ಬೆಂಗಳೂರು:ಏರಿಕೆಯಾಗಿರುವ ಇಂಧನ ದರದ ಮೇಲಿನ ರಾಜ್ಯ ಸರ್ಕಾರದ ತೆರಿಗೆ ಇಳಿಸಿ ಕೊಂಚ ರಿಲೀಫ್​ ನೀಡಲಿದ್ದಾರೆಂಬ ಜನರ ನಿರೀಕ್ಷೆ ಈ ಬಾರಿಯ ಬಜೆಟ್​ನಲ್ಲಿ ಹುಸಿಯಾಗಿದೆ.
ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ರಾಜ್ಯ ಸರ್ಕಾರವು ಕರ್ನಾಟಕ ಮಾರಾಟ ತೆರಿಗೆ (ಕೆಎಸ್​ಟಿ)ಯನ್ನು ವಿಧಿಸುತ್ತದೆ. ಈ ದರವು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಕಡಿಮೆ ಇದೆ. ಆದರೂ ಸಹ 2021-22ನೇ ಸಾಲಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಹೆಚ್ಚಿಸದೇ ಸಾಮಾನ್ಯ ಜನರಿಗೆ ಆರ್ಥಿಕ ಹೊರೆಯಾಗದಂತೆ ಬಜೆಟ್​ನಲ್ಲಿ ಸೂತ್ರೀಕರಿಸಲಾಗಿದೆ ಎಂದು ಸಿಎಂ ಬಿಎಸ್​ವೈ ಬಜೆಟ್​ ಮಂಡನೆ ವೇಳೆ ತಿಳಿಸಿದರು.
ಇಂಧನ ದರದ ಮೇಲೆ ಯಾವುದೇ ತೆರಿಗೆ ಬದಲಾವಣೆ ಮಾಡದೇ ಇರುವುದರಿಂದ ರಾಜ್ಯದಲ್ಲಿ ಇಂಧನ ಬೆಲೆ ಯಥಾಸ್ಥಿತಿ ಮುಂದುವರಿಯಲಿದ್ದು, ತೆರಿಗೆ ಇಳಿಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಶಾಕ್​ ಆಗಿದೆ. ಈಗಾಗಲೇ ಇಂಧನ ದರ ನೂರರ ಗಡಿಯತ್ತ ಬಂದಿದೆ. ಇದರಿಂದ ಅಗತ್ಯವಸ್ತುಗಳ ಬೆಲೆಯು ಏರಿಕೆಯಾಗಿದ್ದು, ಈ ಆರ್ಥಿಕ ಹೊರೆ ಇನ್ನೆಷ್ಟು ದಿನ ಹೀಗೆ ಇರುತ್ತದೆ ಎಂಬುದೇ ಜನರ ಚಿಂತೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
