ಬೆಂಗಳೂರು:ರಾಜ್ಯದಲ್ಲಿ ಪವನ್ನು ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿರುವ ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​, ಗುರಿಯತ್ತ ಸಾಗಲು ನಡೆಸುತ್ತಿರುವ ಕಾರ್ಯಚಟುವಟಿಕೆಗೆ ಪದ ಇತರ ನಾಯಕರೇ ಹೌಹಾರಿದ್ದಾರೆ!ಪಕ್ಷದ ಪ್ರತಿ ಚಟುವಟಿಕೆಗೂ ವ್ಯವಸ್ಥಿತ ತಂತ್ರ, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು, ಸರಣಿ ಹೋರಾಟ ಇವೆಲ್ಲ ಮೇಲ್ನೋಟಕ್ಕೆ ಕಾಣಿಸುವ ಕಾರ್ಯವಾದರೆ, ಪದ ಬೇರು ಗಟ್ಟಿಮಾಡಲು ಮತ್ತು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ವ್ಯವಸ್ಥಿತ ಕಾರ್ಯತಂತ್ರ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ. ಪದಲ್ಲಿ ಜಾತಿವಾರು ಅಥವಾ ಇನ್ಯಾವುದೋ ಕಾರಣಕ್ಕೆ ಪಕ್ಕಿಂತ ವ್ಯಕ್ತಿ ಕೇಂದ್ರಿತವಾಗಿ ಅನೇಕ ೇತ್ರಗಳು ಹಿಡಿತದಲ್ಲಿವೆ. ಜತೆಗೆ ವಿವಿಧ ಸಣ್ಣಪುಟ್ಟ ಕಾರಣ, ಸ್ಥಳಿಯ ಕಿತ್ತಾಟದಿಂದ ಪವು ಚುನಾವಣೆಗಳಲ್ಲಿ ಸೋಲುತ್ತಿರುವುದು ಸೇರಿ ಪ್ರತಿ ವಿಧಾನಸಭಾ ೇತ್ರದ ನೈಜ ಚಿತ್ರಣ ಪಡೆದುಕೊಳ್ಳಲು ಡಿಕೆಶಿ ಪ್ರಯತ್ನಶಿಲರಾಗಿದ್ದಾರೆ. ಇದು ಇತರ ನಾಯಕರನ್ನು ಅಚ್ಚರಿಗೆ ದೂಡಿದೆ.ಸಾಮಾನ್ಯವಾಗಿ ಪದ ಕೆಳಹಂತದ ಟಕಗಳಿಂದ ವರದಿ ಪಡೆದು ಅವಲೋಕನ ನಡೆಸುವುದು ಪದ್ಧತಿ. ಆದರೆ, ಸಾಂಪ್ರದಾಯಿಕ ಪದ್ಧತಿಗೆ ವಿದಾಯ ಹೇಳಿ ಪರ್ಯಾಯ ಮಾರ್ಗ ಅನುಸರಿಸಿದ್ದಾರೆಂದು ಮೂಲಗಳು ತಿಳಿಸಿವೆ. ತಮ್ಮದೇ ನಂಬಿಗಸ್ಥ ತಂಡದ ಮೂಲಕ ವರದಿ ಪಡೆಯುತ್ತಿದ್ದು, ವಿವಿಧ ಮಗ್ಗಲುಗಳಲ್ಲಿ ಮಾಹಿತಿ ತರಿಸಿಕೊಂಡು, ೇತ್ರವಾರು ಆಗಬೇಕಾದ ರಿಪೇರಿ ಕೆಲಸಕ್ಕೆ ಗಮನ ಕೊಡುತ್ತಿದ್ದಾರೆನ್ನಲಾಗಿದೆ.ನೆರೆಯ ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್​ ರೆಡ್ಡಿ ಇದೇ ರೀತಿಯ ತಂತ್ರ ಅನುಸರಿಸಿ ಜಯಶೀಲರಾಗಿದ್ದರು. ವಾಸ್ತವ ಸಂಗತಿಯನ್ನು ಥರ್ಡ್​ಪಾರ್ಟಿಯಿಂದ ಪಡೆದಾಗ ಆ ಮಾಹಿತಿ ನೈಜತೆಗೆ ಹತ್ತಿರವಾಗಿರುತ್ತದೆ ಎಂಬ ನಂಬಿಕೆ ಮೇಲೆ ಈ ಕಾರ್ಯತಂತ್ರ ಜಾರಿಯಲ್ಲಿದೆ.ಪ್ರತಿ ವಿಧಾನಸಭೆ ೇತ್ರಕ್ಕೊಂದು ತಂಡ ಕಳಿಸಿ, ಗೌಪ್ಯ ಕಾರ್ಯಾಚರಣೆ ನಡೆಸಿದ್ದಾರೆಂಬ ಮಾಹಿತಿ ಇದೆ. ಆ ೇತ್ರದಲ್ಲಿ ಕಳೆದ ಬಾರಿ ಸೋಲು ಅಥವಾ ಗೆಲುವಿಗೆ ಕಾರಣಗಳೇನು? ಅಲ್ಲಿನ ಪ್ರಭಾವಿ ನಾಯಕ ಯಾರು, ಅವರು ಯಾರ ಪರವಾಗಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಾಹಿತಿ ಅನುಸರಿಸಿಯೇ ಅವರ ಮುಂದಿನ ರಣತಂತ್ರ ರೂಪುಗೊಳ್ಳಲಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಪ್ರತಿ ವಿಧಾನಸಭಾ ೇತ್ರದಲ್ಲಿ ಪ್ರಮುಖ ನಾಯಕರ ಪ್ರಭಾವ ಎಷ್ಟಿದೆ ಎಂದು ತಿಳಿಯುವ ಪ್ರಯತ್ನ ಕೂಡ ನಡೆದಿದೆ. ಉದಾಹರಣೆಗೆ ಸಿದ್ದರಾಮಯ್ಯ ಹಿಡಿತವೆಷ್ಟು? ಸ್ವತ@ ತಮ್ಮ ಪ್ರಭಾವ ಎಷ್ಟಿದೆ? ಎಂಬ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಜತೆಗೆ ಪದ ಸಂಟನಾ ಬಲ, ಕಾರ್ಯಕರ್ತರ ಕ್ರಿಯಾಶೀಲತೆ ಹಾಗೂ ಮುಖಂಡರ ಮಧ್ಯೆ ಸಮನ್ವಯದ ಪರಿಶೀಲನೆಯೂ ನಡೆಸಲಾಗುತ್ತಿದೆ.2023ರಲ್ಲಿ ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳು ಯಾರಾಗಬಹುದು, ಪ್ರಬಲ ಆಕಾಂ ಯಾರಿರಬಹುದು, ಅವರಿಗೆ ೇತ್ರದ ಜನರ ಜತೆ ನಿಕಟತೆ ಎಷ್ಟಿದೆ, ಸಮಸ್ಯೆಗಳೇನಿದೆ? ಎಂಬುದನ್ನೂ ಹುಡುಕಲಾಗುತ್ತಿದೆ. ಪ್ರಸ್ತುತ ಇರುವ ನಾಯಕರು ಪದ ಸ್ಪಂದನೆಗೆ ಯಾವ ರೀತಿ ಸ್ಪಂದಿಸುತ್ತಿದ್ದಾರೆ? ಪದ ಕರೆಗೆ ಸ್ಪಂದನೆಗೆ ಸೀಮಿತವೋ ಅಥವಾ ವಿಷಯಾಧಾರಿತವಾಗಿ ಪ್ರತಿಭಟನೆಯಧ್ವನಿ ಎತ್ತಿದ್ದಾರೆಯೆ? ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕೆಪಿಸಿಸಿ “ಡಿಕೆಸಿಸಿ’ ಆಗಿದೆ…ಡಿಕೆಶಿ ಅವರ ವೇಗ ಹಲವು ನಾಯಕರಿಗೆ ಸಹ್ಯ ಎನಿಸಿಲ್ಲ. ಕೆಪಿಸಿಸಿ ಸಾಮಾಜಿಕ ಜಾಲತಾಣ ಕೇವಲ ಡಿಕೆಶಿಗೆ ಪ್ರಾಧಾನ್ಯತೆ ಕೊಡುತ್ತಿದೆ, ಅದು “ಡಿಕೆಸಿಸಿ’ ಸೋಶಿಯಲ್​ ಮೀಡಿಯಾ ಆಗಿದೆ ಎಂದು ಒಂದು ಬಣ ತನ್ನ ದೂರನ್ನೂ ಸಹ ದೆಹಲಿಗೆ ನಾಯಕರಿಗೆ ಮುಟ್ಟಿಸಿದೆ. ಪದ ಸೋಷಿಯಲ್​ ಮೀಡಿಯಾ ನಿರ್ವಹಣೆ ವಿಚಾರದಲ್ಲಿ ಈ ಹಿಂದೆ ತಲೆದೋರಿದ್ದ ವಿರಸ ಮತ್ತೆ ಮುನ್ನೆಲೆಗೆ ಬಂದಿದ್ದು, ಮುಂಬರುವ ಉಸ್ತುವಾರಿ ಸಮ್ಮುಖದ ಸಭೆಯಲ್ಲಿ ಇದೂ ಸಹ ದೂರಿನ ಪಟ್ಟಿಯಲ್ಲಿ ಪ್ರಧಾನ ಅಸ್ತ್ರವಾಗಿ ಬಳಕೆಯಾಗಲಿದೆ ಎಂಬ ಮಾಹಿತಿ ಇದೆ.
25 ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರ ಬದಲಾವಣೆಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ಸಂಟನೆ ಬಲಗೊಳಿಸಲು ನಿರ್ಧರಿಸಲಾಗಿದ್ದು, 25 ಸಂಟನಾ ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿ ಕ್ರಿಯಾಶೀಲರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್​ನಲ್ಲಿ 37 ಸಂಟನಾ ಜಿಲ್ಲೆಗಳಿದ್ದು, ಅದರಲ್ಲಿ 12 ಅಧ್ಯಕ್ಷರು ಮಾತ್ರ ಪಕ್ಷ ಸಂಟನೆಯಲ್ಲಿ ನಿರತರಾಗಿದ್ದಾರೆ. ಉಳಿದವರು ಹೈಕಮಾಂಡ್​ ನಿರೀೆಗೆ ತಕ್ಕಂತೆ ಪಕ್ಷ ಸಂಟನೆ ಹಾಗೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಆದ್ದರಿಂದಲೇ ಚುನಾವಣೆಗೆ 2 ವರ್ಷ ಇದ್ದರೂ ನಿರೀತ ಪ್ರಮಾಣದಲ್ಲಿ ಪಕ್ಷ ಸಜ್ಜಾಗುತ್ತಿಲ್ಲ. ಇದರಿಂದಾಗಿಯೇ ಅಮೂಲಾಗ್ರ ಬದಲಾವಣೆಗೆ ಪಕ್ಷ ಮುಂದಾಗಿದೆ. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಂದೀಪ್​ಸಿಂಗ್​ ಸುರ್ಜೇವಾಲಾ ಸಂಟನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಂಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅವರ ಸೂಚನೆಯಂತೆಯೇ ನಿಷ್ಕಿ$ಯ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಚಾಮರಾಜನಗರ, ಕೋಲಾರ, ಹುಬ್ಬಳ್ಳಿ&ಧಾರವಾಡ, ಬಾಗಲಕೋಟೆ, ವಿಜಯಪುರ, ಉಡುಪಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ 12 ಸಂಟನಾ ಜಿಲ್ಲೆಗಳಲ್ಲಿ ಪಕ್ಷದ ಸಂಟನೆ ದಿನೇ ದಿನೆ ಉತ್ತಮವಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ನಿರೀತ ಫಲಿತಾಂಶ ಬರುತ್ತಿಲ್ಲ.
ಪದಾಧಿಕಾರಿಗಳ ನೇಮಕ:ಹೊಸದಾಗಿ ಪದಾಧಿಕಾರಿಗಳ ನೇಮಕಕ್ಕೆ ಸಿದ್ಧತೆ ನಡೆದಿದೆ. ಈವರೆಗೂ 250 ಜನರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ 90 ಜನರನ್ನು ನೇಮಕ ಮಾಡಲು ಹೈಕಮಾಂಡ್​ ಸೂಚನೆ ನೀಡಿದೆ. ಜಿಲ್ಲಾಧ್ಯಕ್ಷರ ಬದಲಾವಣೆ ಹಾಗೂ ಪದಾಧಿಕಾರಿಗಳ ನೇಮಕ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಹಿರಿಯ ಮುಖಂಡರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ರ್ಖಗೆ, ಕೆ.ಎಚ್​. ಮುನಿಯಪ್ಪ, ಇತರರೊಂದಿಗೆ ಚರ್ಚೆ ನಡೆಸಿ ಪಟ್ಟಿ ಸಿದ್ಧ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಡಿಕೆಶಿ ದೆಹಲಿಗೆ ತೆರಳಿ ವರಿಷ್ಠರ ಒಪ್ಪಿಗೆ ಪಡೆದು ಬರಲಿದ್ದಾರೆ.ಎಡಗೈಗೆ ಪ್ರಚಾರ ಸಮಿತಿ?: ಕೆಪಿಸಿಸಿಯಲ್ಲಿ ಎಡಗೈ ಸಮುದಾಯಕ್ಕೆ ಪ್ರಾತಿನಿದ್ಯ ಸಿಕ್ಕಿಲ್ಲ. ಒಬ್ಬ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವಂತೆ ಸಮುದಾಯದಿಂದ ಬೇಡಿಕೆ ಇತ್ತು. ಲಭ್ಯ ಮಾಹಿತಿ ಪ್ರಕಾರ ಪ್ರಚಾರ ಸಮಿತಿಯಅಧ್ಯಕ್ಷ ಸ್ಥಾನದ ಹೊಣೆಯನ್ನು ಎಡಗೈ ಸಮುದಾಯಕ್ಕೆ ನೀಡುವ ಬಗ್ಗೆ ಹೈಕಮಾಂಡ್​ ಒಲವು ತೋರಿಸಿದೆ ಎನ್ನಲಾಗಿದೆ. ಕೆ.ಎಚ್​. ಮುನಿಯಪ್ಪ, ಎಲ್​. ಹನುಮಂತಯ್ಯ, ಮಾಜಿ ಸಚಿವರಾದ ಎಚ್​. ಆಂಜನೇಯ, ಆರ್​.ಬಿ. ತಿಮ್ಮಾಪುರ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಸುರ್ಜೇವಾಲಾ ಸಭೆಲಾಕ್​ಡೌನ್​ ಮುಗಿದ ನಂತರ ಉಸ್ತುವಾರಿ ಸುರ್ಜೇವಾಲಾ ರಾಜ್ಯಕ್ಕೆ ಬರಲಿದ್ದು, ಅವರ ಸಮ್ಮುಖ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಪಕ್ಷದ ಸಂಟನೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಕಾರ್ಯಕ್ರಮಗಳನ್ನು ಈ ಸಭೆ ರೂಪಿಸಲಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 3 =
Remember me
