ಬೆಂಗಳೂರು:ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ, ಸಹ ಉಸ್ತುವಾರಿಯನ್ನು ನೇಮಕ ಮಾಡಲಾಗಿದೆ. ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕವಾಗಿದ್ದಾರೆ.
ಇದನ್ನೂ ಓದಿ:ಬಿಹಾರಕ್ಕೆ ಸೇತುವೆ ಕಂಟಕ: ಕಳೆದ 17 ದಿನಗಳಲ್ಲಿ 12ನೇ ಸೇತುವೆ ಕುಸಿತ, 11 ಎಂಜಿನಿಯರ್‌ ಅಮಾನತು
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿದ್ದ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ರಾಜ್ಯ ಬಿಜೆಪಿ ನೂತನ ಉಸ್ತುವಾರಿಯಾಗಿ ಮುಂದುವರಿಸಲಾಗಿದೆ.
ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದು, ಕರ್ನಾಟಕದ ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕ ಮಾಡಲಾಗಿದೆ.
ರಾಜ್ಯ ಉಸ್ತುವಾರಿಗಳಾಗಿ ನೇಮಕಗೊಂಡ ಶ್ರೀ@AgrawalRMDಅವರಿಗೆ ಮತ್ತು ರಾಜ್ಯ ಸಹ ಉಸ್ತುವಾರಿಗಳಾಗಿ ನೇಮಕಗೊಂಡ ಶ್ರೀ@ReddySudhakar21ಅವರಿಗೆ ಅಭಿನಂದನೆಗಳು.pic.twitter.com/touVUnv9Vf
— BJP Karnataka (@BJP4Karnataka)July 5, 2024

ಅರುಣ್ ಸಿಂಗ್ ಅವರು ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿದ್ದರು. ಇನ್ನು ರಾಧಮೋಹನ್ ದಾಸ್ ಅವರು ಲೋಕಸಭೆ ಚುನಾವಣೆಯ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದರು. ಇದೀಗ ಅರುಣ್ ಸಿಂಗ್ ಅವರನ್ನ ಬದಲಿಸಿ ರಾಧಮೋಹನ್ ದಾಸ್ ಅವರನ್ನು ರಾಜ್ಯ ಬಿಜೆಪಿ ಉಸ್ತುವರಿಯನ್ನಾಗಿ ನೇಮಕ ಮಾಡಲಾಗಿದೆ.
ನೆರೆಯ ರಾಜ್ಯ ಕೇರಳಕ್ಕೆ ಪ್ರಭಾರಿಯಾಗಿ ಪ್ರಕಾಶ್​ ಜಾವ್ಡೇಕರ್​ ಹಾಗೂ ಸಹ ಪ್ರಭಾರಿಯಾಗಿ ಅಪರಾಜಿತಾ ಸಾರಂಗಿ ನೇಮಕವಾಗಿದ್ದಾರೆ. ಗೋವಾಕ್ಕೆ ಪ್ರಭಾರಿಯಾಗಿ ಅಶಿಶ್​ ಸೂದ್​ ನೇಮಕವಾಗಿದ್ದಾರೆ. ಕೆಲವೇ ತಿಂಗಳಿನಲ್ಲಿ ಚುನಾವಣೆ ಎದುರಿಸಲಿರುವ ಸಂಸದ ಲಕ್ಷ್ಮೀಕಾಂತ್ ಬಜ್ಪಾಲ್ ನೇಮಕಗೊಂಡಿದ್ದಾರೆ.
ಕಾಂಗ್ರೆಸ್​ ಸೇರ್ಪಡೆ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿಆರ್​ಎಸ್ ಪಕ್ಷದ ಕೇಶವ್ ರಾವ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 7 =
Remember me
