ಬೆಂಗಳೂರು:ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರ ಮದುವೆ ಮಾಡಿದ್ದರು. ಮಗನ ವಿವಾಹವನ್ನು ಅದ್ದೂರಿಯಿಂದ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಕುಮಾರಸ್ವಾಮಿ ಅವರ ಆಸೆಗೆ ಕರೊನಾ ಲಾಕ್​ಡೌನ್​ ತಡೆಯಾಗಿತ್ತು.
ಲಾಕ್​ಡೌನ್ ಇರುವುದರಿಂದ ನಿಖಿಲ್​ ಅವರ ವಿವಾಹ ಅಂದುಕೊಂಡಷ್ಟು ಅದ್ದೂರಿಯಾಗಿ ನಡೆಯದೆ ಇದ್ದರೂ, ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ತಕ್ಕಮಟ್ಟಿಗೆ, ಸಂಭ್ರಮದಿಂದ ನಡೆದಿತ್ತು.
ಇದನ್ನೂ ಓದಿ:ನಿಖಿಲ್ ಮದುವೆಗೆ ನೀಡಿದ ಪಾಸ್ ಕುರಿತು ಇನ್ನೂ ಏಕೆ ವರದಿ ಸಲ್ಲಿಸಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಆದರೆ ವಿವಾಹದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಎಚ್​. ಡಿ.ಕುಮಾರಸ್ವಾಮಿಯವರ ಪುತ್ರನ ವಿವಾಹದಲ್ಲಿ ಲಾಕ್​ಡೌನ್ ನಿಯಮಗಳು ಉಲ್ಲಂಘನೆಯಾಗಿವೆ. ಸಾಮಾಜಿಕ ಅಂತರ ನಿಯಮಗಳ ಪಾಲನೆಯಾಗಿಲ್ಲ. ಮಾಸ್ಕ್​ ಧರಿಸಿಲ್ಲ..ನಾಯಕರೆನಿಸಿಕೊಂಡವರೇ ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಹೇಗೆ? ಎಂಬಿತ್ಯಾದಿ ಕೊಂಕುಗಳು ಕೇಳಿಬಂದಿದ್ದವು.
ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಹೆಚ್ಚೇನೂ ಹೇಳದೆ, ಕುಮಾರಸ್ವಾಮಿಯವರು ನಮ್ಮ ಅನುಮತಿ ಪಡೆದೇ ಪುತ್ರನ ವಿವಾಹ ಮಾಡಿದ್ದಾರೆ. ಅಲ್ಲಿ ಯಾವುದೇ ನಿಯಮಗಳೂ ಉಲ್ಲಂಘನೆ ಆಗಿಲ್ಲ ಎಂದಿದ್ದರು.ಅಷ್ಟಾದ ಮೇಲೆ, ಎಚ್​.ಡಿ.ಕುಮಾರಸ್ವಾಮಿಯವರೂ ಕೂಡ ಟ್ವೀಟ್​ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಕೃತಜ್ಞತೆ ಸಲ್ಲಿಸಿದ್ದರು. ನಾವು ಎಲ್ಲ ನಿಯಮಗಳನ್ನೂ ಪಾಲಿಸಿದ್ದೇವೆ ಎಂದು ಸಮರ್ಥನೆ ಕೊಟ್ಟಿದ್ದರು.
ಇದನ್ನೂ ಓದಿ:ಹೈಕೋರ್ಟ್ ಮೆಟ್ಟಿಲೇರಿತು ನಿಖಿಲ್ ವಿವಾಹ: ಸಾಮಾಜಿಕ ಅಂತರ ಕಾಯ್ದುಕೊಂಡ ಬಗ್ಗೆ ವರದಿ ನೀಡುವಂತೆ ನ್ಯಾಯಾಧೀಶರ ಸೂಚನೆ
ಈ ಮಧ್ಯೆ ನಿಖಿಲ್ ಅವರ ಮದುವೆಯಲ್ಲಿ ಲಾಕ್​ಡೌನ್​ ನಿಯಮಗಳು ಸರಿಯಾಗಿ ಪಾಲನೆಯಾಗಿದ್ದವಾ ಎಂದು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ, ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಅದರ ಅನ್ವಯ ರಾಜ್ಯಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಲಾಕ್​ಡೌನ್ ಅವಧಿಯಲ್ಲಿ ನಡೆದ ನಿಖಿಲ್ ಕುಮಾರಸ್ವಾಮಿ ಮದುವೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಗಿತ್ತು. ಡಿವೈಎಸ್​ಪಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನೀಡಲಾಗಿತ್ತು.
ಇದನ್ನೂ ಓದಿ:ನಿಖಿಲ್ ಮದುವೆಗೆ ನೀಡಿದ ಪಾಸ್ ಕುರಿತು ಇನ್ನೂ ಏಕೆ ವರದಿ ಸಲ್ಲಿಸಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ವಧು-ವರರ ಕುಟುಂಬದವರು ಖಾಸಗಿಯಾಗಿ ಸುರಕ್ಷತಾ ವ್ಯವಸ್ಥೆ ಮಾಡಿಕೊಂಡಿದ್ದರು. ಮದುವೆಗೆ ಆಗಮಿಸಿದವರಿಗೆ ಥರ್ಮಲ್​ ಸ್ಕ್ರೀನಿಂಗ್​ ಮಾಡಲು ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಹಾಗೇ ಅಲ್ಲಿ ಆಗಮಿಸಿದ್ದ ಅತಿಥಿಗಳಿಗೆ ಮಾಸ್ಕ್​ ಮತ್ತು ಸ್ಯಾನಿಟೈಸರ್​ ನೀಡಿದ್ದನ್ನು ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ:ನಿಖಿಲ್-ರೇವತಿ ಮದುವೆಗಾಗಿ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ ಭರದ ಸಿದ್ಧತೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 + 3 =
Remember me
