ಬೆಂಗಳೂರು:ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಸರ್ಕಾರ ಸೈಬರ್ ಭದ್ರತಾ ನೀತಿ 2024 ಅನ್ನು ಇಂದಿನಿಂದ (ಆಗಸ್ಟ್ 01) ಜಾರಿಗೆ ತಂದಿದೆ.ಇದು ರಾಜ್ಯದಲ್ಲಿ ಸೈಬರ್ ಜಾಗೃತಿ ಮೂಡಿಸುವುದು, ಸ್ಟಾರ್ಟಪ್​ಗಳಿಗೆ ಪ್ರೋತ್ಸಾಹಿಸುವುದು ಮತ್ತು ಪರಸ್ಪರ ಸಹಕಾರದ ಮೂಲಕ ರಾಜ್ಯದ ಡಿಜಿಟಲ್ ವ್ಯವಸ್ಥೆಯನ್ನು ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ.
ಯೋಜನೆ ಉದ್ಘಾಟಿಸಿ ಮಾತನಾಡಿದ ಸಚಿವ ಪ್ರಿಯಾಂಕ್​ ಖರ್ಗೆ, ಸೈಬರ್ ಭದ್ರತೆಯ ಅವಶ್ಯಕತೆಯನ್ನು ಮನಗಂಡು ರಾಜ್ಯದ ಪ್ರಜೆಗಳು ಹಾಗೂ ಉದ್ಯಮಿಗಳ ಹಿತಕಾಯುವ ಉದ್ದೇಶದಿಂದ ಈ ಹೊಸ ನೀತಿಯನ್ನು ರಾಜ್ಯ ಸರ್ಕಾರ ತಂದಿದೆ. ಭವಿಷ್ಯದ ಸೈಬರ್ ಬೆದರಿಕೆಯನ್ನು ಎದುರಿಸಲು ಪೂರ್ವಭಾವಿ ಸಿದ್ಧತೆಯಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯದ ಸಹಕಾರದಿಂದ ಈ ನೀತಿಗಳನ್ನು ರೂಪಿಸಲಾಗಿದೆ.
ಈ ನೀತಿಗಳನ್ನು ಎರಡು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಮೊದಲನೆ ಭಾಗ ಸಾರ್ವಜನಿಕ ರಂಗಗಳಾದ ಶಿಕ್ಷಣ, ಉದ್ಯಮ ಮತ್ತು ಸ್ಟಾರ್ಟಪ್​ಗಳ ಡಿಜಿಟಲ್ ಭದ್ರತೆಗೆ ಸಂಬಂಧಿಸಿದ್ದಾಗಿದೆ. ಎರಡನೇ ಭಾಗವು ಆಂತರಿಕವಾಗಿದ್ದು ರಾಜ್ಯ ಸರ್ಕಾರದ ಇಲಾಖೆಗಳ ರಕ್ಷಣೆಗೆ ಸಂಬಂಧಿಸಿರುತ್ತದೆ. ಹೊಸ ನೀತಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕೂಡ ಪರಾಮರ್ಶಿಸಿದೆ. ರಾಜ್ಯದ ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಮತ್ತು ಗೃಹ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಕ್ಷೇತ್ರಗಳ ತಜ್ಞರ ಜತೆ ಚರ್ಚಿಸಿ ಸೈಬರ್ ಭದ್ರತಾ ನೀತಿ 2024 ಅನ್ನು ರೂಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದ್ದಾರೆ.
.@ITBTGoKreleased Karnataka’s Cyber Security Policy . Estimated close to 110 cr, the policy has two parts :The first part focuses on building a strong cyber security ecosystem across all segments of the society – including public, academia, industry, start-ups and the…pic.twitter.com/IL0FsZmto3
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + five =
Remember me
