ಮಲೆನಾಡಿನ ಅದರಲ್ಲೂ ಶಿವಮೊಗ್ಗ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ಮಂಡಿಸುವ ಆಯವ್ಯಯದ ಮೇಲೆ ಈ ಭಾಗದ ಜನರ ನಿರೀಕ್ಷೆ ಹೆಚ್ಚಿದೆ. ಶಂಕುಸ್ಥಾಪನೆ ನೆರವೇರಿರುವ ಕಾಮಗಾರಿಗಳಿಗೆ ಅನುದಾನ ಮೀಸಲಿಡುವ ಜತೆಗೆ ಹೊಸ ಯೋಜನೆಗಳನ್ನು ಘೊಷಿಸುವ ವಿಶ್ವಾಸವಿದೆ. ಕಾಫಿ, ಅಡಕೆ ಬೆಳೆಗಾರರ ಹಿತ ಕಾಯುವ ಜತೆಗೆ ನೀರಾವರಿ ಯೋಜನೆಗಳು, ರೈಲ್ವೆ ಸಂಪರ್ಕ ಹೆಚ್ಚಳ, ಮಂಗನ ಕಾಯಿಲೆಗೆ ಶಾಶ್ವತ ಪರಿಹಾರ, ಕೈಗಾರಿಕೆ, ಪ್ರವಾಸೋದ್ಯಮ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಯೋಜನೆ ಘೊಷಿಸುವ ನಿರೀಕ್ಷೆ ಇದೆ.
1. ಮತ್ತೆರಡು ವಿವಿ?
ಯಡಿಯೂರಪ್ಪ ಡಿಸಿಎಂ ಆಗಿದ್ದಾಗಲೇ ಆಯುಷ್ ವಿವಿ ಸ್ಥಾಪನೆಗೆ ಸ್ಥಳ ಗುರುತಿಸಿದ್ದರು. 100 ಎಕರೆ ಭೂಮಿ ಮೀಸಲಿರಿಸಿದ್ದರು. ಈ ಬಜೆಟ್​ನಲ್ಲಿ ಅನುದಾನ ಘೊಷಿಸಲು ಹಲವು ಸಂಘ-ಸಂಸ್ಥೆಗಳು ಸಿಎಂ ಮೇಲೆ ಒತ್ತಡ ಹೇರಿವೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ವಿವಿ ಸ್ಥಾಪನೆಗೆ ಸಿಎಂ ಒಲವು ತೋರಿದ್ದು, ಬಜೆಟ್​ನಲ್ಲಿ ಘೊಷಣೆ ನಿರೀಕ್ಷೆ ಇದೆ.
2. ಅಡಕೆ ಟಾಸ್ಕ್​ಫೋರ್ಸ್​ಗೆ ಬಲ
ಅಡಕೆ ಬೆಳೆಗಾರರ ಹಿತ ಕಾಯಲು ಸ್ಥಾಪನೆಯಾದ ಅಡಕೆ ಟಾಸ್ಕ್ ಫೋರ್ಸ್​ಗೆ ಆರ್ಥಿಕ ಬಲ ತುಂಬುವ ಕೆಲಸ ಬಜೆಟ್​ನಲ್ಲಿ ಆಗಬೇಕಿದೆ. ಅಡಕೆಯ ಅನ್ಯಬಳಕೆ ಬಗ್ಗೆ ಸಂಶೋಧನೆ, ಕೊಳೆರೋಗ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ, ಹಳದಿ ಎಲೆ ರೋಗಕ್ಕೆ ತುತ್ತಾದ ತೋಟಗಳ ಮಾಲೀಕರಿಗೆ ಪರಿಹಾರ ಸೇರಿ ಅನೇಕ ಸವಾಲುಗಳನ್ನು ಎದುರಿಸಲು ಅನುದಾನ ಘೊಷಿಸಬೇಕಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಬಗ್ಗೆ ರಾಜ್ಯ ಸರ್ಕಾರ ಸಂಶೋಧನೆ ಆರಂಭಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರವೂ ಪ್ರತ್ಯೇಕವಾಗಿ ಸಂಶೋಧನೆ ನಡೆಸಬೇಕಿದೆ. ಅಡಕೆ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಬೇಕಿದೆ.
3. ಕಸ್ತೂರಿ ರಂಗನ್, ಹುಲಿ ಯೋಜನೆ ಭಯ
ಮಲೆನಾಡಿಗರನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿ ಗುಮ್ಮವನ್ನು ದೂರಾಗಿಸಬೇಕಿದೆ. ವರದಿ ಜಾರಿ ವೇಳೆ ಕೆಲ ಪ್ರದೇಶಗಳನ್ನು ಕೈಬಿಡುವ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಇನ್ನೂ ಮಾಹಿತಿ ನೀಡಿಲ್ಲ. ಚಿಕ್ಕಮಗಳೂರಿನ ಹಲವು ಗ್ರಾಮಗಳನ್ನು ಹೊಸದಾಗಿ ಹುಲಿ ಸಂರಕ್ಷಣಾ ಯೋಜನಾ ಪ್ರದೇಶದೊಳಕ್ಕೆ ಸೇರಿಸಿರುವ ಬಗ್ಗೆ ಈಗಾಗಲೆ ವ್ಯಾಪಕ ಆಕ್ರೋಶವಿದೆ.
4. ಕೊಡಗು ಮರುನಿರ್ವಣ
ಸತತ 3 ವರ್ಷ ಧಾರಾಕಾರವಾಗಿ ಸುರಿದ ಮಳೆಗೆ ತತ್ತರಿಸಿ ಹೋಗಿರುವ ಕೊಡಗಿನಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಕಷ್ಟ-ನಷ್ಟ ಪರಿಹಾರಕ್ಕೆ ಬಜೆಟ್​ನಲ್ಲಿ ವಿಶೇಷ ಅನುದಾನ ಘೊಷಿಸುವ ಅಗತ್ಯತೆ ಇದೆ. ಕೊಡಗು ಮರುನಿರ್ವಣ ಪ್ರಾಧಿಕಾರ ರಚನೆಯೊಂದಿಗೆ ಅನುದಾನ ಒದಗಿಸಬೇಕೆಂಬುದು ಅತ್ಯಂತ ಪ್ರಮುಖ ಬೇಡಿಕೆಯಾಗಿದೆ.
5. ಕೆಎಫ್​ಡಿಗೆ ಅರೆಯಲಿ ಮದ್ದು
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ದಶಕಗಳಿಂದ ಕಾಡುತ್ತಿರುವ ಕೆಎಫ್​ಡಿ (ಮಂಗನ ಕಾಯಿಲೆ)ಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೆಎಫ್​ಡಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕಳೆದ ಎರಡು ಬಜೆಟ್​ನಲ್ಲೂ ಪ್ರಸ್ತಾಪವಾಗಿದೆ. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ. ಮಂಗಗಳ ಹಾವಳಿ ತಡೆಗಟ್ಟಲು ಮಂಕಿ ಪಾರ್ಕ್ ಸ್ಥಾಪನೆಗೆ ಕಳೆದ ಬಜೆಟ್​ನಲ್ಲೇ ಅನುದಾನ ಘೊಷಣೆಯಾಗಿದೆ. ಆದರೆ ಜಾಗ ಅಂತಿಮವಾಗಿಲ್ಲ. ಹೀಗಾಗಿ ಬಜೆಟ್​ನಲ್ಲಿ ಕೆಎಫ್​ಡಿ ಹಾಗೂ ಮಂಕಿ ಪಾರ್ಕ್ ಗೊಂದಲಕ್ಕೆ ತೆರೆ ಎಳೆಯಬೇಕಿದೆ.
ಶಿವಮೊಗ್ಗ
ಪ್ರಮುಖ ಬೇಡಿಕೆಗಳು
ಚಿಕ್ಕಮಗಳೂರು
ಕೊಡಗು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
