ಬೆಂಗಳೂರು:ಡ್ರಗ್ಸ್ ವಿರುದ್ಧ ನಮ್ಮ ಸರ್ಕಾರ ಯುದ್ಧ ಘೋಷಿಸಿದೆ. ಈ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದ್ದು, ಕೇವಲ ಮಾದಕ ವಸ್ತು ಮಾರಾಟ ಮಾಡುವವರನ್ನು ಬಂಧಿಸಿದರೆ ಪ್ರಯೋಜನವಾಗುವುದಿಲ್ಲ. ಅದರ ಮೂಲ ಪತ್ತೆ ಹಚ್ಚಿ ಬೆನ್ನುಮೂಳೆ ಮುರಿಯಬೇಕಾಗಿದೆ. ಆ ಕೆಲಸ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್​ನ ಕೆ.ಜೆ.ಜಾರ್ಜ್ ಪ್ರಶ್ನೆಗೆ ಉತ್ತರಿಸಿದ ಅವರು, ಇಂಟರ್ನೆಟ್ ಮೂಲಕವೂ ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ. ಟಿಒಆರ್ ಎಂಬ ಸರ್ಚ್ ಇಂಜಿನ್ ಡಾರ್ಕ್ ವೆಬ್ ಮೂಲಕವೂ ತರಿಸಲಾಗುತ್ತಿದೆ. ಇದನ್ನು ಬೇಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು. ಡ್ರಗ್ಸ್ ಕೇವಲ ಸರ್ವಜ್ಞನಗರ, ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯಾಗಿದೆ. ಇದೊಂದು ಸಾಮಾಜಿಕ ಪಿಡುಗು. ಕೇವಲ ಪೊಲೀಸರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದ ಸಹಕಾರ ಮುಖ್ಯವೆಂದರು.
ಡಾರ್ಕ್ ವೆಬ್​ಗಳಿಗೆ ಯಾರು ಬೇಕಾದರೂ ಪ್ರವೇಶ ಮಾಡುವಂತಿಲ್ಲ, ಆಹ್ವಾನ ಸ್ವೀಕರಿಸಿದವರಿಗಷ್ಟೇ ಪ್ರವೇಶಾವಕಾಶ ಇರುತ್ತದೆ. ಅಲ್ಲಿ ಡ್ರಗ್ಸ್, ಶಸ್ತ್ರಾಸ್ತ್ರ ವ್ಯಾಪಾರ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿದೆ. ಇದರ ಮೇಲೆ ಪೊಲೀಸ್ ನಿಗಾ ಇಟ್ಟಿದೆ. ಸಿಸಿಬಿ ಘಟಕ ಹಲವೆಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬೆಂಗಳೂರಿನ ಡಿಜಿ ಹಳ್ಳಿ, ಕೆಂಗೇರಿ, ಬಸವೇಶ್ವರನಗರ ಮುಂತಾದೆಡೆ ಪ್ರಕರಣ ದಾಖಲಿಸಲಾಗಿದೆ. ಈ ದಾಳಿಗಳು ಮುಂದುವರಿಯಲಿವೆ ಎಂದರು.
ಆರೋಪಿಗಳಿಗಿಂತ ಒಂದು ಹೆಜ್ಜೆ ಸ್ಪೀಡ್ ಪೋಸ್ ಮೂಲಕವೂ ಡ್ರಗ್ಸ್ ಸರಬರಾಜಾಗುತ್ತಿರುವುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ಇದೇ ವಿಚಾರವಾಗಿ ಅಂಚೆ ಇಲಾಖೆಯ ನಾಲ್ವರು ಸಿಬ್ಬಂದಿ ಬಂಧಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 2019ರಲ್ಲಿ 1652 ಡ್ರಗ್ಸ್ ಪ್ರಕರಣ ದಾಖಲಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ, 600 ಪ್ರಕರಣಗಳು ಹೆಚ್ಚಾಗಿವೆ. ಅದರರ್ಥ ಸಾಧನೆ ಅಲ್ಲ, ಟ್ರೆಂಡ್ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಸಲಾಗುತ್ತಿದೆ. ಪಿಂಕ್ ಹೊಯ್ಸಳ ಮತ್ತು ಇತರ ವಿಶೇಷ ಗಸ್ತು ವಾಹನಗಳು ಇದೇ ವಿಚಾರದಲ್ಲಿ ತಿರುಗುತ್ತಿವೆ ಎಂದ ಸಚಿವರು, ಡ್ರಗ್ಸ್ ಮಾರಾಟ, ಸಂಗ್ರಹಣೆಯನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಅವುಗಳನ್ನು ತಡೆಯಲು ಕಟಿಬದ್ಧವಾಗಿದೆ. ಏಪ್ರಿಲ್​ನಲ್ಲಿ ದೊಡ್ಡ ಜಾಗೃತಿ ಅಭಿಯಾನ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
1989ರ ಕಾಯ್ದೆಗೆ ತಿದ್ದುಪಡಿ
ಡ್ರಗ್ಸ್ ಕರೊನಗಿಂತ ಅಪಾಯಕಾರಿ ವೈರಸ್. ಇದು ಎಲ್ಲಿಂದ ಬರುತ್ತದೆ ಎಂದು ಮೂಲ ಪತ್ತೆ ಹಚ್ಚಬೇಕು. ಇದಕ್ಕಾಗಿ ಗುಪ್ತಚರ ಬಲಗೊಳ್ಳಬೇಕು, ಬದ್ಧತೆಯುಳ್ಳ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸಲಹೆ ನೀಡಿದರು. ಇದಕ್ಕುತ್ತರಿಸಿದ ಬಸವರಾಜ ಬೊಮ್ಮಾಯಿ, ಈ ವರ್ಷ ವಿಶೇಷ 8 (ಸೆನ್) ಠಾಣೆಗಳನ್ನು ತೆರೆಯಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಠಾಣೆಗಳನ್ನು ತೆರೆಯಲಾಗಿದೆ ಎಂದರು. ಮಾದಕ ವಸ್ತುಗಳ ಮಾರಾಟ ನಿಯಂತ್ರಣ ಕಾಯ್ದೆ 1989ರ ಕಾಯ್ದೆ ಬದಲಾಯಿಸ ಬೇಕಾಗಿದೆ. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದರು.
ಅಬಕಾರಿ ಇಲಾಖೆ ಗುರಿ ನಿಯಂತ್ರಣ ಜಿಜ್ಞಾಸೆ
ಅಬಕಾರಿ ಇಲಾಖೆಗೆ ನೀಡುವ ಟಾರ್ಗೆಟ್ ಬಗ್ಗೆ ವಿಧಾನಸಭೆ ಪ್ರಶ್ನೋತ್ತರ ವೇಳೆ ಬಿಸಿಬಿಸಿ ಚರ್ಚೆ ನಡೆಯಿತು. ತಮ್ಮ ಮತಕ್ಷೇತ್ರದ ಶಾಲೆಯೊಂದರ ಮುಂಭಾಗವೇ ಬಾರ್ ಆರಂಭವಾಗಿರುವುದನ್ನು ಸರ್ಕಾರದ ಗಮನಕ್ಕೆ ತಂದ ಕಲಬುರಗಿ ದಕ್ಷಿಣದ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಬೆಳಗ್ಗೆ 4 ಗಂಟೆಗೆಲ್ಲ ಬಾರ್ ತೆರೆದಿರುತ್ತದೆ. ಇದರ ವಿರುದ್ಧ ಅಬಕಾರಿ ಸಚಿವರು ಕ್ರಮಕೈಗೊಳ್ಳಲಿ ಎಂದರು. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ, ಪಾನ್​ಶಾಪ್, ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ ಟಾರ್ಗೆಟ್ ಎನ್ನುತ್ತಾರೆ ಎಂದು ತಿಳಿಸಿದರು. ರೇವೂರ್​ಗೆ ಪ್ರಿಯಾಂಕ್ ಖರ್ಗೆ ದನಿ ಗೂಡಿಸಿದರು. ಟಾರ್ಗೆಟ್ ನಿಗದಿ ಮಾಡುವವರ ವಿರುದ್ಧ ಏನು ಕ್ರಮ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಟಾರ್ಗೆಟ್ ವಿಚಾರ ನಿಜವಿದೆ. ಗುರಿ ಮತ್ತು ನಿಯಂತ್ರಣದ ಬಗ್ಗೆ ದೊಡ್ಡ ಜಿಜ್ಞಾಸೆ ಇದೆ ಎಂದು ವಿಷಯಕ್ಕೆ ತೆರೆ ಎಳೆದರು.
15ರಂದು ಬೃಹತ್ ಉದ್ಯೋಗ ಮೇಳ

VIDEO: ಯಾವ ಮಕ್ಕಳಿಗೆ ರಜಾ, ಯಾರಿಗೆ ಪರೀಕ್ಷೆ? ಗೊಂದಲ ಬೇಡ- ಸಚಿವ ಸುರೇಶ್ ಕುಮಾರ್​ ಸ್ಪಷ್ಟ ಮಾಹಿತಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twelve =
Remember me
