ಬೆಳಗಾವಿ:ವಿವಿಧ ಸಮುದಾಯಗಳ ಮೀಸಲಾತಿ ಸಮಸ್ಯೆಗೆ ಕೊನೆಗೂ ರಾಜ್ಯ ಸರ್ಕಾರ ಇಂದು ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ಪರಿಹಾರ ಕಂಡುಕೊಂಡಿದೆ. ಪ್ರವರ್ಗ 2ಎ ಮತ್ತು 2ಬಿ ಜತೆಗೆ 2ಸಿ ಮತ್ತು 2ಡಿಯನ್ನು ಹೊಸದಾಗಿ ರಚಿಸಿ ರಾಜ್ಯದ ಎರಡು ಪ್ರಬಲ ಸಮುದಾಯಗಳ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಿದೆ.
2ಎ ಮತ್ತು 2 ಬಿ ಜತೆಗೆ ಹೊಸದಾಗಿ ರಚನೆಯಾಗುವ 2ಸಿ ಮತ್ತು 2ಡಿ ಪ್ರವರ್ಗಕ್ಕೆ 3ಎ ಮತ್ತು 3 ಬಿನಲ್ಲಿರುವ ಸಮುದಾಯಗಳನ್ನು ವರ್ಗಾಯಿಸಲಾಗುತ್ತದೆ. ಅಂದರೆ, 3ಎನಲ್ಲಿರುವ ಒಕ್ಕಲಿಗರು 2ಸಿಗೂ, 3ಬಿನಲ್ಲಿರುವ ಲಿಂಗಾಯತರನ್ನು 2ಡಿಗೆ ವರ್ಗಾಯಿಸಲು ಸಂಪುಟ ಸಭೆ ಒಪ್ಪಿದೆ. 2ಎ ಮತ್ತು 2ಬಿನಲ್ಲಿರುವ ಸಮುದಾಯಗಳಿಗೆ ಯಾವುದೇ ಮೀಸಲು ಕಡಿತ ಮಾಡದೇ ಹೊಸ ಲೆಕ್ಕಾಚಾರ ರೂಪಿಸಲಾಗಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಇಡಬ್ಯ್ಲುಎಸ್ ಕೋಟಾದಡಿ ಶೇ.10ರಷ್ಟು ಮೀಸಲು ನೀಡಲಾಗುತ್ತಿದೆ. ಇದು ಶಿಕ್ಷಣ ಹಾಗೂ ಉದ್ಯೋಗಕ್ಕೆ ಮೀಸಲಾಗಿದೆ. ಇಡಬ್ಯ್ಲುಎಸ್‌ನಡಿ ಬ್ರಾಹ್ಮಣರು ಹಾಗೂ ವೈಶ್ಯರು ಸೇರಿದಂತೆ ಕೆಲವೇ ಜಾತಿಗಳು ಬರುತ್ತವೆ. ಇವರ ಜನಸಂಖ್ಯೆಯನ್ನು ಪರಿಗಣಿಸಿ ಮೀಸಲು ಪ್ರಮಾಣ ನಿಗದಿ ಮಾಡಲಾಗುತ್ತದೆ. ಜನಗಣತಿ ವರದಿ ಪರಿಗಣಿಸಿ ಶೇ. 3ರಷ್ಟು ಇಡಬ್ಯ್ಲುಎಸ್‌ನಡಿ ಮೀಸಲು ಸಿಗಲಿದೆ. ಅಂದರೆ ಉಳಿದಿದ್ದರಲ್ಲಿ 2ಸಿಗೆ ಶೇ. 2, 2ಡಿ ಹೆಚ್ಚುವರಿಯಾಗಿ ಸಿಗಲಿದೆ. 8.5 ಲಕ್ಷ ರೂ. ಆದಾಯ ಮಿತಿ ಇರುವವರಿಗೆ ಈ ಮೀಸಲು ಬಳಸಿಕೊಳ್ಳಲು ಅವಕಾಶವಿದೆ. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪ್ರಸ್ತುತ ಮಧ್ಯಂತರ ವರದಿ ನೀಡಿದ್ದು ಮೂರು ತಿಂಗಳಲ್ಲಿ ಪೂರ್ಣ ವರದಿ ಸಲ್ಲಿಸಲಿದೆ. ನಂತರವೇ ರಾಜ್ಯ ಸರ್ಕಾರ ಕೇಂದ್ರಕ್ಕೆ ತನ್ನ ಶಿಫಾರಸು ಸಲ್ಲಿಸಲಿದೆ.
3ಎನಲ್ಲಿ ಒಕ್ಕಲಿಗರು, ಹೆಗ್ಗಡೆ, ಕಮ್ಮ, ರೆಡ್ಡಿ ಗೌಂಡರ್, ನಾಮಧಾರಿ ಗೌಡ ಸೇರಿ ಇತರೆ ಜಾತಿಗಳಿವೆ. 3ಬಿನಲ್ಲಿ ವೀರಶೈವ ಲಿಂಗಾಯತ, ಮರಾಠ, ಕ್ಷತ್ರಿಯ, ಕ್ರಿಶ್ಚಿಯನ್, ಬಂಟರು, ದಿಗಂಬರ ಜೈನ್, ಸತಾನ್, ಕದ್ರಿ ವೈಷ್ಣವ ಸೇರಿ ಇತರ ಜಾತಿಗಳಿವೆ. 3ಬಿ ಯಲ್ಲಿದ್ದ ಲಿಂಗಾಯತರಿಗೆ ಶೇ. 5ರಷ್ಟಿದ್ದ ಮೀಸಲಾತಿ ಪ್ರಮಾಣ ಶೇ.7ಕ್ಕೆ ಏರಿಕೆಯಾಗಲಿದೆ. 3ಎ ನಲ್ಲಿದ್ದ ಒಕ್ಕಲಿಗರಿಗೆ ಶೇ. 4ರಷ್ಟಿದ್ದ ಮೀಸಲಾತಿ ಶೇ. 6ಕ್ಕೆ ಏರಿಕೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
