ರಾಜ್ಯವೊಂದರ ಅಭಿವೃದ್ಧಿಯ ನೈಜ ಚಿತ್ರಣ ಕಾಣಬೇಕಿದ್ದರೆ ಮೂಲಸೌಕರ್ಯ, ಕೈಗಾರಿಕೆ ಬೆಳವಣಿಗೆ ಹಾಗೂ ಹೆದ್ದಾರಿಗಳ ಮೇಲ್ದರ್ಜೆ ಯೋಜನೆಗಳಿಗೆ ವೇಗ ನೀಡಬೇಕು. ಇವುಗಳ ಜತೆಗೆ ಲಾಜಿಸ್ಟಿಕ್ಸ್, ಆರೋಗ್ಯ, ಶಿಕ್ಷಣ, ಕೌಶಲ ಕ್ಷೇತ್ರಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ಅಭಿವೃದ್ಧಿ ಸೂಚ್ಯಂಕವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ದಿಕ್ಸೂಚಿ ಬಜೆಟ್ ನೀಡುವ ಯತ್ನವನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಲ ವಲಯಗಳನ್ನು ಅಭಿವೃದ್ಧಿಪಡಿಸುವಂತಹ ತೀರ್ವನವನ್ನು ಕೈಗೊಂಡಿದೆ. ಇದಕ್ಕೆ ಬೇಕಾದ ನೀತಿ ನಿರೂಪಣೆ, ಕಾಯ್ದೆ, ಆರ್ಥಿಕ ನೆರವು ಇತ್ಯಾದಿ ಅಂಶಗಳನ್ನಾಧರಿಸಿ ಕರಾರುವಕ್ಕಾಗಿ ಜಾರಿಗೊಳಿಸಲು ಮುಂದಾಗಿದೆ. ಈ ಸೂತ್ರದ ಆಧಾರದ ಮೇಲೆಯೇ ರಾಜ್ಯ ಬಜೆಟ್​ಗೆ ಸ್ಪಷ್ಟವಾದ ಚೌಕಟ್ಟು ನೀಡಲಾಗಿದೆ. ಭವಿಷ್ಯದ ದೃಷ್ಟಿಕೋನದ ಹಳಿಯ ಮೇಲೆ ಬಜೆಟ್ ಓಡುತ್ತಿರುವುದು ಒಳ್ಳೆಯ ಬೆಳವಣಿಗೆಯ ಸಂಕೇತವಾಗಿದೆ.
ಮುಖ್ಯವಾಗಿ ಆರ್ಥಿಕ ವೃದ್ಧಿಗೆ ಇಂಬು ನೀಡುವ ಕೈಗಾರಿಕೆ ಕ್ಷೇತ್ರಕ್ಕೆ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಸ್ಪಷ್ಟತೆ ದೊರೆತಿದೆ. ಮುಂಬೈ-ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್ ವೇ, ಸೂರತ್-ಚೆನ್ನೈ ಎಕ್ಸ್​ಪ್ರೆಸ್ ವೇ ಹಾಗೂ ಬೆಂಗಳೂರು-ಮೈಸೂರು ದಶಪಥ ರಸ್ತೆ ಜಾಲ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಶಿವಮೊಗ್ಗ ಸಹಿತ ಇತರ ನಗರಗಳಲ್ಲಿ ವಿಮಾನನಿಲ್ದಾಣ, ಏರ್ ಸ್ಟ್ರಿಪ್ ಬರುವುದು ಅಲ್ಲಿನ ಮೂಲಸೌಕರ್ಯ ಬಲವನ್ನು ಹೆಚ್ಚಿಸಲಿದೆ. ಬಂದರು ಹಾಗೂ ಮೀನುಗಾರಿಕೆ ವಲಯಕ್ಕೆ ನೀಡಿರುವ ಆದ್ಯತೆ ಕರಾವಳಿ ಅಭಿವೃದ್ಧಿಗೆ ಪೂರಕವಾಗಿದೆ. ಇವುಗಳೆಲ್ಲವೂ ಪ್ರವಾಸೋದ್ಯಮ ಬೆಳವಣಿಗೆಗೂ ಸಾಕಷ್ಟು ಕೊಡುಗೆ ನೀಡುವ ಸಾಧ್ಯತೆ ಇದೆ.
ಬಜೆಟ್​ನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಹಾಗೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ದೊಡ್ಡ ಫಲ ನೀಡಬಹುದು. ಈ ಎರಡೂ ಸೌಲಭ್ಯಗಳಿಂದ ವಿದ್ಯಾರ್ಥಿಗಳ ವ್ಯಾಸಂಗದ ಅರ್ಧದಷ್ಟು ಭಾರವನ್ನು ತಗ್ಗಿಸಿ ಓದಿನತ್ತ ಗಮನ ಹರಿಸಲು ಸಹಾಯಕವಾಗಲಿದೆ. ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ, ಪಾಲಿಟೆಕ್ನಿಕ್​ಗಳ ಮೇಲ್ದರ್ಜೆ, ಬೆಂಗಳೂರಿನ ಹೊರವಲಯದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ‘ಸ್ಟಾರ್ಟಪ್ ಪಾರ್ಕ್’ ಸ್ಥಾಪನೆ ಹಾಗೂ ಇತರ ಶಿಕ್ಷಣ-ವಿದ್ಯಾರ್ಥಿ ಕೇಂದ್ರಿತ ಕ್ರಮಗಳು ಸ್ವಾಗತಾರ್ಹವಾಗಿವೆ.
ಈ ಬಾರಿ ಬೆಂಗಳೂರು ಅಭಿವೃದ್ಧಿಗೆ 9,698 ಕೋಟಿ ರೂ. ಅನುದಾನವನ್ನು ಒದಗಿಸುವ ಮೂಲಕ ಮುಖ್ಯಮಂತ್ರಿಯವರು ವಿಶೇಷ ಕಾಳಜಿ ವಹಿಸಿದಂತಿದೆ. ರಾಜಧಾನಿ ರಸ್ತೆ ಜಾಲವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ಜತೆಗೆ ಸಂಚಾರ ದಟ್ಟಣೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಮಳೆಗಾಲುವೆಗಳ ಪುನರುಜ್ಜೀವನ ಕಾರ್ಯಕ್ಕೆ 3,000 ಕೋಟಿ ರೂ. ಅನುದಾನ ನಿಗದಿ ಮಾಡಿ ‘ಮುಳುಗಡೆ ನಗರ’ ಕುಖ್ಯಾತಿಗೆ ಶಾಶ್ವತವಾದ ಪರಿಹಾರ ಮಾಡುವ ದೂರದೃಷ್ಟಿ ಇದ್ದಂತಿದೆ. ಪಿಆರ್​ಆರ್, ಎಸ್​ಟಿಆರ್​ಆರ್ ಯೋಜನೆಗಳಿವೆ ವೇಗ ದೊರೆಯುವ ಸಾಧ್ಯತೆಯೂ ಇದೆ.
ಒಟ್ಟಾರೆ ಗ್ರಾಮೀಣ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಒತ್ತ ನೀಡಲಾಗಿದೆ. ಆದರೆ, ಇವೆಲ್ಲವುಗಳ ಜಾರಿಗೆ ವಿಶೇಷ ಆಸಕ್ತಿ, ಇಚ್ಛಾಶಕ್ತಿ ಅಗತ್ಯ. 2023-24ನೇ ಸಾಲಿನ ರಾಜ್ಯ ಬಜೆಟ್​ಗೆ 9/10 ಅಂಕ ನೀಡಬಹುದಾಗಿದೆ.
ಕ್ರಿಕೆಟ್​ ವೇಳೆ ಕಿರಿಕ್​, ಚಾಕು ಇರಿತಕ್ಕೆ ಇಬ್ಬರ ಸಾವು: ಎರಡೂ ಊರುಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
