ಬೆಂಗಳೂರು:ಕರೊನಾ ಸೋಂಕನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್​ಜಿಯುಎಚ್​ಎಸ್)ದ ರಜತ ಮಹೋತ್ಸವವನ್ನು ಡಿಜಿಟಲ್ ವೇದಿಕೆ ಮೂಲಕ ಉದ್ಘಾಟಿಸಿದ ಅವರು, ಕರೊನಾ ಪ್ರಪಂಚವನ್ನು ಬಾಧಿಸುತ್ತಿದೆ. ವಿಶ್ವಯುದ್ಧದ ನಂತರ ಕರೊನಾ ಇಡೀ ಜಗತ್ತೇ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಇಂಥ ಕರೊನಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿಬಿಹಾರ ಚುನಾವಣೆ ಪ್ರಚಾರಕ್ಕೆ ವಿಡಿಯೋ ಮೂಲಕವೇ ಅಮಿತ್ ಷಾ ರ‌್ಯಾಲಿ
ವೈದ್ಯರು ಮತ್ತು ನರ್ಸ್ ಸಿಬ್ಬಂದಿ ಜನರ ಪ್ರಾಣ ಉಳಿಸುವುದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇವರು ಸೇನಾ ಸಮವಸ್ತ್ರ ಧರಿಸದ ಸೇನಾನಿಗಳು. ಇವರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗುತ್ತದೆ. ಇವರ ರಕ್ಷಣೆಗೆ ಸರ್ಕಾರ ಬದ್ಧ, ಇದಕ್ಕಾಗಿಯೇ 50 ಲಕ್ಷ ರೂ. ವಿಮೆ ನೀಡುತ್ತಿದ್ದೇವೆ ಎಂದರು.
ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆಯ ಹಾದಿಯಲ್ಲಿದೆ. ಕರೊನಾ ವಾರಿಯರ್ಸ್ ರಕ್ಷಣೆಗಾಗಿ ಈವರೆಗೆ 1 ಕೋಟಿ ಪಿಪಿಇ ಕಿಟ್, 1.25 ಕೋಟಿ ಎನ್95 ಮಾಸ್ಕ್ ನೀಡಿದ್ದೇವೆ. ಆಯುಷ್ಮಾನ್ ಭಾರತ್, ಇಂಧ್ರಧನುಷ್ ಕಾರ್ಯಕ್ರಮಗಳ ಮೂಲಕ ಜನರ ಆರೋಗ್ಯ ಕಾಪಾಡುತ್ತಿದ್ದೇವೆ. 12 ಕೋಟಿ ಜನರು ಆರೋಗ್ಯ ಸೇತು ಮೊಬೈಲ್ ಆಪ್ ಉಪಯೋಗಿಸುತ್ತಿದ್ದು, ಕರೊನಾ ಬಗ್ಗೆ ಪ್ರತಿನಿತ್ಯ ಅಪ್​ಡೇಟ್ಸ್ ಪಡೆಯುತ್ತಿರುವುದು ಒಳ್ಳೆಯ ವಿಚಾರ ಎಂದರು. ವೈದ್ಯರಾಗುವ ಅಭ್ಯರ್ಥಿಗಳ ಕನಸು ನನಸು ಮಾಡುವ ಉದ್ದೇಶದಿಂದ 30 ಸಾವಿರ ಎಂಬಿಬಿಎಸ್ ಮತ್ತು 15 ಸಾವಿರ ಸ್ನಾತಕೋತ್ತರ ಕೋರ್ಸ್​ಗಳ ಇನ್​ಟೇಕ್ ಹೆಚ್ಚಳ ಮಾಡಿದ್ದೇವೆ. ಭಾರತೀಯ ವೈದ್ಯಕೀಯ ಮಂಡಳಿ ನಿಯಮಗಳನ್ನು ಪಾಲಿಸಿ ಪ್ರತಿ ಜಿಲ್ಲೆಯಲ್ಲೊಂದು ಮೆಡಿಕಲ್ ಕಾಲೇಜು ನಿರ್ವಿುಸಲು ನಮ್ಮ ಸರ್ಕಾರ ಬದ್ಧವಾಗಿದೆ. 2025ರ ವೇಳಗೆ ‘ಕ್ಷಯಮುಕ್ತ ಭಾರತ’ ಮಾಡುತ್ತೇವೆ ಎಂದರು.
ಇದನ್ನೂ ಓದಿಮದುವೆಗಳಲ್ಲಿ 250 ಜನ ಭಾಗವಹಿಸುವುದಕ್ಕೆ ಅವಕಾಶ: ಮ್ಯಾರೇಜ್ ಹಾಲ್‌ಗಳಿಂದ ಸಿಎಂ ಮೇಲೆ ಒತ್ತಡ
ಆರೋಗ್ಯ ಕ್ಷೇತ್ರದಲ್ಲಿ ಆರ್​ಜಿಯುಎಚ್​ಎಸ್ ಉತ್ತಮ ಕೆಲಸ ಮಾಡುತ್ತಿದೆ. ಮುಂದೆಯೂ ಹಲವಾರು ಸಂಶೋಧನೆ ಕೈಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡುವ ಆತ್ಮವಿಶ್ವಾಸ ನನಗಿದೆ ಎಂದರು.
ರಾಜೀವ್ ಗಾಂಧಿ ವಿವಿ ಹೊರ ತಂದಿರುವ ಹ್ಯಾಕಥಾನ್ ಕೈಪಿಡಿಯನ್ನು ಇದೇ ವೇಳೆ ರಾಜ್ಯಪಾಲ ವಿ.ಆರ್.ವಾಲಾ ಬಿಡುಗಡೆ ಮಾಡಿದರು. 150 ತಂಡಗಳು ಹ್ಯಾಕಥಾನ್​ನಲ್ಲಿ ಭಾಗವಹಿಸಲಿದ್ದು, ಅಂತಿಮವಾಗಿ 20 ತಂಡಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದು ರಾಜೀವ್ ಗಾಂಧಿ ವಿವಿ ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕುಲಸಚಿವ (ಮೌಲ್ಯಮಾಪನ) ಡಾ.ಕೆ.ಬಿ. ಲಿಂಗೇಗೌಡ ಇತರರು ಇದ್ದರು.
ತಾಳಿಯನ್ನೇ ಅಡವಿಟ್ಟು ತಿಥಿ ಮುಗಿಸಿದ ಕರೊನಾ ಸೇನಾನಿಯ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
