ಬೆಂಗಳೂರು:ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ಸೋಂಕು ನಿವಾರಣೆಗೆ ಜಿಲ್ಲೆಗಳಲ್ಲಿ ಇದ್ದು ಜಿಲ್ಲಾಡಳಿತದೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಬೆಂಗಳೂರು ನಗರದ ಉಸ್ತುವಾಗಿರಿಯನ್ನೇ ಯಡಿಯೂರಪ್ಪ ಅವರೇ ವಹಿಸಿಕೊಂಡಿದ್ದು, ಕೆಲ ಸಚಿವರಿಗೆ ಹಿಂದೆ ಇದ್ದಂತೆ ಎರಡು ಜಿಲ್ಲೆಗಳ ಉಸ್ತುವಾರಿ ಮುಂದುವರಿಸಿದ್ದಾರೆ. ಕೆಲವರನ್ನು ಬದಲಿಸಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.
ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಆರ್. ಅಶೋಕ್ ಬದಲಿಗೆ ನಾರಾಯಣಗೌಡ ಅವರಿಗೆ ನೀಡಲಾಗಿದೆ. ಸೋಮಣ್ಣ ಅವರನ್ನು ಕೇವಲ ಕೊಡಗಿಗೆ ಸೀಮಿತ ಮಾಡಿ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರಿನ ಹೊಣೆ ವಹಿಸಲಾಗಿದೆ. ಶಶಿಕಲಾ ಜೊಲ್ಲೆ ಅವರನ್ನು ಉತ್ತರ ಕನ್ನಡದಿಂದ ವಿಜಯಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಅಶ್ವತ್ಥನಾರಾಯಣ್ ಹಾಗೂ ಸುಧಾಕರ್ ನಡುವೆ ಉಸ್ತುವಾರಿಗೆ ನಡೆದಿದ್ದ ಜಿದ್ದಾಜಿದ್ದಿಗೆ ಕೊನೆಗಾಣಿಸಲಾಗಿದೆ. ಲಕ್ಷ್ಮಣ ಸವದಿ ಹಿಡಿತದಲ್ಲಿದ್ದ ಬಳ್ಳಾರಿಯ ಉಸ್ತುವಾರಿಯನ್ನು ಆನಂದಸಿಂಗ್ ಅವರಿಗೆ ನೀಡಲಾಗಿದೆ.
ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದವರ ಪೈಕಿ ರಮೇಶ್ ಜಾರಕಿಹೊಳಿ, ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ:ಬಿ.ಎಸ್.ಯಡಿಯೂರಪ್ಪ-ಬೆಂಗಳೂರುಡಾ.ಸಿ.ಎನ್.ಅಶ್ವತ್ಥನಾರಾಯಣ- ರಾಮನಗರಲಕ್ಷ್ಮಣ ಸವದಿ- ರಾಯಚೂರುಗೋವಿಂದ ಕಾರಜೋಳ-ಬಾಗಲಕೋಟೆ, ಕಲಬುರಗಿಕೆ.ಎಸ್. ಈಶ್ವರಪ್ಪ- ಶಿವಮೊಗ್ಗಆರ್.ಅಶೋಕ್- ಬೆಂಗಳೂರು ಗ್ರಾಮಾಂತರಜಗದೀಶ ಶೆಟ್ಟರ್- ಬೆಳಗಾವಿ, ಧಾರವಾಡಬಿ.ಶ್ರೀರಾಮುಲು- ಚಿತ್ರದುರ್ಗಎಸ್. ಸುರೇಶ್‌ಕುಮಾರ್- ಚಾಮರಾಜನಗರವಿ.ಸೋಮಣ್ಣ- ಕೊಡಗುಸಿ.ಟಿ.ರವಿ- ಚಿಕ್ಕಮಗಳೂರುಬಸವರಾಜ ಬೊಮ್ಮಾಯಿ- ಹಾವೇರಿ, ಉಡುಪಿಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನಸಿ.ಸಿ. ಪಾಟೀಲ್-ಗದಗಎಸ್. ನಾಗೇಶ್- ಕೋಲಾರಪ್ರಭು ಚವ್ಹಾಣ್- ಬೀದರ್, ಯಾದಗಿರಿಶಶಿಕಲಾ ಜೊಲ್ಲೆ- ವಿಜಯಪುರಶಿವರಾಮ ಹೆಬ್ಬಾರ್- ಉತ್ತರ ಕನ್ನಡಎಸ್.ಟಿ. ಸೋಮಶೇಖರ್- ಮೈಸೂರುಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರಕೆ.ಸಿ. ನಾರಾಯಣಗೌಡ- ಮಂಡ್ಯಆನಂದಸಿಂಗ್- ಬಳ್ಳಾರಿಬಿ.ಎ. ಬಸವರಾಜು- ದಾವಣಗೆರೆಬಿ.ಸಿ. ಪಾಟೀಲ್- ಕೊಪ್ಪಳ
ಖಾಸಗಿ ವಾಹನಕ್ಕೆ ಪೊಲೀಸ್ ಲೇಬಲ್ ಅಂಟಿಸಿ ಓಡಾಟ: ಮಹಾರಾಷ್ಟ್ರ ಆರ್​ಟಿಒ ಅಧಿಕಾರಿ ಪತ್ನಿಯ ಕಾರು ಸೀಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
