ಚಿಕ್ಕಬಳ್ಳಾಪುರ:ಶಾಲಾ ಪ್ರವಾಸದಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್‌ ಫೋಟ್‌ ಶೂಟ್‌ ಮಾಡಿಸಿದ್ದಾರೆ. ಸದ್ಯ ಇದು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹದಿಹರೆಯದ ವಿದ್ಯಾರ್ಥಿಯೊಂದಿಗೆ ಮುದ್ದಾಡಿ, ಜತೆಗೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ್ದಾರೆ. ಹೈ ಸ್ಕೂಲ್‌ ವಿದ್ಯಾರ್ಥಿ ಜತೆಗೆ ತೆಗೆದ ಫೋಟೊ, ವಿಡಿಯೊ ವೈರಲ್‌ ಆಗಿದ್ದು, ಮುಖ್ಯ ಶಿಕ್ಷಕಿಯ ವರ್ತನೆಗೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ‌ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಶಾಲೆಯಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿ ರೊಮ್ಯಾಂಟಿಕ್‌ ಫೋಟೊ ಶೂಟ್‌ ಮಾಡಿಸಿದ್ದಾರೆ.ಬಾಲಕನ ಕೆನ್ನೆಗೆ ಮುತ್ತು ಕೊಡುವುದು ಹಾಗೂ ಶಿಕ್ಷಕಿಯ ಸೀರೆ ಸೆರಗು ಎಳೆಯುವುದು, ಶಿಕ್ಷಕಿಯನ್ನು ಮೇಲಕ್ಕೆ ಎತ್ತುವುದು ಹೀಗೆ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿದ್ದಾರೆ. ವಿದ್ಯಾರ್ಥಿ ಕೂಡ ಶಿಕ್ಷಕಿಯನ್ನು ಮುದ್ದಾಡಿದ್ದು ಈ ಎಲ್ಲ ಫೋಟೊಗಳು ಸೋರಿಕೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಾನೊಬ್ಬಳು ಗುರು ಎನ್ನುವುದನ್ನೂ ಮರೆತು ವಿದ್ಯಾರ್ಥಿಯೊಂದಿಗೆ ಹೀಗೆ ವರ್ತಿಸಿದ್ದಕ್ಕೆ ಆಕ್ರೋಶಗಳು ವ್ಯಕ್ತವಾಗಿದೆ. ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಜತೆಗೆ ಶಿಕ್ಷಕಿಯ ಈ ನಡೆಗೆ ಪೋಷಕರು ಕಿಡಿಕಾರಿದ್ದು, ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ತೆರಳಿ ಶಿಕ್ಷಕಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಮಕ್ಕಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳಿರುವಾಗ ಹಾಸನದಲ್ಲಿ ಶ್ರೀರಾಮ ಸಂಚರಿಸಿದ ಪುರಾವೆಗಳು ಗೋಚರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 14 =
Remember me
