ಬೆಂಗಳೂರು:ಮಾಜಿ ಸಂಸದ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರನ್ನು ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಆಯೋಗದ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಮೊಹಮದ್ ಸನಾವುಲ್ಲಾ ಹಾಗೂ ನಿವೃತ್ತ ನಿಯಂತ್ರಕ ಆರ್.ಎಸ್.ಪಾಂಡೆ ನೇಮಕವಾಗಿದ್ದಾರೆ. ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಜವಾಬ್ದಾರಿ ಪೂಣಾವಧಿಯದಾಗಿದೆ. ಸಂಭಾವನೆ ಮತ್ತು ಭತ್ಯೆಯನ್ನು ಸರ್ಕಾರ ನಿಗದಿಪಡಿಸಲಿದೆ.
ರಾಜ್ಯ ಸರ್ಕಾರ ಹಾಗೂ ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಡುವೆ ಕ್ರೋಡೀಕೃತ ಸಂಪನ್ಮೂಲ ಹಂಚಿಕೆ, ಸರ್ಕಾರ ವಿಧಿಸುವ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾಲು ನಿಗದಿ, ತೆರಿಗೆ ಸಂಗ್ರಹದ ಮೂಲಗಳ ವ್ಯಾಪ್ತಿ ನಿಗದಿ, ಆರ್ಥಿಕ ದಕ್ಷತೆ ಮುಂತಾದವುಗಳ ಅಧ್ಯಯನ ನಡೆಸಿ ಶಿಾರಸು ಮಾಡುವುದು ಆಯೋಗದ ಪ್ರಮುಖ ಜವಾಬ್ದಾರಿಯಾಗಿದೆ.
ಸ್ಥಳೀಯ ಸಂಸ್ಥೆಗಳ ವೆಚ್ಚಗಳ ಸರಿದೂಗಿಸಲು ಕೈಗೊಳ್ಳಬೇಕಾದ ಆರ್ಥಿಕ ಸಂಪನ್ಮೂಲ ಸುಧಾರಣೆ ಕ್ರಮಗಳು, ಸರ್ಕಾರಕ್ಕೆ ಬಾಕಿ ಮರುಪಾವತಿ, ಭವಿಷ್ಯದ ಹಂಚಿಕೆ ಇನ್ನಿತರ ಅಂಶಗಳ ಬಗ್ಗೆಯೂ ಅಧ್ಯಯನ ನಡೆಸಿ ಆಯೋಗವು ಸಲಹೆ ನೀಡಬಹುದಾಗಿದೆ.
ರಾಜ್ಯ ಸರ್ಕಾರದ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ, ಬೇಡಿಕೆ, ನಾಗರಿಕ ಆಡಳಿತ ವೆಚ್ಚ, ಸಾಲ ವ್ಯವಸ್ಥೆ, ಅಭಿವೃದ್ದಿ ಮತ್ತು ಬದ್ಧತಾ ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿಚಾರಗಳ ಕುರಿತು ಆಯೋಗ ಶಿಾರಸು ಮಾಡಬಹುದಾಗಿದ್ದು, 2024ರ ೆ.28ಕ್ಕೆ ವರದಿ ಸಲ್ಲಿಸಬೇಕೆಂದು ಆರ್ಥಿಕ ಇಲಾಖೆ (ಜಿ.ಪಂ.) ಹೊರಡಿಸಿದ ಆದೇಶದಲ್ಲಿ ಆಯೋಗಕ್ಕೆ ತಿಳಿಸಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:sixteen − 10 =
Remember me
