ಬೆಂಗಳೂರು:ಕರೊನಾ ಸೋಂಕಿನ ವಿಚಾರದಲ್ಲಿ ಈ ವರ್ಷದ ಮೊದಲ ದಿನದಿಂದಲೇ ಪ್ರಕರಣ ಏರುತ್ತಲೇ ಬಂದಿದ್ದು, ದೈನಂದಿನ ಕರೊನಾ ಸೋಂಕಿನ ಸಂಖ್ಯೆ 50 ಸಾವಿರವನ್ನೂ ದಾಟಿ ಸಾರ್ವಜನಿಕರು ಹಾಗೂ ಸರ್ಕಾರ ಕಂಗೆಡುವಂತೆ ಮಾಡಿತ್ತು.
ಆದರೆ ಕಳೆದ ಕೆಲವು ದಿನಗಳಿಂದ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದ್ದು, ದಿನೇದಿನೆ ಸಮಾಧಾನ ಪಡುವಂತಹ ಸಂಗತಿಗಳೇ ಕಂಡುಬರುತ್ತಿವೆ. ಮಾತ್ರವಲ್ಲ ರಾಜ್ಯ ಇದೀಗ ಇನ್ನಷ್ಟು ಸಮಾಧಾನ ಪಡುವಂಥ ವಾತಾವರಣ ಉಂಟಾಗಿದೆ.
ಮೊನ್ನೆ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ದರ ಒಂದಂಕಿಗೆ ಇಳಿದಿದ್ದರೆ, ನಿನ್ನೆ ರಾಜ್ಯದಲ್ಲಿನ ಕರೊನಾ ಪಾಸಿಟಿವಿ ದರವೂ ಒಂದಂಕಿಗೆ ಇಳಿದಿದೆ. ಅಂದರೆ ಫೆ.4ರಂದು ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ. 9.17ಕ್ಕೆ ಆಗಿದ್ದು, ಫೆ.5ರಂದು ರಾಜ್ಯದಲ್ಲಿನ ಕರೊನಾ ಪಾಸಿಟಿವಿಟಿ ದರ ಶೇ. 9.04ಕ್ಕೆ ಇಳಿದಿದೆ.
ಇದನ್ನೂ ಓದಿ:ವರ್ಷಾರಂಭದ ಬಳಿಕ ಇದೀಗ ಭಾರಿ ಸಮಾಧಾನ; ಗಣನೀಯವಾಗಿ ಇಳಿದ ಕರೊನಾ ಪ್ರಕರಣ
ಇಂದು ಇನ್ನೂ ಸಮಾಧಾನ ಪಡುವಂತಹ ಅಂಕಿ-ಅಂಶ ಹೊರಹೊಮ್ಮಿದೆ. ದೈನಂದಿನ ಕರೊನಾ ಪ್ರಕರಣ ಈ ಜ.1ರಂದು ಒಂದು ಸಾವಿರ ದಾಟಿ ನಂತರ ತೀವ್ರಗತಿಯಲ್ಲಿ ಏರಿ ದೈನಿಕ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದೂ ಇದೆ. ಆದರೆ ಕಳೆದ ಕೆಲವು ದಿನಗಳಿಂದ ದೈನಂದಿನ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತ ಬಂದಿದೆ. ಅದಾಗ್ಯೂ ರಾಜ್ಯದಲ್ಲಿನ ದೈನಿಕ ಕರೊನಾ ಪ್ರಕರಣಗಳ ಸಂಖ್ಯೆ ಹತ್ತು ಸಾವಿರದ ಮೇಲೆಯೇ ಇತ್ತು.
ಫೆ. 4ರಂದು ರಾಜ್ಯದಲ್ಲಿ ದೈನಂದಿನ ಕರೊನಾ ಪ್ರಕರಣ 14,950 ಆಗಿದ್ದು, ಫೆ. 5ರಂದು ಅದು 12,009 ಆಗಿತ್ತು. ಆದರೆ ಇಂದು ದೈನಿಕ ಕರೊನಾ ಪ್ರಕರಣಗಳ ಸಂಖ್ಯೆ ಹತ್ತು ಸಾವಿರಕ್ಕಿಂತಲೂ ಕೆಳಕ್ಕೆ ಇಳಿದಿದೆ. ಅಂದರೆ ಇವತ್ತು ರಾಜ್ಯದಲ್ಲಿ ಹೊಸದಾಗಿ 8,425 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ:ರಾಜ್ಯದಲ್ಲಿನ ಪಾಸಿಟಿವಿಟಿ ದರವೂ ಒಂದಂಕಿಗೆ ಇಳಿಕೆ: ಗಣನೀಯವಾಗಿ ತಗ್ಗಿದ ಕರೊನಾ ಸೋಂಕು
ಇನ್ನೊಂದೆಡೆ ಪಾಸಿಟಿವಿಟಿ ದರದಲ್ಲೂ ಇನ್ನಷ್ಟು ಇಳಿಕೆಯಾಗಿದ್ದು, ಇಂದು ಅದು ಶೇ.6.5ಕ್ಕೆ ಕುಸಿದಿದೆ. ಅದಾಗ್ಯೂ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 47 ಮಂದಿ ಕರೊನಾಗೆ ಬಲಿಯಾಗಿದ್ದು, ಜನರು ನಿರ್ಲಕ್ಷ್ಯ ವಹಿಸುವಂತಿಲ್ಲ ಎಂಬುದನ್ನು ಸೂಚಿಸಿದೆ.
ಲತಾ ಮಂಗೇಶ್ಕರ್​ ಜತೆ ವಾಜಪೇಯಿಯನ್ನೂ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು; ಕಾರಣಗಳಿವು…
ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ ಡಿಜಿಟಲ್ ಸ್ಪರ್ಶ
ಮೊಬೈಲ್​ಫೋನ್ ಬೆಲೆ 12 ಸಾವಿರ, ರುದ್ರಾಕ್ಷಿ ಹಾರ 20 ಸಾವಿರ ರೂ.: ಯೋಗಿ ಆದಿತ್ಯನಾಥ್​ ಆಸ್ತಿ ಘೋಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 16 =
Remember me
