ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡ, ಅಸಮಾಧಾನಿತರ ಪ್ರತ್ಯೇಕ ಸಭೆ, ಲಾಬಿಗಳ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದರು. ಸಂಪುಟ ಸಂಕಟಕ್ಕೆ ಡೋಂಟ್​ಕೇರ್ ಎನ್ನುವ ರೀತಿಯಲ್ಲಿ ಇಡೀ ದಿನ ರೇಸ್​ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಅಧಿಕಾರಿಗಳ ಜತೆ ಬಜೆಟ್ ಪೂರ್ವಭಾವಿ ಸಿದ್ಧತೆ ಕುರಿತು ಸುದೀರ್ಘ ಚರ್ಚೆ, ಸಮಾಲೋಚನೆ ನಡೆಸಿದರು. ಉನ್ನತ ಅಧಿಕಾರಿಗಳಿಂದ ಬಜೆಟ್​ನಲ್ಲಿ ಘೋಷಿಸಬೇಕಾದ ಯೋಜನೆಗಳು, ಅದಕ್ಕೆ ಹಣಕಾಸಿನ ಅವಶ್ಯಕತೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜನಪ್ರಿಯ ಯೋಜನೆಗಳ ಜಾರಿ ಕುರಿತು ಸಲಹೆ ಪಡೆದರು.
ಉನ್ನತ ಶಿಕ್ಷಣ, ವೈದ್ಯಕೀಯ, ಮಾಹಿತಿ ತಂತ್ರಜ್ಞಾನ, ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ, ವಸತಿ, ಐಟಿ- ಬಿಟಿ ಮತ್ತಿತರ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಧಾನ ಚಿತ್ತರಾಗಿ ಸಿಎಂ ಸಮಾಲೋಚನೆ ನಡೆಸಿದರು. ಬೆಳಗ್ಗೆ 11ಕ್ಕೆ ಆರಂಭವಾದ ಸಭೆ ಸಂಜೆ 5 ಗಂಟೆವರೆಗೂ ನಡೆಯಿತು. ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಕಳೆದ ಬಜೆಟ್​ನಲ್ಲಿ ಘೊಷಣೆ ಮಾಡಿರುವ ಅನುದಾನ, ಈವರೆಗೂ ಖರ್ಚಾಗಿರುವ ಹಣ, ಯಾವ ಯಾವ ಆಯವ್ಯಯದಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನು ಘೊಷಣೆ ಮಾಡಲಾಗಿತ್ತು. ಅವು ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿವೆ, ಬಾಕಿ ಉಳಿದಿರುವ ಕಾರ್ಯಕ್ರಮಗಳು ಸೇರಿ ವಿವಿಧ ವಿಷಯಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಇಂದು ಸಂಪುಟ ಸಭೆ:ಸಚಿವ ಸಂಪುಟ ಸಭೆ ಮಂಗಳವಾರ ಸಂಜೆ 4 ಗಂಟೆಗೆ ವಿಧಾನಸೌದದ ಸಭಾಂಗಣದಲ್ಲಿ ನಡೆಯಲಿದೆ. ಸಂಪುಟ ಸಹೋದ್ಯೋಗಿಗಳ ಜತೆಗೂ ಚರ್ಚೆ ಮಾಡಲಿರುವ ಸಿಎಂ, ಮುಂದೆ ರಾಜಕೀಯವಾಗಿ ಎದುರಾಗಬಹು ದಾದ ಸನ್ನಿವೇಶ ನಿಭಾಯಿಸಲು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನ ಮಾಡುವಂತೆ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
9 ಇಲಾಖೆಗಳ ಸಭೆ ನಡೆಸಿದ್ದೇನೆ. ಈತನಕ ಇಲಾಖೆಯಲ್ಲಿ ಆಗಿರುವ ಪ್ರಗತಿ, ಮುಂದೆ ಆಗಬೇಕಾಗಿರುವ ಯೋಜನೆಗಳು ಎಲ್ಲದರ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. 3-4 ದಿನಗಳಲ್ಲಿ ಉಳಿದ ಇಲಾಖೆಗಳ ಸಭೆ ಕರೆಯುವೆ.| ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
