ಆರ್ಥಿಕ ಆಘಾತದ ನಡುವೆಯೂ ಸರ್ವರ ಹಿತ ಕಾಯ್ದ ಬಜೆಟ್, ಕೃಷಿ, ಶಿಕ್ಷಣ, ಎಸ್ಸಿ-ಎಸ್ಟಿ , ಮಹಿಳೆ, ಮಕ್ಕಳು, ಅಂಗವಿಕಲರತ್ತ ಚಿತ್ತ. ಮೀನುಗಾರ ಮಹಿಳೆಯರಿಗೆ ಉಚಿತ ಬೈಕ್, ಅನ್ನದಾತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಮಹಿಳಾ ಕಾರ್ವಿುಕರಿಗೆ ಬಸ್ ಪಾಸ್ ಸೌಲಭ್ಯ ಇರುವ ಸೀಮಿತ ಸಂಪನ್ಮೂಲದಲ್ಲೇ ಅಭಿವೃದ್ಧಿ ಕನಸು ಬಿತ್ತಿದ ಯಡಿಯೂರಪ್ಪ | ಹೊಸ ಯೋಜನೆ ಇಲ್ಲ, ಇರುವುದಕ್ಕೆ ಬೆಲ್ಲ

ಕುತ್ತಿಗೆ ಹಿಸುಕುತ್ತಿರುವ ಆರ್ಥಿಕ ಹಿಂಜರಿತ, ಕೇಂದ್ರದ ಆದಾಯ ಪಾಲಿನ ಕಡಿತ, ವಿತ್ತೀಯ ಕೊರತೆಯಂತಹ ಸರಣಿ ಸಂಕಷ್ಟ, ಸವಾಲುಗಳ ನಡುವೆಯೇ ಸಮಪಾಲು, ಸಮಬಾಳು ಸಿದ್ಧಾಂತದಡಿ ಗುರುವಾರ ತಮ್ಮ ಏಳನೇ ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪ ಇರುವ ಸೀಮಿತ ಸಂಪನ್ಮೂಲದಲ್ಲೇ ಅಭಿವೃದ್ಧಿ ಕನಸು ಬಿತ್ತುವ ಸರ್ಕಸ್ ನಡೆಸಿದ್ದಾರೆ. ಜಿಎಸ್​ಟಿ ಜಾರಿ ಬಳಿಕ ಬೇರೆ ತೆರಿಗೆ ಹೆಚ್ಚಳಕ್ಕೆ ಅವಕಾಶ ಇಲ್ಲದಿರುವುದರಿಂದ ನಿರೀಕ್ಷೆಯಂತೆ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳ, ಅಬಕಾರಿಯಿಂದ ಆದಾಯ ಪಡೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಎಂದಿನಂತೆ ಇಲಾಖಾವಾರು ವಿವರ ನೀಡದೆ ಇಲಾಖೆಗಳಲ್ಲಿ ಆರು ಆದ್ಯತಾ ವಲಯಗಳನ್ನು ಗುರುತಿಸಿರುವುದು ಈ ಬಜೆಟ್​ನ ಮತ್ತೊಂದು ವಿಶೇಷ. ಹೊಸ ಯೋಜನೆ ಪ್ರಕಟಿಸುವ ಸಾಹಸಕ್ಕೆ ಕೈಹಾಕದ ಅವರು ಭಾಗ್ಯಲಕ್ಷ್ಮಿ, ಶಾಲಾ ಮಕ್ಕಳಿಗೆ ಬೈಸಿಕಲ್ ನೀಡುವಂತಹ ಇರುವ ಯೋಜನೆಗಳಿಗೇ ಬೆಲ್ಲ ಸವರಿದ್ದಾರೆ. ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಮೀನುಗಾರ ಮಹಿಳೆಯರಿಗೆ ಉಚಿತ ಬೈಕ್, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಮಹಿಳಾ ಕಾರ್ವಿುಕರಿಗೆ ಉಚಿತ್ ಬಸ್​ಪಾಸ್ ಸೌಲಭ್ಯ ಕಲ್ಪಿಸುವಂತಹ ಜನಪ್ರಿಯ ಕಾರ್ಯಕ್ರಮ ರೂಪಿಸಿದ್ದಾರೆ. ಮಕ್ಕಳಿಗಾಗಿಯೇ ಬಜೆಟ್ ಪ್ರಯೋಗ ಜಾರಿ ಮಾಡಿರುವ ಅವರು ಬ್ಯಾಗ್​ರಹಿತ ದಿನವನ್ನು ಕೊಡುಗೆಯಾಗಿ ನೀಡಿದ್ದಾರೆ. ಒಟ್ಟಾರೆ ಭರವಸೆಗಳ ಆಶಾಗೋಪುರವನ್ನೂ ಕಟ್ಟದೆ ಯಾವ ಕ್ಷೇತ್ರಗಳನ್ನೂ ಕಡೆಗಣಿಸದೆ ಖಜಾನೆ ಭಾರದ ಲೆಕ್ಕಾಚಾರದೊಂದಿಗೆ ಕಲ್ಯಾಣ ಕರ್ನಾಟಕದ ಲೆಕ್ಕ ಹೇಳಿರುವ ಬಿಎಸ್​ವೈ ಅವರ ಬಜೆಟ್​ನ ಕನಸು ಇನ್ನಷ್ಟೇ ರೆಕ್ಕೆ ತೆರೆದುಕೊಳ್ಳಬೇಕಿದೆ.
ಕೃಷಿ, ಕೃಷಿಕರಿಗೇನು?
ಸಾಲ ಮನ್ನಾ ಬದಲು ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಘೋಷಣೆ ಹೊರಬಿದ್ದಿದೆ. ಡಿಸಿಸಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾಗೆ 466 ಕೋಟಿ ರೂ. ಮೀಸಲಿಡಲಾಗಿದೆ. 92 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆ.
ಸುಲಭ ಬಡ್ಡಿದರದಲ್ಲಿ ಹಣ ದೊರಕಿಸಿಕೊಡಲು ರೈತರು, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
ಸಾವಿರ ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ನೀಡಲು 5 ಕೋಟಿ ರೂ. ಅನುದಾನ
ಮಣ್ಣು, ನೀರು ಪರೀಕ್ಷೆಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಆರಂಭ, ರೈತರ ಮನೆ ಬಾಗಿಲಲ್ಲೇ ಸಿಗಲಿದೆ ತಾಂತ್ರಿಕ ಪರಿಹಾರ
ನೀರಾವರಿಗೆ ಆದ್ಯತೆ
ಮಹದಾಯಿ ಯೋಜನೆಯಡಿ ಕಳಸಾ ಬಂಡೂರಿ ನಾಲಾ ಕಾಮಗಾರಿ ಕೈಗೆತ್ತಿಕೊಳ್ಳಲು 500 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಅನುದಾನ
ಪರಿಶಿಷ್ಟರ ಪರಿಗಣನೆ
ಎಸ್ಸಿ,ಎಸ್ಟಿ ಜನಾಂಗದ ಕಲ್ಯಾಣಕ್ಕಾಗಿ 26,930 ಕೋಟಿ ರೂ. ಅನುದಾನ ನಿಗದಿ. ಎಸ್ಸಿ,ಎಸ್ಟಿ ನಿರುದ್ಯೋಗಿಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರಬೇತಿ ನೀಡುವ ಘೋಷಣೆ
ಗಮನ ಸೆಳೆದ ಮಕ್ಕಳ ಬಜೆಟ್
ಇದೇ ಮೊದಲ ಬಾರಿ ಮಕ್ಕಳ ಆಯವ್ಯಯ ಮಂಡಿಸಿರುವ ಸರ್ಕಾರ ಮಕ್ಕಳ ಅಭಿವೃದ್ಧಿ ಗಾಗಿಯೇ 36,340 ಕೋಟಿ ರೂ. ಮೀಸಲಿಟ್ಟಿದೆ. ಒಟ್ಟಾರೆ 279 ಯೋಜ ನೆಗಳನ್ನು ಹಾಕಿಕೊಳ್ಳಲಾಗಿದೆ.
‘ಸಂಭ್ರಮ ಶನಿವಾರ’
ಶಾಲಾ ಮಕ್ಕಳ ಹೊರೆ ಇಳಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಪ್ರತಿ ತಿಂಗಳ 2 ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್ ತರಬೇಕಾಗಿಲ್ಲದ ‘ಸಂಭ್ರಮ ಶನಿವಾರ’ ಎಂಬ ಹೊಸ ಯೋಜನೆ ಘೋಷಿಸಲಾಗಿದೆ.
ರಾಜ್ಯ
ವನಿತಾ ಸಂಗಾತಿ ಯೋಜನೆಯಡಿ ಗಾರ್ವೆಂಟ್ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಕಾರ್ವಿುಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ
ಅಂಧ ತಾಯಂದಿರಿಗೆ ನೀಡುವ ಮಾಸಿಕ 2 ಸಾವಿರ ರೂ. ಶಿಶುಪಾಲನಾ ಭತ್ಯೆ ಯೋಜನೆ ಮಗುವಿನ ಮೊದಲ 2 ವರ್ಷಗಳಿಂದ 5 ವರ್ಷದವರೆಗೆ ವಿಸ್ತರಣೆ
ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ನಮ್ಮ ರಾಜ್ಯದ ಮೇಲೆಯೂ ಇದೆ. ಈ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮತೋಲಿತ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹದಾಯಿಗಾಗಿ 500 ಕೋಟಿ ರೂ. ಹಾಗೂ ಅನಂತ್​ಕುಮಾರ್ ಪ್ರತಿಷ್ಠಾನಕ್ಕಾಗಿ 20 ಕೋಟಿ ರೂ. ಮೀಸಲಿಟ್ಟಿರುವುದು ಅತ್ಯಂತ ಸಂತೋಷದ ಸಂಗತಿ. ಕೆಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ಜಿಎಸ್​ಟಿ ವ್ಯವಸ್ಥೆಗೂ ಸಮಸ್ಯೆಯಾಗಿದೆ. ಜಿಎಸ್​ಟಿ ಅಧಿಕಾರಿಗಳ ಅಪ್ರಾಮಾಣಿಕತೆಯಿಂದಾಗಿ ಶೇ.80ರಷ್ಟು ತೆರಿಗೆ ಸೋರಿಕೆಯಾಗುತ್ತಿದೆ. ಇಂತಹವುಗಳ ಕಡೆ ಗಮನ ನೀಡಿದರೆ ಆದಾಯ ಕ್ರೋಡೀಕರಣಕ್ಕೆ ಅವಕಾಶವಾಗಲಿದೆ.
| ಡಾ.ವಿಜಯ ಸಂಕೇಶ್ವರ, ಚೇರ್ಮನ್, ವಿಆರ್​ಎಲ್ ಸಮೂಹ ಸಂಸ್ಥೆಗಳು
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ. ಸಾಮಾಜಿಕ ನ್ಯಾಯದೊಂದಿಗೆ ಸರ್ವರಿಗೂ ಸಮಬಾಳು ಮತ್ತು ಸಮಪಾಲು ನೀಡುವ ಧ್ಯೇಯ ನಮ್ಮ ದಾರಿ. ಸವೋದಯದ ಗಮ್ಯದತ್ತ, ಅಂತ್ಯೋದಯದ ಹಾದಿಯಲ್ಲಿ ನಮ್ಮ ಸರ್ಕಾರ ಸಾಗಿದೆ.
| ಯಡಿಯೂರಪ್ಪ ಸಿಎಂ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
