ಬೆಂಗಳೂರು:ಅಮೃತ ಕಾಲದಲ್ಲಿ ದೇಶದ ಹಿರಿಮೆ-ಗರಿಮೆ ಬಗ್ಗೆ ಹೆಮ್ಮೆ, ದೇಶಾಭಿಮಾನ ಬೆಳೆಸಲು ಉದ್ದೇಶಿತ ಬಿಜೆಪಿಯ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ಬುಧವಾರ ಪ್ರಾರಂಭಿಸಲಿದೆ. ನೆಲ, ಜಲ ಸಂಸ್ಕೃತಿ, ಪರಂಪರೆಯ ಶ್ರೇಷ್ಠತೆ, ದೇಶಾಭಿಮಾನ ಸಾರಲಿದೆ.
ಪ್ರಧಾನಿ ನರೇಂದ್ರ ಮೋದಿ ಅಭಿಲಾಷೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ಅ.30ರವರೆಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಪಕ್ಷದ ರಾಜ್ಯ ಸಮಿತಿ ಹಮ್ಮಿಕೊಂಡಿದೆ.ಅಭಿಯಾನದ ಮುಖೇನ ಕಾರ್ಯಕರ್ತರು ಪ್ರತಿ ಮನೆಗೆ ತಲುಪಲಿದ್ದಾರೆ. ಆ ಮನೆಯ ಕುಟುಂಬದ ಸದಸ್ಯರೊಂದಿಗೆ ಆತ್ಮೀಯ ಮಾತುಕತೆ ನಡೆಸಿ, ಮನೆಯಂಗಳದ ಮಣ್ಣು ಸಂಗ್ರಹಿಸುವರು.
ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದೆ. ಬೂತ್‌ಮಟ್ಟದ ಕಾರ್ಯಕರ್ತರು ಸ್ವಯಂಸೇವಕರ ರೀತಿಯಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ದೇಶ ಸಾಧಿಸುತ್ತಿರುವ ಪ್ರಗತಿ, ಅಭಿವೃದ್ಧಿ ಲಿತಾಂಶ, ವಿಭಿನ್ನ ಆಲೋಚನೆ, ಹೊಸ ಯೋಜನೆಗಳು ಸರ್ವಾಂಗೀಣ ಪ್ರಗತಿಗೆ ಸಾಧ್ಯವಾಗಿಸಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಿಸಲಿರುವ ‘ಅಮೃತ ಉದ್ಯಾನವನ’ಕ್ಕೆ ಮನೆಯಂಗಳದಿ ಸಂಗ್ರಹಿಸಿದ ಮಣ್ಣು ಬಳಕೆಯಾಗಲಿದೆ ಎಂದು ಗ್ರಾಮಸ್ಥರಿಗೆ ತಿಳಿಸಲಿದ್ದಾರೆ.
ಗ್ರಾಮ, ಮಂಡಲಮಟ್ಟದಲ್ಲಿ ಮನೆ ಸಂಪರ್ಕದ ವೇಳೆ ಆಯಾ ಗ್ರಾಮದ ಸಾಹಿತಿಗಳು, ಸಾಧಕರು, ಗಣ್ಯ ವ್ಯಕ್ತಿಗಳೊಂದಿಗೆ ಕಾರ್ಯಕರ್ತರು ಸಂವಾದ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಕಾಲದ ಪರಿಕಲ್ಪನೆ, 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತವಾಗಬೇಕು, ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಬೇಕು ಎನ್ನುವ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಭಿಯಾನ ಮತ್ತದರ ಭಾಗವಾಗಿರುವ ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಲವು ಹಂತದ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ತಂಡವು ಮೇಲ್ವಿಚಾರಣೆ, ಪ್ರತಿದಿನದ ವರದಿ ತರಿಸಿಕೊಳ್ಳಲಿದೆ.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ಜಗದೀಶ್ ಹಿರೇಮನಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಎಂಎಲ್‌ಸಿ ಅರುಣ್ ಶಹಪುರ ರಾಜ್ಯ ತಂಡದಲ್ಲಿದ್ದಾರೆ.ಅದೇ ರೀತಿ ಜಿಲ್ಲೆ, ಮಂಡಲ, ಶಕ್ತಿ ಕೇಂದ್ರಮಟ್ಟದಲ್ಲಿ ಸಂಯೋಜಕರು, ಗ್ರಾ.ಪಂ.ಮಟ್ಟದಲ್ಲಿ ತಂಡ, ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಕ್ಕೆ ತಲಾ ಮೂವರನ್ನು ಒಳಗೊಂಡ ವಿಶೇಷ ತಂಡಗಳು ರಚನೆಯಾಗಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 13 =
Remember me
