ಬೆಂಗಳೂರು:ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡ ಮೀಸಲು ಪ್ರಮಾಣ ಹೆಚ್ಚಿಸಿದ್ದ ರಾಜ್ಯ ಸರ್ಕಾರ, ತನ್ನ ನಿರ್ಧಾರವನ್ನು ಸಂವಿಧಾನದ ಪರಿಚ್ಛೇದದ 9ರಡಿ ಸೇರಿಸುವಂತೆ ರಾಜ್ಯ ಸರ್ಕಾರ ಇಂದು ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಿತ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಗುರುವಾರ ಪತ್ರ ಬರೆದಿದ್ದಾರೆ.
ಶಾಸನ ಸಭೆಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ನೇಮಕ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ 2022 ಅನುಮೋದನೆಗೊಂಡು ರಾಜ್ಯಪಾಲರಿಂದಲೂ ಒಪ್ಪಿತವಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿ ಮುಖ್ಯ ಕಾರ್ಯದರ್ಶಿ ರಾಜ್ಯಪತ್ರದ ಪ್ರತಿಯನ್ನೂ ಲಗತ್ತಿಸಿ ಕೇಂದ್ರಕ್ಕೆ ಪತ್ರ ಕಳಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿನ ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ನೇಮಕ ಅಥವಾ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ. 15ರಿಂದ 17ರಷ್ಟಕ್ಕೆ, ಪರಿಶಿಷ್ಟ ವರ್ಗದವರಿಗೆ ಶೇಕಡ ಮೂರರಿಂದ ಏಳಕ್ಕೆ ಹೆಚ್ಚಿಸಲು ಸರ್ಕಾರ ಕಾನೂನು ರೂಪಿಸಿ, ನಿಯಮ ಜಾರಿಗೊಳಿಸಿತ್ತು. ಆದರೆ, ಸಂವಿಧಾನದ ಪರಿಚ್ಛೇದ 9ರಡಿ ಈ ತೀರ್ಮಾನವನ್ನು ಅಳವಡಿಸದೇ ಹೋದಲ್ಲಿ, ಕಾನೂನಾತ್ಮಕವಾಗಿ ಅದನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಹೋಗಬಹುದು ಎಂಬ ಕೊರಗಿತ್ತು. ಬಹು ದಿನಗಳ ಹೋರಾಟದ ನಂತರ ಸರ್ಕಾರ ಮೀಸಲು ಪ್ರಮಾಣ ಹೆಚ್ಚಿಸಿತ್ತು.
ಈ ನಡುವೆ ಲೋಕಸಭೆಯಲ್ಲಿ ಮೀಸಲು ಹೆಚ್ಚಳ ವಿಚಾರ ಪ್ರಸ್ತಾಪವಾಗಿತ್ತು. ಸಂವಿಧಾನದ ಪರಿಚ್ಛೇದ 9ರಡಿ ಸೇರಿಸುವ ಪ್ರಸ್ತಾಪ ಬಂದಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಇಲ್ಲ ಎಂದೇ ಉತ್ತರಿಸಿತ್ತು. ಕಾಂಗ್ರೆಸ್ ಕೂಡ ಶುಕ್ರವಾರ ಇದೇ ವಿಚಾರ ಇಟ್ಟುಕೊಂಡು ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟಿದೆ. ಎಸ್ಸಿಎಸ್ಟಿ ಮೀಸಲು ಹೆಚ್ಚಿಸಬೇಕೆಂಬ ವಿಷಯದಲ್ಲಿ ಹಲವು ವರ್ಷಗಳ ಬೇಡಿಕೆ ಇತ್ತು. ಬೊಮ್ಮಾಯಿ ಸರ್ಕಾರ ಇತ್ತೀಚೆಗಷ್ಟೇ ಶಾಸನ ಸಭೆಯ ಒಪ್ಪಿಗೆ ಪಡೆದು ದೊಡ್ಡ ಸಮುದಾಯದ ಬೇಡಿಕೆಯನ್ನು ಒಪ್ಪಿತ್ತು. ಆದರೆ, ಈ ತೀರ್ಮಾನಕ್ಕೆ ಸಾಂವಿಧಾನಿಕ ರಕ್ಷಣೆ ಸಿಗದೇ ಹೋದರೆ ಕೈಗೊಂಡ ತೀರ್ಮಾನಕ್ಕೆ ಬೆಲೆ ಬರುವುದಿಲ್ಲ ಎಂದರಿತು ಇದೀಗ ಸರ್ಕಾರ ಕೇಂದ್ರದ ಮುಂದೆ ಪ್ರಸ್ತಾವನೆ ಇಟ್ಟಿದೆ.
ಮೀಸಲು ಪರಿಷ್ಕರಣೆ ಸಂಬಂಧ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಅನುಷ್ಠಾನ ಮಾಡುವ ಮುನ್ನ ಅವಲೋಕಿಸಿ ಶಿಾರಸು ಮಾಡಲು ರಾಜ್ಯ ಸರ್ಕಾರ ನ್ಯಾ.ಸುಭಾಷ್ ಅಡಿ ಸಮಿತಿ ರಚಿಸಿತ್ತು. ಈ ಸಮಿತಿ ಎಸ್ಸಿಎಸ್ಟಿ ಮೀಸಲು ಪರಿಷ್ಕರಣೆ ಸಂಬಂಧ ತನ್ನ ಅಭಿಪ್ರಾಯ ದಾಖಲಿಸಿ, ಕೇಂದ್ರ ಸರ್ಕಾರಿ ಉದ್ಯೋಗ ಹಾಗೂ ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಬುಡಕಟ್ಟು ಪಂಗಡಗಳ ಮೀಸಲಾತಿಯನ್ನು ಹೋಲಿಸಿದಲ್ಲಿ ಬುಡಕಟ್ಟು ಮೀಸಲಾತಿ ಕೊರತೆಯನ್ನು ಗುರುತಿಸಿತ್ತು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 2 =
Remember me
