ಮೈಸೂರು:ರಾಜ್ಯ ಸರ್ಕಾರ ಮೂಡ, ವಾಲ್ಮೀಕಿ ಹಗರಣದಲ್ಲಿ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿಗಳು ಏಕಾಂಗಿಯಾಗಿದ್ದಾರೆ. ಭಯಗೊಂಡಿದ್ದಾರೆ. ಸಮರ್ಥಿಸಿಕೊಳ್ಳಲು ಯಾವುದ್ಯೋವುದೋ ವಿಷಯ ತರುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಪತ್ರಕರ್ತರ ಮೇಲಿನ ನಿರ್ಬಂಧ ತೆರುವುಗೊಳಿಸಿ: ವಿಪಕ್ಷ ನಾಯಕ ರಾಹುಲ್ ಗಾಂಧಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಗರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಾವಶ್ಯಕವಾಗಿ ನನ್ನ ಹೆಸರೇಳುವುದು ಸರಿಯಲ್ಲ. ಸುಳ್ಳು ಹೇಳಿದ ಸಚಿವರ ಮಾತಿಗೆ ಪಕ್ಕದಲ್ಲೇ ಕುಳಿತ ಸಿಎಂ ಚಪ್ಪಾಳೆ ಹೊಡೆಯುತ್ತಾರೆ. ಹಾಗಾದ್ರೆ ಸಿಎಂ ಸುಳ್ಳು ಹೇಳುವವರನ್ನ ಸಮರ್ಥಿಸಿಕೊಂಡಂತೆ. ಸೂರು ಮೂಡ ಕಿತ್ತು ಹೋಗಿದೆ ಎಂದು ನೀವೇ ಹೇಳಿತ್ತೀರಿ. ಕಿತ್ತು ಹೋಗಿರುವ ಮೂಡವನ್ನು ಸರಿಪಡಿಸಬೇಕಲ್ಲವೇ. ಮೂಡ ಕುರಿತು ಪ್ರೆಸ್ ಮೀಟ್ ಮಾಡಿದ್ದು ಸರ್ಕಾರಿ ಪ್ರಯೋಜಿಕತೆಯಲ್ಲಿ ಬಂದಿದ್ದು. ಇತಿಹಾಸದಲ್ಲಿ ಇದೆ ಮೊದಲು ಸರ್ಕಾರದ ಪ್ರಾಯೋಜಕತ್ವದಿಂದಾಗಿದೆ. ಅವರು ತಪ್ಪು ಮಾಡಿಲ್ವಾ, ಇವರು ಮಾಡಿಲ್ವಾ ಎಂದು ಪ್ರಶ್ನೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯದ್ದು ಬಂಡತನ. ಜನದೇಶ ಪಡೆದ ಸರ್ಕಾರ ಬಂಡತನ ಮಾಡಬಾರದು. ಯಾರನ್ನೋ ರಕ್ಷಣೆ ಮಾಡಲು ಯಾರದೋ ಹೆಸರನ್ನು ಹೇಳುತ್ತಿದ್ದಾರೆ. ಕೇವಲ ಜೆಡಿಎಸ್ ಹಾಗೂ ನಮ್ಮ ಬಗ್ಗೆ ಮಾತನಾಡುತ್ತೀರಿ. ಕಾಂಗ್ರೆಸ್​ನಲ್ಲಿ 50:50 ಸೈಟ್ ಪಡೆದವರ ಬಗ್ಗೆ ಯಾಕೆ ಹೇಳುತ್ತಿಲ್ಲ. ಹಿನಕಲ್ ಪಾಪಣ್ಣ ಮನೆಯವರಿಗೆ ಎಷ್ಟು ಸೈಟ್ ಹೋಗಿದೆ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಲಾಯರ್ ಎಂದು ಕಾನೂನು ಹೇಳುತ್ತಿದ್ದಾರೆ ಅಷ್ಟೇ. ಯಾರನ್ನೋ ಬಚಾವ್ ಮಾಡಲು ನೀವು ದಿಕ್ಕು ತಪ್ಪುತ್ತಿದ್ದೀರಿ. ಸ್ಥಾನ ಕಿತ್ತುಕೊಂಡು ಜೆಡಿಎಸ್ ಹೊರ ಹಾಕಿದಾಗ ನಿಮ್ಮನ್ನ ಕೈ ಹಿಡಿದಿದ್ದು ಕಾಂಗ್ರೆಸ್. ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲಾ. ಪತ್ನಿ ಪಾರ್ವತಿ ಅವರ ಪಾತ್ರವೇ ಇಲ್ಲಾ ಆದರೂ ಅವರನ್ನ ಎಳೆದು ತಂದಿದ್ದು ಸಿದ್ದರಾಮಯ್ಯ. ನಿಮ್ಮ ಮಾನ ನೀವೇ ಹಾರಾಜು ಹಾಕಿಕೊಳ್ಳುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ:ಯಾರ್ರೀ ಅವ್ನು ವಿಶ್ವನಾಥ್ ಹಾ ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವ? ಅವ್ನು ಅವನ ಮಗ ಸೈಟ್ ಕೇಳೋಕೆ ನನ್ನ ಮನೆಗೆ ಬಂದಿದ್ರು ಫೋಟೊ ಇದೆ ಎಂಬ ಬೈರತಿ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ ಎಚ್​.ವಿಶ್ವನಾಥ್ ತಿರುಗೇಟು ನೀಡಿದರು.  ಬೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ. ಮಂತ್ರಿತರ ವರ್ತನೆ ಮಾಡು ಅಂದ್ರೆ ಕಂತ್ರಿ ತರ ವರ್ತನೆ ಮಾಡುತ್ತಿದ್ದಾನೆ. ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಕಿ. ಮಂತ್ರಿತರ ವರ್ತನೆ ಮಾಡು ಅಂದ್ರೆ ಕಂತ್ರಿ ತರ ವರ್ತನೆ ಮಾಡುತ್ತಿದ್ದಾನೆ. ನನ್ನ ಹೆಸರನ್ನ ಪ್ರೆಸ್ ಮೀಟ್ ನಲ್ಲಿ ಭೈರತಿ ಸುರೇಶ್ ಒತ್ತಿ ಒತ್ತಿ ಹೇಳಿರುವ ಉದ್ದೇಶ ತಿಳಿಯುತ್ತಿಲ್ಲ ವಾಗ್ದಾಳಿ ನಡೆಸಿದರು.
ಜನರಿಗೆ ಸತ್ಯ ತಿಳಿಸಲು ಪಾದಯಾತ್ರೆ: ಸಿ.ಟಿ.ರವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
