ಮಾಹಿತಿ ತಂತ್ರಜ್ಞಾನಕ್ಷೇತ್ರವನ್ನು ರಾಜ್ಯದಲ್ಲಿ ಮತ್ತಷ್ಟು ಉಜ್ವಲಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ 2020-2025 ರ ಅವಧಿಗೆ ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿ ರೂಪಿಸಿದೆ. ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಈ ನೀತಿಗೆ ಒಪ್ಪಿಗೆ ನೀಡಿದೆ. ಐಟಿ, ಐಟಿಇಎಸ್ ವಲಯ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಕರ್ನಾಟಕ ತನ್ನ ನೇತೃತ್ವದ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಐಟಿ ಕಾರ್ಯನೀತಿ ಹೊಂದಿದೆ. 60 ಲಕ್ಷ ಉದ್ಯೋಗ ಸೃಜಿಸುವ ಸಂಕಲ್ಪವನ್ನಿಟ್ಟು ಕೊಂಡು ಈ ನೀತಿ ನಿರೂಪಿಸಲಾಗಿದೆ.
ಮುಖ್ಯಾಂಶಗಳು
ಹೊಸ ವಿದ್ಯುನ್ಮಾನ ನೀತಿ ಜಾರಿ
ರಾಜ್ಯ ಸರ್ಕಾರದ ವಿದ್ಯುನ್ಮಾನ ನೀತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ವ್ಯಾಪ್ತಿಯ ಹೊರತಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗುವ ಕೈಗಾರಿಕೆಗಳಿಗೆ ಜಮೀನಿನ ಮೇಲೆ ಶೇ.25 ರಷ್ಟು ಬಂಡವಾಳ ಹೂಡಿಕೆಯ ಸಹಾಯಧನವನ್ನು (ಸಬ್ಸಿಡಿ) ಪಡೆಯಲು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ಅಥವಾ ಕರ್ನಾಟಕ ಸರ್ಕಾರಕ್ಕೆ ಸೇರಿದ ಇನ್ಯಾವುದೇ ಸಂಸ್ಥೆಯಿಂದ ಸಂಗ್ರಹಿಸಿದ್ದಲ್ಲಿ, 50 ಎಕರೆಗಳೊಳಗಿರುವ ಮತ್ತು ಅಷ್ಟು ವಿಸ್ತೀರ್ಣವನ್ನು ಮೀರಿಲ್ಲದ ಜಮೀನು ಪ್ರದೇಶದವರೆಗೆ ಮತ್ತು ವಾಸ್ತವವಾಗಿ ಸಂಗ್ರಹಿಸಿದ ವೆಚ್ಚದ ಆಧಾರದ ಮೇಲೆ ಜಮೀನಿನ ಮೇಲೆ ಶೇ.25 ರಷ್ಟು ಬಂಡವಾಳ ಹೂಡಿಕೆಯ ಸಹಾಯಧನವನ್ನು ಕಲ್ಪಿಸಲಾಗುತ್ತದೆ. ಇತರ ಮೂಲಗಳಿಂದ ಸಂಗ್ರಹಿಸಲಾಗುವ ಜಮೀನಿಗೆ ಸಬ್ಸಿಡಿಯು ಸಂಗ್ರಹಿಸಿದ ಸಮಯದಲ್ಲಿದ್ದ ಜಮೀನಿನ ಮಾರ್ಗಸೂಚಿ ದರದ ಅನ್ವಯ ಇರುತ್ತದೆ. ಇವುಗಳ ಜತೆಗೆ ಇನ್ನೂ ವಿಶೇಷ ಪ್ರೋತ್ಸಾಹಗಳನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ.
ಸದರಿ ಯೋಜನೆಯ ಮೂಲಕ ರಾಜ್ಯ ಸರ್ಕಾರಕ್ಕೆ 5,000 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಮುಂದಿನ 5 ವರ್ಷಗಳ ಅವಧಿಯಲ್ಲಿ 43,000 ನೇರ ಉದ್ಯೋಗವನ್ನು ಸೃಜಿಸುವ ಸಾಮರ್ಥ್ಯ ಹೊಂದಿದೆ.
ಸಂಪುಟದ ನಿರ್ಣಯಗಳು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + seventeen =
Remember me
