ಬೆಂಗಳೂರು:ರಾಜಕೀಯ ವೃತ್ತಿಯಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ(CMSiddarmaiah)ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್(Tweet)ಮಾಡಿರುವ ಬಿಜೆಪಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನೀವು ರಾಜ್ಯದ ಜನತೆಗೆ ಮೋಸ ಮಾಡಿದ್ದೀರಿ ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಟೀಕಿಸಿದೆ.
ಇದನ್ನೂ ಓದಿ:ಕಾರು ಗುದ್ದಿ 10 ಅಡಿ ಮೇಲಕ್ಕೆ ಹಾರಿ ಚಲಿಸುತ್ತಿದ್ದ ಟೆಂಪೋ ಟ್ರಾವೆಲ್​ ಮೇಲೆ ಬಿದ್ದ ಬೈಕ್​​…!
ಬಿಜೆಪಿ(BJP)ಮಾಡಿರುವ ಟ್ವೀಟ್ ಹೀಗಿದೆ, “ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರಿಗೆ ಕಿವಿ ಮೇಲೆ ಹೂವಿಟ್ಟು ಮುಖ್ಯಮಂತ್ರಿ ಆದವರು ತಾವು ಸಿದ್ದರಾಮಯ್ಯನವರೆ, ತಮಗೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯಾವುದೇ ಅರ್ಹತೆ ಉಳಿದಿಲ್ಲ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ಕೈಕೊಟ್ಟ ಮುಂಗಾರು; ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳ‌ ಮದುವೆ
“21ನೇ ಶತಮಾನದ ಸತ್ಯಹರಿಶ್ಚಂದ್ರರಂತೆ ವರ್ತಿಸುವ ತಮ್ಮ ಈ ಹಾಸ್ಯಾಸ್ಪದ ಹೇಳಿಕೆ ಕೇಳಿ ‘ನಾನು ಮುಖ್ಯಮಂತ್ರಿಯಾಗಿ ಮುಂದುವರಿತೀನೋ ಇಲ್ವೊ ಬೇರೆ ವಿಚಾರ, ಡಿ.ಕೆ.ಶಿವಕುಮಾರ್(DK Shivakumar)ಎಂದಿಗೂ ಮುಖ್ಯಮಂತ್ರಿ ಆಗಲ್ಲ’ ಎಂದು ತಾವು ಹೇಳಿರುವುದೊಂದೇ ತಮ್ಮ ಜೀವನದಲ್ಲಿ ತಾವು ನುಡಿದಿರುವ ಸತ್ಯ ಎಂದು ಅನೇಕ ಕಾಂಗ್ರೆಸ್(Congress)ನಾಯಕರು ಪಿಸುಗುಡುತ್ತಿದ್ದಾರೆ. ಈ ಬಗ್ಗೆ ಮಹಾದೇವಪ್ಪನವರಿಗೋ, ಎಂ.ಬಿ. ಪಾಟೀಲರಿಗೋ ಪರಿಶೀಲಿಸುವುದಕ್ಕೆ ಹೇಳಿ” ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twenty =
Remember me
