ಬೆಂಗಳೂರು:ಸಚಿವರ ನಿರ್ಧಾರಗಳನ್ನು ಬಿಜೆಪಿ ಸದಸ್ಯರೇ ಟೀಕಿಸುವ ಮೂಲಕ ವಿಧಾನ ಪರಿಷತ್​ನಲ್ಲಿ ಸರ್ಕಾರಕ್ಕೆ ಇರಿಸು-ಮುರಿಸು ಉಂಟುಮಾಡಿದರು.
ಸೋಮವಾರ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅಕ್ರಮ ನಡೆದಿರುವ ಬಗ್ಗೆ ಪ್ರಸ್ತಾಪಿಸಿದರು. ಅಕ್ರಮ ನಡೆದಿರುವ ಬಗ್ಗೆ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಈವರೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿಲ್ಲ. ಸರ್ಕಾರ ಯಾರನ್ನ ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, ಅಕ್ರಮ ನಡೆದಿರುವುದು ತಿಳಿದು ಬಂದಿದೆ. ಅದಕ್ಕೆ ಸಂಬಂದಿಸಿದಂತೆ ನಿವೃತ್ತ ಐಎಎಸ್​ ಅಧಿಕಾರಿ ಮೂಲಕ ತನಿಖೆ ನಡೆಸಲಾಗುತ್ತಿದೆ. ಅದರ ಜತೆಗೆ ಗಂಗಾ ಕಲ್ಯಾಣ ಅಕ್ರಮ ತನಿಖೆಗೆ ಶೀಘ್ರದಲ್ಲಿ ಸದನ ಸಮಿತಿ ರಚಿಸಲಾಗುವುದು. ಅಕ್ರಮ ಎಸಗಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಡಿಸಿಎಂ ಜತೆ ವಾಗ್ವಾದ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚಿಸಲಾಗಿರುವ ಕಾರ್ಯಪಡೆಗೆ ನಿವೃತ್ತ ಐಎಎಸ್​ ಅಧಿಕಾರಿ ಎಸ್​.ವಿ. ರಂಗನಾಥ್​ ನೇಮಕ ಕುರಿತಂತೆ ಡಿಸಿಎಂ ಡಾ. ಸಿ.ಎನ್​. ಅಶ್ವತ್ಥ ನಾರಾಯಣ್​ ಮತ್ತು ಬಿಜೆಪಿಯ ಎಚ್​.ವಿಶ್ವನಾಥ್​ ನಡುವೆ ವಾಗ್ವಾದ ನಡೆಯಿತು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಂಗನಾಥ್​ ನೇತೃತ್ವದ ಕಾರ್ಯಪಡೆ ರಚಿಸಲಾಗಿದೆ. ಅವರು ನೀಡಿರುವ ವರದಿ ಆಧರಿಸಿ ನೀತಿ ಅನುಷ್ಠಾನ ಮಾಡಲಾಗುವುದು ಎಂದು ಅಶ್ವತ್ಥ ನಾರಾಯಣ್​ ಹೇಳಿದರು. ಇದಕ್ಕೆ ಆಕ್ಷೇಪಿಸಿದ ವಿಶ್ವನಾಥ್​, ಆರ್ಥಿಕ ಅಪರಾಧ ಎಸಗಿದ ಸಂಸ್ಥೆ ಮುಖ್ಯಸ್ಥರೊಬ್ಬರನ್ನು ಕಾರ್ಯಪಡೆಗೆ ನೇಮಿಸಿದ್ದು ತಪ್ಪು. ಅವರನ್ನು ಕೂಡಲೇ ಬದಲಿಸಬೇಕು ಎಂದು ಆಗ್ರಹಿಸಿದರು.
ಅದನ್ನೊಪ್ಪದ ಅಶ್ವತ್ಥ ನಾರಾಯಣ್​, ಉನ್ನತ ಶಿಕ್ಷಣ ಕೌನ್ಸಿಲ್​ನಲ್ಲಿ ಕೆಲಸ ಮಾಡಿದ ಅನುಭವ ರಂಗನಾಥ್​ಗೆ ಇದೆ. ಹಾಗಾಗಿ ಅವರ ನೇಮಕ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಇದೇ ವಿಚಾರವಾಗಿ ಇಬ್ಬರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ವಿಶ್ವನಾಥ್​ ಹೇಳಿಕೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್​, ವಿಶ್ವನಾಥ್​ ಹೇಳುವುದು ಸರಿ ಇದೆ. ರಂಗನಾಥ್​ರನ್ನು ಬದಲಿಸಿ ಎಂದರು. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಿಕೆಯನ್ನು ತಡೆಯುವಂತೆ ಒತ್ತಾಯಿಸಿದರು.
ನಮ್ಮ ದೇವರಿಗೆ ನಮಸ್ತೆ… ಅಂದ ಮುನಿರತ್ನ! ವಿಧಾನಸೌಧದಲ್ಲಿ ಗುರು-ಶಿಷ್ಯ ಮುಖಾಮುಖಿ ಮಾತುಕತೆ

ನನ್ನನ್ನು ಮಂತ್ರಿ ಮಾಡಿ, ಇಲ್ಲವೇ ವಿಷ ಕೊಡಿ… ಈ ಮಾತು ಕೇಳಿ ಕಕ್ಕಾಬಿಕ್ಕಿಯಾದ ಸಿಎಂ

ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
