ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್​ನಲ್ಲಿ ಮಿರ್ಚಿ ಮಂಡಕ್ಕಿ ಖಾರಾನೂ ಇಲ್ಲ, ಶಕ್ತಿನೂ ಇಲ್ಲ ಹಾಗೂ ಹಣನೂ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ವ್ಯಂಗ್ಯವಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಪ ಯಡಿಯೂರಪ್ಪ ಅವರು ಬಹಳ ಹುರುಪಿನಿಂದ ಸರ್ಕಾರ ಮಾಡಿದರು. ಆದರೆ, ಅದೇ ಹುರುಪಿನಲ್ಲಿ ಬಜೆಟ್ ಮಾಡಲಾಗಿಲ್ಲ. ನನ್ನ ಕೈಯಲ್ಲಿ ಒಳ್ಳೆಯ ಬಜೆಟ್ ಕೊಡಲಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೇಂದ್ರದ ಜಿಎಸ್​ಟಿ ಫೇಲ್ ಆಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಬಿಎಸ್​ವೈ ಮಂಡಿಸಿದ ಬಜೆಟ್​ಗೆ ನಾನ್ಯಾಕೆ ಅಂಕ ಕೊಡಲಿ, ಜನರೇ ಕೊಡುತ್ತಾರೆ: ಮಾಜಿ ಸಿಎಂ ಎಚ್​ಡಿಕೆ
ಪಾಪ ಬಿಎಸ್​ವೈ ಅವರಿಗೂ ಮಾತಾಡಲು ಶಕ್ತಿ ಕಾಣುತ್ತಿಲ್ಲ. ಯಾವ ಹುರುಪಿನಲ್ಲಿ ಸರ್ಕಾರ ಮಾಡಿದರೂ, ಅದೆಲ್ಲ ಈಗ ಕಾಣ್ತಿಲ್ಲ. ಹಳೆಯ ಯೋಜನೆಗಳಿಗೆ ಹೊಸ ಹೆಸರು ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅತ್ಯಂತ ದುರ್ಬಲ ಬಜೆಟ್ ಅಂದುಕೊಂಡಿದ್ದೆ. ಆದರೆ, ಆ ಬಜೆಟ್​ ಅನ್ನು ಮೀರಿಸಿದ ದುರ್ಬಲ ಬಜೆಟ್ ಇದಾಗಿದೆ. ಒಂದು ಹೊಸ ಪಾಲಿಸಿಯನ್ನು ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯ ಸೇರಿ ಏನಾದರೂ ಮಾಡುತ್ತಾರೆ ಅಂದುಕೊಂಡಿದ್ದೆ. ಹಸಿರು ಶಾಲು ಹಾಕಿಕೊಂಡರೆ ರೈತರ ಬಜೆಟ್ ಆಗುವುದಿಲ್ಲ. ಈ ಬಜೆಟ್​ನಲ್ಲಿ ಶಕ್ತಿನೂ ಇಲ್ಲ, ಹಣನೂ ಇಲ್ಲ. ಒಂದು ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ. ದಿಕ್ಕು ದೆಸೆ ಇಲ್ಲದ ಬಜೆಟ್ ಎಂದು ಡಿಕೆಶಿ ಲೇವಡಿ ಮಾಡಿದರು.(ದಿಗ್ವಿಜಯ ನ್ಯೂಸ್​)​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 14 =
Remember me
