ್ಧನೆಹಾವೇರಿ:ಎಣ್ಣೆಕಾಳು ಕ್ಲಸ್ಟರ್, ಗೋಸ್ವರ್ಗ ಕಲಬುರಗಿ: ಕಬ್ಬು, ತೊಗರಿ ಕ್ಲಸ್ಟರ್ಕೊಡಗು:ಜೇನು ಉಪ ಉತ್ಪನ್ನಗಳುಕೋಲಾರ:ತರಕಾರಿ, ಹಣ್ಣುಗಳ ಮೌಲ್ಯವರ್ಧನೆಮಂಡ್ಯ:ಸಾವಯವ ಬೆಲ್ಲ, ಸಗಣಿ ಉತ್ಪನ್ನಗಳುಮೈಸೂರು:ಇನ್​ಲೇ ಚಿತ್ರ, ಗ್ರಾಮೀಣ ಡಿಜಿಟಲ್ ಲೈಬ್ರರಿ, ಹತ್ತಿ, ಕಿರು ಧಾನ್ಯ, ಕೃಷಿ ತ್ಯಾಜ್ಯ, ಹವಾಮಾನ ಬದಲಾವಣೆ ಮಿಟಿ ಗೇಷನ್ ಯೋಜನೆ, ಹಸಿಮೆಣಸಿನ ಕಾಯಿ ಕ್ಲಸ್ಟರ್;ರಾಮನಗರ:ಗ್ರಾಮೀಣ ಸಾಕ್ಷರತಾ ಕಾರ್ಯಕ್ರಮ, ಅವೇಕ್ ಆಹಾರ ಮಳಿಗೆ, ಆರ್ಥಿಕ ಸಾಕ್ಷರತೆಶಿವಮೊಗ್ಗ:ಅಡಕೆ ಉತ್ಪನ್ನಗಳು, ಕೋಳಿ ಸಾಕಣೆ, ಆಭರಣ ಕ್ಲಸ್ಟರ್ತುಮಕೂರು:ತೆಂಗಿನ ಉತ್ಪನ್ನಗಳು, ನೀರಾ, ಶೇಂಗಾ ಉತ್ಪನ್ನಗಳ ಕ್ಲಸ್ಟರ್ಉಡುಪಿ:ಕುಂಬಾರಿಕೆ, ದೋಣಿ ನಿರ್ವಣ, ಗೋಡಂಬಿ, ಸಮುದ್ರ ಕಳೆ ನಿರ್ವಹಣೆ, ಪಶ್ವಿಮಘಟ್ಟ ಅರಣ್ಯ ಉತ್ಪನ್ನಗಳ ಕ್ಲಸ್ಟರ್, ಶಿಲಾ ಕಲೆ, ಸಮುದ್ರ ಆಹಾರ ಕ್ಲಸ್ಟರ್ಉತ್ತರ ಕನ್ನಡ:ಗೋಡಂಬಿ, ತೆಂಗು, ಕೋಕಂ, ಅರಣ್ಯ ಉತ್ಪನ್ನಗಳ ಸಂಗ್ರಹ, ಮೀನು ಮೌಲ್ಯವರ್ಧನೆ, ಜೇನು, ಶಿಲಾ ಕಲೆ, ಶ್ರೀಗಂಧ ಕಲೆಯ ಕ್ಲಸ್ಟರ್ವಿಜಯನಗರ:ಅಂಜೂರ, ಕೆಂಪು ಮೆಣಸಿನಕಾಯಿ ಕ್ಲಸ್ಟರ್ವಿಜಯಪುರ:ಹಣ್ಣು ಸಂಸ್ಕರಣೆ, ಬೆಲ್ಲ, ದ್ರಾಕ್ಷಿ , ದಾಳಿಂಬೆ ಕ್ಲಸ್ಟರ್ಯಾದಗಿರಿ:ಶೇಂಗಾ, ಪೌಷ್ಟಿಕ ಆಹಾರಗಳ ಯೋಜನೆ, ಮೆಕಾನಿಕಲ್, ತೊಗರಿ, ತ್ಯಾಜ್ಯ ಹತ್ತಿ ಸಂಸ್ಕರಣೆ ಕ್ಲಸ್ಟರ್.
ನಿದ್ರೆ ಬರುತ್ತಿಲ್ಲ ಅಂತ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತುರ್ತು ಕರೆ; ಪಕ್ಕದಮನೆಯಾತನ ಗೊರಕೆ ನಿಲ್ಲಿಸುವಂತೆ ದೂರು..

ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
