ಬಜೆಟ್​ನಲ್ಲಿ ಸರ್ಕಾರ ಶೋಷಿತ, ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಿದೆ. ಎಸ್​ಸಿಎಸ್​ಪಿ/ ಟಿಎಸ್​ಪಿ ಅಡಿ ನೀಡಲೇಬೇಕಾದ 26,131 ಕೋಟಿ ರೂ. ಗಿಂತ ಹೆಚ್ಚು ಅಂದರೆ 26,930 ಕೋಟಿ ರೂ. ನಿಗದಿಪಡಿಸಿದೆ.
ಮೇಲ್ವಿಚಾರಣಾ ಸಮಿತಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳಲ್ಲಿ ಕನಿಷ್ಠ ಶೇಕಡ 25 ಸೀಟುಗಳನ್ನು ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಅವಕಾಶ. ಈ ಶಾಲೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ.
ವಾಹನ ಚಾಲನಾ ತರಬೇತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವ್ಯವಸ್ಥೆ.
ಸರ್ಟಿಫಿಕೇಟ್ ಕೋರ್ಸ್: ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕ/ಯುವತಿಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ವಿವಿಧ ಪ್ಯಾರಾಮೆಡಿಕಲ್ ಕೋರ್ಸಗಳೊಂದಿಗೆ ಕೌಶಲಾಭಿವೃದ್ಧಿ ತರಬೇತಿ.
ವಾಹನ ಖರೀದಿಗೆ ಸಾಲ: ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕ/ ಯುವತಿಯರಿಗೆ ಸಣ್ಣ ಸರಕು ಸಾಗಣೆ ವಾಹನ ಖರೀದಿಗೆ ಸಾಲ.
ಷೇರು ಬಂಡವಾಳ ಏರಿಕೆ: ಎಸ್​ಸಿ, ಎಸ್​ಟಿ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಷೇರು ಬಂಡವಾಳ -ಠಿ; 10 ಲಕ್ಷದಿಂದ -ಠಿ; 20 ಲಕ್ಷಗಳಿಗೆ ಹೆಚ್ಚಳ.
ಲಕ್ಷ ರೂ. ನಗದು ಪ್ರಶಸ್ತಿ:ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿ ಜಿಲ್ಲೆಯ ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ನಗದು ಪ್ರಶಸ್ತಿ ನೀಡಲು -ಠಿ; 60 ಲಕ್ಷ ರೂ. ನಿಗದಿ.
ಔಷಧ ಸಂಸ್ಕರಣಾ ಘಟಕ: ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಆಯುಷ್ ಇಲಾಖೆ ಸಹಯೋಗದೊಂದಿಗೆ 2 ಕೋಟಿ ವೆಚ್ಚದಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಗಳ ಸಂಸ್ಕರಣಾ ಘಟಕ ಸ್ಥಾಪನೆ.
ಚರ್ಮಶಿಲ್ಪ ಘಟಕಗಳಿಗೆ ನೆರವು: ಚರ್ಮ ಕುಶಲಕರ್ವಿುಗಳು ‘ಚರ್ಮಶಿಲ್ಪ’ ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕ ಸ್ಥಾಪಿಸಲು ಡಾ.ಬಾಬು ಜಗಜೀವನ್​ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ 250 ಫಲಾನುಭವಿ ಗಳಿಗೆ ಘಟಕ ವೆಚ್ಚ 10 ಲಕ್ಷ ರೂ. ಗಳಲ್ಲಿ -5 ಲಕ್ಷ  ರೂ. ಸಹಾಯಧನ ನೀಡಲಾಗುವುದು. ಈ ಉದ್ದೇಶಕ್ಕಾಗಿ  12.50 ಕೋಟಿ ರೂ. ಒದಗಿಸಲಾಗಿದೆ.
ಬೈಕ್ ಕೊಳ್ಳಲು ಸಹಾಯ:ಇ-ವಾಣಿಜ್ಯ ಸಂಸ್ಥೆಗಳ ಉತ್ಪನ್ನಗಳನ್ನು ಮನೆಬಾಗಿಲಿಗೆ ಪೂರೈಸುವ 1000 ಯುವಕರಿಗೆ ಬೈಕ್ ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ತಲಾ 25 ಸಾವಿರ ರೂ.ಗಳಂತೆ ಒಟ್ಟು  2.5 ಕೋಟಿ ರೂ. ಆರ್ಥಿಕ ನೆರವು.
ಬೀದಿ ವ್ಯಾಪಾರಿಗಳಿಗಾಗಿ ತಂತ್ರಾಂಶ ಅಭಿವೃದ್ಧಿ: ಬೀದಿ ವ್ಯಾಪಾರಿಗಳ ಉದ್ಯಮಶೀಲತೆ ಹಾಗೂ ವೃತ್ತಿಪರತೆ ಹೆಚ್ಚಿಸಲು, ಮೊಬೈಲ್ ಅಪ್ಲಿಕೇಶನ್ ಮೂಲಕ ವ್ಯಾಪಾರಕ್ಕಾಗಿ ಇ-ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತಂತ್ರಾಂಶ ಅಭಿವೃದ್ಧಿ.
ಸರ್ವರಿಗೂ ಸೂರು
ಅಪೂರ್ಣ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಿ ವಸತಿರಹಿತರಿಗೆ ಹಂಚಿಕೆ ಮಾಡುವು ದಕ್ಕಾಗಿ 2019-20ರಲ್ಲಿ ಸರ್ಕಾರದ ಖಾತರಿಯೊಂದಿಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ  1000 ಕೋಟಿ ರೂ.ಹೆಚ್ಚುವರಿ ಸಾಲ ಒದಗಿಸಲಾಗಿದೆ. 2020-21ರಲ್ಲಿ  2500 ಕೋಟಿ ರೂ. ವೆಚ್ಚದಲ್ಲಿ ಇಂಥ 2 ಲಕ್ಷ ಮನೆ ಪೂರ್ಣಗೊಳಿಸುವ ಉದ್ದೇಶವಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
