ಬೆಂಗಳೂರು:“ಎಲ್ಲಾ ದಿನನಿತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆಯಿಂದ ಜನಜೀವನ ದುರ್ಬರವಾಗಿದೆ. ಆದ್ರೆ, ಇವುಗಳ ಬಗ್ಗೆ ಕಿಂಚಿತ್ತೂ ಗಮನಹರಿಸದೆ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವವರ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನ ವಿರೋಧಿಯಾಗಿದೆ. ಆಡಳಿತವನ್ನು ದುರುಪಯೋಗಪಡಿಸಿಕೊಂಡು ದಬ್ಬಾಳಿಕೆಯ ಕ್ರೌರ್ಯವನ್ನು ಮೆರೆಯುತ್ತಿದೆ” ಎಂದು ಬಿಜೆಪಿ ಟ್ವೀಟ್​ ಮಾಡಿದೆ.
ಇದನ್ನೂ ಓದಿ:ನನಗೆ ನಿದ್ದೆ ಬರುತ್ತಿಲ್ಲವೆಂದು ಕಣ್ಣೀರಿಟ್ಟ ನಟ ದುಲ್ಕರ್ ಸಲ್ಮಾನ್; ಭಾನುವಾರ ರಾತ್ರಿ ವಿಡಿಯೋ ಪೋಸ್ಟ್.. ತಕ್ಷಣ ಡಿಲೀಟ್
“ಭಾರತದ ಭವಿಷ್ಯದ ಪ್ರಜೆಗಳಿಗೆ ರಾಷ್ಟ್ರೀಯತೆಯ ಚಿಂತನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ, ಬಿಜೆಪಿ ಸರ್ಕಾರ ತಂದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನು ಪರಿಷ್ಕರಿಸಿದೆ. ತಮ್ಮ ಬಾಲಬಡುಕತಿಗಳ ಪಠ್ಯವನ್ನು ತುರುಕಿ, ಮಕ್ಕಳ ವಿಚಾರದಲ್ಲಿಯೂ ಸಹ ತನ್ನ ದ್ವೇಷದ ಅಂಗಡಿಯನ್ನು ಈ ನಾಚಿಕೆಗೇಡು ಸರ್ಕಾರ ಮುಂದುವರೆಸಿದೆ” ಎಂದು ಟ್ವೀಟ್​ ಮಾಡಿದೆ.
“ಈ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರ ಜಗಳದಲ್ಲಿ ಜಿ. ಪರಮೇಶ್ವರ್​ ಹಾಗೂ ಖರ್ಗೆ ಬಣಗಳು ಲಾಭ ಪಡೆಯಲು ಹವಣಿಸಿದ್ದವು. ಆದ್ರೆ, ಇವರಿಬ್ಬರ ಕುರ್ಚಿ ಕಾಳಗದಲ್ಲಿ ಕಾಂಗ್ರೆಸ್‌ನ ಬಣಗಳು ಸೇರಿ ಸರ್ಕಾರ ಸಹ ಬಡವಾಗಿದ್ದು, ಇದರ ನೇರ ಪರಿಣಾಮ ರಾಜ್ಯದ ಜನತೆಯ ಮೇಲೆ ಬೀರುತ್ತಿದೆ. ಕಾಂಗ್ರೆಸ್‌ನ ಈ ಎಲ್ಲಾ ಜನವಿರೋಧಿ ನೀತಿಗಳ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ಬಿಜೆಪಿ ಸದನದ ಹೊರಗೆ ಹಾಗೂ ಒಳಗೆ ರಾಜ್ಯದ ಜನತೆಯ ಪರ ಹೋರಾಟ ನಡೆಸಲಿದೆ” ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್​ ಮಾಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fourteen =
Remember me
