ಬೆಂಗಳೂರು:ಚಲನಚಿತ್ರ ಮಂದಿರಗಳಲ್ಲಿ ಹೌಸ್ ಫುಲ್​ಗೆ ಸರ್ಕಾರ ಕೊನೆಗೂ ಓಕೆ ಎಂದಿದೆ. ಚಿತ್ರೋದ್ಯಮದ ನಿರಂತರ ಒತ್ತಡ ಹೆಚ್ಚಳ, ಕರೊನಾ ಸೋಂಕು ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಗ್ರೀನ್ ಸಿಗ್ನಲ್ ನೀಡಿದೆ.
ಸಿಎಂ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಶನಿವಾರದಿಂದಲೇ ಶೇ.100 ಸೀಟುಗಳ ಭರ್ತಿಗೆ ಅನುಮತಿ ನೀಡಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಈ ಮಾಹಿತಿ ನೀಡಿದರು. ಯೋಗ ಕೇಂದ್ರ, ಈಜುಗೊಳ, ಜಿಮ್ ಸೆಂಟರ್​ಗಳ ಭರ್ತಿಗೂ ಒಪ್ಪಿಗೆ ನೀಡಿದ್ದು, ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ ಎಂದರು.
ಚಿತ್ರಮಂದಿರಗಳ ಒಳಗೆ ಪ್ರೇಕ್ಷಕರು ಯಾವುದೇ ತಿಂಡಿ, ತಿನಿಸು ಪದಾರ್ಥ ಕೊಂಡೊಯ್ಯುವಂತಿಲ್ಲ. ಮಾಸ್ಕ್ ಧರಿಸುವುದು‌ ಕಡ್ಡಾಯ. ಈ ಸಂಬಂಧ ವಿಸ್ತೃತ ಮಾರ್ಗಸೂಚಿಯನ್ನು ಇಂದು ಪ್ರಕಟಿಸಲಾಗುತ್ತೆ. ಸಿನಿಮಾ ಟಾಕೀಸ್, ಜಿಮ್, ಈಜುಕೊಳ ಮಾಲೀಕರು ಈ ನಿಯಮಗಳ ಪಾಲನೆ, ನಿಗಾ ಎರಡನ್ನೂ ಮಾಡಬೇಕು. ಇಲಾಖೆ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ ಎಂದು ಡಾ.ಸುಧಾಕರ್ ತಿಳಿಸಿದರು.
ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
